ದೇಶ ನಡೆಸಲು ಹಣವಿಲ್ಲ, ಇದು ಅಲ್ಲಾ ಸೃಷ್ಟಿಸಿದ ಬಿಕ್ಕಟ್ಟು : ಪಾಕ್ ಪ್ರಧಾನಿ

ಈ ಸುದ್ದಿಯನ್ನು ಶೇರ್ ಮಾಡಿ

Imran-Khan--01

ಇಸ್ಲಾಮಾಬಾದ್, ಸೆ.12-ದೇಶವನ್ನು ನಡೆಸಲು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್(ಪಿಟಿಐ) ನೇತೃತ್ವದ ಸರ್ಕಾರದ ಬಳಿ ಹಣವಿಲ್ಲ. ಇದು ಅಲ್ಲಾ ಸೃಷ್ಟಿಸಿರುವ ಬಿಕ್ಕಟ್ಟು ಎಂದು ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ರಾಜಧಾನಿ ಇಸ್ಲಾಮಾಬಾದ್‍ನಲ್ಲಿ ಕೇಂದ್ರ ಸರ್ಕಾರದ ಉನ್ನತಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಆಡಳಿತ ನಡೆಸಿದ್ದ ನವಾಜ್ ಷರೀಪ್ ಸರ್ಕಾರ ದೇಶದ ಸಂಪತ್ತನ್ನು ಹೆಚ್ಚಿಸುವ ಬದಲು ಭಾರೀ ನಷ್ಟ ಉಂಟು ಮಾಡುವ ಯೋಜನೆಗಳನ್ನು ಕೈಗೊಂಡು ರಾಷ್ಟ್ರದ ಆರ್ಥಿಕತೆಗೆ ಭಾರೀ ಹಾನಿ ಮಾಡಿದೆ ಎಂದು ಆರೋಪಿಸಿದರು.

ದೇಶದ ಜನಸಂಖ್ಯೆ ಬಹುಪಾಲು ಮಂದಿ ಯುವಜನಾಂಗದವರೇ ಆಗಿದ್ದಾರೆ. ಅವರು ಉದ್ಯೋಗಗಳನ್ನು ಎದುರು ನೋಡುತ್ತಿದ್ದಾರೆ. ನಮ್ಮ ದೇಶವು ಆದಷ್ಟೂ ಬೇಗ ಸಾಲದ ಹೊರೆಯಿಂದ ಮುಕ್ತವಾಗಬೇಕಿದೆ ಎಂದು ಅವರು ಹೇಳಿದರು.

ನಮ್ಮ ಸರ್ಕಾರ ಜನರ ಹೊಣೆಯನ್ನು ನಿಬಾಯಿಸಬೇಕಿದೆ. ಅದೇ ರೀತಿ ಪ್ರಜೆಗಳೂ ಕೂಡ ಸರ್ಕಾರ ನಮ್ಮದೆಂಬ ಭಾವನೆ ಬೆಳಸಿಕೊಳ್ಳಬೇಕು. ದೇವರೇ ಈ ಬಿಕ್ಕಟ್ಟನ್ನು ಸೃಷ್ಟಿಸಿರಬಹುದು. ಏಕೆಂದರೆ ನಾವು ಬದಲಾಗಬೇಕೆಂದು ಅಲ್ಲಾ ಬಯಸಿರಬೇಕು ಎಂದು ಇಮ್ರಾನ್ ಖಾನ್ ಹೇಳಿದರು.

Facebook Comments

Sri Raghav

Admin