ದೇಶದಲ್ಲೇ ಅತಿಹೆಚ್ಚು ಏಡ್ಸ್ ರೋಗಿಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ 3ನೇ ಸ್ಥಾನ..!

ಈ ಸುದ್ದಿಯನ್ನು ಶೇರ್ ಮಾಡಿ

HIv
ಬೆಂಗಳೂರು,ಸೆ.15- ದೇಶದಲ್ಲೇ ಅತಿಹೆಚ್ಚು ಎಚ್‍ಐವಿ ಹಾಗೂ ಏಡ್ಸ್ ರೋಗಿಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ 3ನೇ ಸ್ಥಾನ ಪಡೆದಿದೆ.
ದೇಶದಲ್ಲಿ ಒಟ್ಟು 21.4 ಲಕ್ಷ ಎಚ್‍ಐವಿ ಪೀಡಿತ ರೋಗಿಗಳಿದ್ದು, ಮಹಾರಾಷ್ಟ್ರ (3.3 ಲಕ್ಷ ), ಆಂಧ್ರ ಪ್ರದೇಶ (2.7 ಲಕ್ಷ) ಹಾಗೂ ಕರ್ನಾಟಕ 2.5 ಲಕ್ಷ ರೋಗಿಗಳಿದ್ದಾರೆ ಎಂದು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಘಟನೆ ಬಹಿರಂಗಪಡಿಸಿದೆ.

ಉತ್ತರಭಾರತದ ರಾಜ್ಯಗಳಲ್ಲಿ ಎಚ್‍ಐವಿ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದರೂ ಈಶಾನ್ಯ ರಾಜ್ಯ ಮತ್ತು ಉತ್ತರ್‍ಖಂಡ್ ರಾಜ್ಯಗಳಲ್ಲಿ ಈ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.  ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮಿಜೋರಾಂ, ಮೇಘಾಲಯ ಹಾಗೂ ಉತ್ತರಖಂಡ್‍ನಲ್ಲಿ ಕಳೆದೆರಡು ವರ್ಷಗಳಿಂದ ಎಚ್‍ಐವಿ ಪೀಡಿತರ ಸಂಖ್ಯೆ ಇಳಿಕೆಯಾಗಿದೆ.  ಕೇಂದ್ರಾಡಳಿತ ಪ್ರದೇಶಗಳಲ್ಲೂ ಎಚ್‍ಐವಿ ಕಡಿಮೆ ಯಾಗುತ್ತಿದ್ದು, ಬಿಹಾರ, ಪಶ್ಚಿಮ ಬಂಗಾಳ, ತೆಲಂಗಾಣ, ದೆಹಲಿ, ಜಾರ್ಖಂಡ್, ಹರಿಯಾಣ ಸೇರಿದಂತೆ ಮತ್ತಿತರ ರಾಜ್ಯಗಳಲ್ಲಿ ಇದನ್ನು ತಡೆಗಟ್ಟಲು ಸರ್ಕಾರ ತೆಗೆದುಕೊಂಡಿರುವ ಕಠಿಣ ಕ್ರಮಗಳಿಂದ ನಿಯಂತ್ರಣಕ್ಕೆ ಬಂದಿದೆ.  ವಿಶೇಷವೆಂದರೆ ಮೊದಲ ನಾಲ್ಕು ಸ್ಥಾನಗಳಲ್ಲಿ ದಕ್ಷಿಣ ಭಾರತದ ಆಂಧ್ರಪ್ರದೇಶ , ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲೇ ಎಚ್‍ಐವಿ ಬಾಧಿತರ ಸಂಖ್ಯೆ ಇದೆ.

ಸಾಕ್ಷರತೆ ಹಾಗೂ ಆರ್ಥಿಕವಾಗಿ ಹಿಂದುಳಿದ ರಾಜ್ಯಗಳೆಂದು ಪರಿಗಣಿಸಲ್ಪಟ್ಟಿರುವ ಬಿಹಾರ, ಜಾರ್ಖಂಡ್, ಛತ್ತೀಸ್‍ಗಢ, ಮಧ್ಯಪ್ರದೇಶ ಸೇರಿದಂತೆ ಮತ್ತಿತರ ಕಡೆ ಈ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏಡ್ಸ್ ರೋಗದ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತ ಶಿಬಿರಗಳನ್ನು ಆಯೋಜಿಸುತ್ತಿರುವುದು ಹಾಗೂ ಯುವ ಜನಾಂಗ ಈ ಮಾರಕ ಕಾಯಿಲೆಗೆ ತುತ್ತಾಗದೆ ಎಚ್ಚರ ವಹಿಸುತ್ತಿರುವ ಪರಿಣಾಮ ದೇಶಾದ್ಯಂತ ಈ ಸಂಖ್ಯೆ ಇಳಿಕೆಯಾಗುತ್ತಾ ಬಂದಿದೆ.  ಆದರೂ ಇನ್ನಷ್ಟು ಕಠಿಣವಾದ ಕ್ರಮಗಳನ್ನು ತೆಗೆದು ಕೊಳ್ಳಬೇಕಾದ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಸಲಹೆ ಮಾಡಿದೆ.

Facebook Comments

Sri Raghav

Admin