ಇಂದಿನ ಪಂಚಾಗ ಮತ್ತು ರಾಶಿಫಲ (15-09-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :  ಪರಿಶುದ್ಧತೆ , ತ್ಯಾಗ, ಶೌರ್ಯ, ಸುಖದುಃಖಗಳಲ್ಲಿ ಒಂದೇ ರೀತಿ ಇರುವುದು, ದಾಕ್ಷಿಣ್ಯ, ಪ್ರೀತಿ, ಸತ್ಯಶೀಲತೆ -ಇವು ಸುಹೃಜ್ಞನರ ಗುಣಗಳು. -ಹಿತೋಪದೇಶ, ಮಿತ್ರಲಾಭ

Rashi

ಪಂಚಾಂಗ :ಶನಿವಾರ 15.09.2018
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.21
ಚಂದ್ರ ಉದಯ ಬೆ.11.05 / ಚಂದ್ರ ಅಸ್ತ ರಾ.10.55
ವಿಲಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ : ಷಷ್ಠಿ (ಮ.02.45)
ನಕ್ಷತ್ರ:ಅನುರಾಧ (ರಾ.2.49) / ಯೋಗ: ವಿಷ್ಕಂಭ (ರಾ.10.54)
ಕರಣ: ತೈತಿಲ-ಗರಜೆ (ಮ.2.45-ರಾ.3.14)
ಮಳೆ ನಕ್ಷತ್ರ: ಉತ್ತರಫಲ್ಗುಣಿ / ಮಾಸ: ಸಿಂಹ / ತೇದಿ: 308

ಇಂದಿನ ವಿಶೇಷ : ಸೂರ್ಯ ಷಷ್ಠೀ

# ರಾಶಿ ಭವಿಷ್ಯ
ಮೇಷ : ನಿಮ್ಮ ಸೃಜನಶೀಲ ಪ್ರತಿಭೆ ಸರಿಯಾಗಿ ಬಳಸಿದಲ್ಲಿ ಅತ್ಯಂತ ಲಾಭದಾಯಕವಾಗಲಿದೆ.
ವೃಷಭ: ಪೂರ್ವಜರ ಆಸ್ತಿ ಕೈಸೇರಲಿದೆ.
ಮಿಥನ: ನೀವು ಹೂಡಿಕೆಯ ಬಗ್ಗೆ ಪರಿಶೀಲಿಸದಿದ್ದಲ್ಲಿ ನಷ್ಟ ಖಚಿತ.
ಕಟಕ: ಆರೋಗ್ಯಕ್ಕೆ ಸಂಬಂಧಿಸಿದಂತೆ ತಿನ್ನುವುದರ ಬಗ್ಗೆ ಜಾಗರೂಕರಾಗಿ.
ಸಿಂಹ: ಯಾರಲ್ಲೂ ವೈಯಕ್ತಿಕ – ಗೌಪ್ಯ ಮಾಹಿತಿ ಬಹಿರಂಗಪಡಿಸಬೇಡಿ.
ಕನ್ಯಾ: ಪ್ರೇಮಿಯಿಂದ ಸಮಸ್ಯೆ ಎದುರಿಸಲಿದ್ದೀರಿ.
ತುಲಾ: ನಿಮ್ಮ ತರಾತುರಿಯ ಹೂಡಿಕೆಯಿಂದ ಕುಟುಂಬದಲ್ಲಿ ಆತಂಕ.
ವೃಶ್ಚಿಕ: ಪರಿಸ್ಥಿತಿಗಳು ನಿಮ್ಮ ಪರವಾಗಿರಲಿದೆ.
ಧನುರ್: ಕೆಲಸದ ಆಲಸ್ಯ ದೂರಿವಿರಿಸಿದರೆ ಅಮೂಲ್ಯ ಜೀವನ ದೊರೆಯಲಿದೆ.
ಮಕರ: ಸೋದರನೊಂದಿಗೆ ಸಮಾಲೋಚನೆ ನಡೆಸುವ ಸಾಧ್ಯತೆ.
ಕುಂಭ: ಅಗತ್ಯ ವಸ್ತುಗಳ ಖರೀದಿಗಾಗಿ ದಿನವಿಡೀ ಸುತ್ತಾಟ.
ಮೀನ: ಆತುರದ ನಿರ್ಧಾರಗಳನ್ನು ಕೈಗೊಳ್ಳದಿರುವುದು ಒಳಿತು.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments

Sri Raghav

Admin