ಮೊಟ್ಟ ಮೊದಲಿಗೆ ಕೇಂದ್ರೀಯ ವಿವಿಗಳ ಸಾಧನೆಯ ಮೌಲ್ಯಮಾಪನ

ಈ ಸುದ್ದಿಯನ್ನು ಶೇರ್ ಮಾಡಿ

University
ನವದೆಹಲಿ, ಸೆ.16- ದೇಶಾದ್ಯಂತ ಇರುವ ಎಲ್ಲ ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಸಾಧನೆಯ ಮೌಲ್ಯಮಾಪನಕ್ಕೆ ಮೊಟ್ಟ ಮೊದಲ ಬಾರಿಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮುಂದಾಗಿದೆ. ಅಕ್ಟೋಬರ್‍ನಲ್ಲಿ ಮೌಲ್ಯಮಾಪನ ನಡೆಸಲಾಗುತ್ತಿದ್ದು, ಇದರ ಆಧಾರದಲ್ಲಿ ಕೇಂದ್ರೀಯ ವಿವಿಗಳು ಸರ್ಕಾರದಿಂದ ಅನುದಾನ ಪಡೆಯಲಿವೆ.

ಇದುವರೆಗೆ ಸಾಧಿಸಿದ ಶೈಕ್ಷಣಿಕ ಪ್ರಗತಿಯ ವಿವರಗಳನ್ನು ತಕ್ಷಣ ಒದಗಿಸುವಂತೆ ಎಲ್ಲ ಕೇಂದ್ರೀಯ ವಿವಿಗಳಿಗೆ ಸಚಿವಾಲಯ ಸೂಚಿಸಿದೆ. ಪ್ರತಿ ಕೋರ್ಸ್‍ಗಳಲ್ಲಿ ವೇಳಾಪಟ್ಟಿಯ ಅನುಸಾರ ವಾಸ್ತವವಾಗಿ ನಡೆದ ತರಗತಿಗಳ ವಿವರ, ಪಠ್ಯಕ್ರಮದ ಪೈಕಿ ಆಗಿರುವ ಪಾಠದ ಪ್ರಮಾಣ, ಪರೀಕ್ಷೆಯ ವೇಳಾಪಟ್ಟಿ ಮತ್ತು ವಾಸ್ತವವಾಗಿ ನಡೆದ ಪರೀಕ್ಷೆ ಹಾಗೂ ಪರೀಕ್ಷಾ ಫಲಿತಾಂಶ ಘೋಷಣೆ ವಿವರಗಳನ್ನು ಕೇಳಲಾಗಿದೆ.
ಸೆಪ್ಟೆಂಬರ್ 7ರಂದು ಎಲ್ಲ ಕೇಂದ್ರೀಯ ವಿವಿಗಳಿಗೆ ಬರೆದ ಪತ್ರದ ಪ್ರತಿ ಲಭ್ಯವಾಗಿದೆ. ಜುಲೈನಿಂದ ಸೆಪ್ಟೆಂಬರ್‍ವರೆಗಿನ ಅವಧಿಯಲ್ಲಿ ಸ್ವೀಕರಿಸಿದ ದೂರುಗಳ ಬಗೆಗಿನ ಮಾಹಿತಿ ಹಾಗೂ ಅವುಗಳ ಪೈಕಿ ಪರಿಹಾರವಾದ ದೂರುಗಳ ಸಂಖ್ಯೆಯ ವಿವರಗಳನ್ನೂ ಕೇಳಲಾಗಿದೆ.

ವಿಶ್ವವಿದ್ಯಾನಿಲಯಗಳು, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ನಡುವೆ ಮಾಡಿಕೊಂಡಿರುವ ಒಪ್ಪಂದಕ್ಕೆ ಅನುಗುಣವಾಗಿ ಈ ಮËಲ್ಯಮಾಪನ ನಡೆಯುತ್ತಿದೆ.

Facebook Comments

Sri Raghav

Admin