ಲೈಂಗಿಕ ಕಿರುಕುಳ ಕಳಂಕ ತೊಡೆದು ಹಾಕಲು ದಲೈಲಾಮಾ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

Dalai-Lama--01

ಹಗ್, ಸೆ.16- ಕಳೆದ 1990ರಿಂದ ಬೌದ್ಧ ಶಿಕ್ಷಕರು ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿರುವ ವಿಚಾರ ನನಗೆ ತಿಳಿದಿದೆ. ಇದರಲ್ಲಿ ಹೊಸತೇನು ಇಲ್ಲ ಎಂದು ಬೌದ್ಧ ಧರ್ಮ ಗುರು ದಲೈಲಾಮಾ ಅಭಿಪ್ರಾಯಪಟ್ಟಿದ್ದಾರೆ.

ನಾಲ್ಕು ದಿನಗಳ ನೆದರ್ ಲ್ಯಾಂಡ್ ಪ್ರವಾಸದಲ್ಲಿರುವ ದಲೈಲಾಮಾ ಅವರು ಬೌದ್ಧ ಶಿಕ್ಷಕರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವವರನ್ನು ಭೇಟಿ ಮಾಡಿದ್ದೆ ಎಂದು ಅವರು ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ಯುರೋಪ್ ಪ್ರವಾಸದಲ್ಲಿದ್ದ ನನಗೆ ನೂರಾರು ಸಂತ್ರಸ್ತರು ದೂರವಾಣಿ ಕರೆ ಮಾಡಿ ತಮ್ಮ ಮೇಲಾದ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾತ್ರವಲ್ಲ ಪ್ರಕರಣ ದಾಖಲಿಸುವ ಬಗ್ಗೆಯೂ ನನ್ನಿಂದ ಸಲಹೆ ಪಡೆದಿದ್ದಾರೆ ಎಂದು ದಲೈಲಾಮಾ ಹೇಳಿದರು.

25 ವರ್ಷಗಳ ಹಿಂದೆ ಧರ್ಮಶಾಲಾ ದಲ್ಲಿ ನಡೆದ ಬೌದ್ಧ ಸಮಾವೇಶದಲ್ಲೂ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಪ್ರಸ್ತಾಪಿಸ ಲಾಗಿತ್ತು. ಅಂದಿನಿಂದಲೂ ಲೈಂಗಿಕ ಕಿರುಕುಳ ಎಂಬ ಕಳಂಕ ಮುಂದು ವರೆದುಕೊಂಡೇ ಬಂದಿದೆ ಎಂದು ಅವರು ವಿಷಾದಿಸಿದರು. ಬೌದ್ಧ ಧರ್ಮಕ್ಕೆ ಕಂಟಕವಾಗಿರುವ ಇಂತಹ ಕಳಂಕವನ್ನು ತೊಡೆದು ಹಾಕಲು ಬೌದ್ಧ ಧರ್ಮ ಗುರುಗಳು ಹೆಚ್ಚು ಆದ್ಯತೆ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡರು.

Facebook Comments

Sri Raghav

Admin