ಮಲ್ಯ ಹೇಳಿಕೆ : ಸಿಬಿಐ ತನಿಖೆಗೆ ಕೇಂದ್ರ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

Arun-Jetly

ನವದೆಹಲಿ(ಪಿಟಿಐ),ಸೆ.15-ದೇಶ ಬಿಟ್ಟು ಹೋಗುವ ಮುನ್ನ ಹಣಕಾಸು ಸಚಿವ ಅರುಣ್ ಜೇಟ್ಲಿಯವರನ್ನು ಭೇಟಿಯಾಗಿದ್ದೆ ಎಂಬ ವಿಜಯ್ ಮಲ್ಯ ಹೇಳಿಕೆ ವ್ಯಾಪಕ ಚರ್ಚೆ ಪಡೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ಎನ್‍ಡಿಎ ಸರ್ಕಾರ ಸಿಬಿಐ ತನಿಖೆಗೆ ಮುಂದಾಗಿದೆ.  ಪ್ರತಿಪಕ್ಷ ಕಾಂಗ್ರೆಸ್ ಎನ್‍ಡಿಎ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮಾಡಿದ ಬೆನ್ನಲ್ಲೇ ಬಿಜೆಪಿ ಈ ಕ್ರಮಕ್ಕೆ ಮುಂದಾಗಿದ್ದು, ಈ ನಡುವೆ ಸಿಬಿಐ, ಯುಪಿಎ ಸರ್ಕಾರದ ಕಾಲದಲ್ಲಿ ಮಲ್ಯ ಅವರ ಕಿಂಗ್ ಫಿಶರ್ ಏರ್ ಲೈನ್ಸ್‍ಗೆ ಸಾರ್ವಜನಿಕ ಬ್ಯಾಂಕುಗಳು ವಿತರಿಸಿದ್ದ ಸಾಲಗಳಲ್ಲಿ ಹಣಕಾಸು ಇಲಾಖೆಯ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ಆರಂಭಿಸಿದೆ. ಸಿಬಿಐ ಹೊಸ ಆರೋಪ ಪಟ್ಟಿಯನ್ನು ದಾಖಲಿಸುವ ನಿರೀಕ್ಷೆಯಿದ್ದು, ಈಗಾಗಲೇ ಹಣಕಾಸು ಸಚಿವಾಲಯವನನ್‍ಉ ಸಂಪರ್ಕಿಸಿ ದಾಖಲಾತಿಗಳನ್ನು ಸಂಗ್ರಹಿಸಿದೆ. ಈ ದಾಖಲೆಗಳನ್ನು ಪರಿಶೀಲಿಸಿ, ಈಗಾಗಲೇ ಯುಪಿಎ ಅವಧಿಯಲ್ಲಿನ ಕೆಲ ಅಧಿಕಾರಿಗಳನ್ನು ಪ್ರಶ್ನಿಸಲಾಗಿದೆ ಎನ್ನಲಾಗಿದೆ.

Facebook Comments

Sri Raghav

Admin