ವಿಮಾನದಲ್ಲಿ ಸೊಳ್ಳೆಕಾಟ ಎಂದು ದೂರು ನೀಡಿದ್ದ ವಕೀಲರಿಗೆ ತಲಾ 40,000 ರೂ. ಪರಿಹಾರ

ಈ ಸುದ್ದಿಯನ್ನು ಶೇರ್ ಮಾಡಿ

Indigo--011

ನವದೆಹಲಿ,ಸೆ.16- ಇಂಡಿಗೊ ವಿಮಾನದಲ್ಲಿ ಸೊಳ್ಳೆ ಕಾಟದ ಬಗ್ಗೆ ದೂರು ನೀಡಿದ್ದ ಪಂಜಾಬ್ ಮೂಲದ ಮೂವರು ವಕೀಲರಿಗೆ ವಿಮಾನಯಾನ ಸಂಸ್ಥೆಯು ತಲಾ 40,000 ರೂ. ಪರಿಹಾರ ನೀಡುವಂತೆ ಅಮೃತಸರದ ಗ್ರಾಹಕ ನ್ಯಾಯಾಲಯ ಆದೇಶಿಸಿದೆ. ವಕೀಲರು ಕಳೆದ ಏಪ್ರಿಲ್‍ನಲ್ಲಿ ದೆಹಲಿಯಿಂದ ಅಮೃತಸರಕ್ಕೆ ವಿಮಾನದಲ್ಲಿ ಪ್ರಯಾಣ ಮಾಡಿದ್ದರು.

ವಿಮಾನದಲ್ಲಿ ಸೊಳ್ಳೆ ಕಡಿತದ ಅನುಭವಾಗಿದ್ದ ವಕೀಲರು ಈ ಬಗ್ಗೆ ಸಿಬ್ಬಂದಿಗೆ ದೂರು ನೀಡಿದ್ದರು. ದೂರು ನೀಡಿದ ನಂತರವೂ ಸಿಬ್ಬಂದಿಗಳು ನಿರ್ಲಕ್ಷ್ಯ ವಹಿಸಿದ್ದರು.   ನಂತರ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ದೂರು ನೀಡಿದರೂ ಅವರು ದಿವ್ಯ ನಿರ್ಲಕ್ಷ್ಯವಹಿಸಿದ್ದರಿಂದ ಈ ಮೂವರು ವಕೀಲರು ಅಮೃತಸರದ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದರು.

ಈಗ ಅಮೃತಸರದ ನ್ಯಾಯಾಲಯ ವಿಮಾನಯಾನ ಸಂಸ್ಥೆಗೆ ಪರಿಹಾರ ನೀಡುವಂತೆ ಆದೇಶಿಸಿದ್ದು, ಮೂವರಿಗೂ ತಲಾ 40000 ರೂ. ನೀಡುವಂತೆ ಸೂಚನೆ ನೀಡಿದೆ.

Facebook Comments

Sri Raghav

Admin