ಸಮ್ಮಿಶ್ರ ಸರ್ಕಾರ ಬಿದ್ದರೆ ಅದಕ್ಕೆ ನಾವು ಕಾರಣರಲ್ಲ : ಸತೀಶ ಜಾರಕಿಹೊಳಿ

ಈ ಸುದ್ದಿಯನ್ನು ಶೇರ್ ಮಾಡಿ

Satish-Jarakihole
ಬೆಳಗಾವಿ, ಸೆ.16-ಸಮ್ಮಿಶ್ರ ಸರ್ಕಾರ ಬಿದ್ದರೆ ಅದಕ್ಕೆ ಜಾರಕಿ ಹೊಳಿ ಬ್ರದರ್ಸ್ ಕಾರಣವಲ್ಲ. ಆದರೆ ನಮ್ಮ ಸರಕಾರ ಸುಭದ್ರವಾಗಿ 5 ವರ್ಷಗಳ ಕಾಲ ಆಡಳಿತ ನಡೆಸಲಿದೆ ಎಂಬ ವಿಶ್ವಾಸವನ್ನು ಶಾಸಕ ಸತೀಶ ಜಾರಕಿಹೊಳಿ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋದ್ರು ಹೋಗಬಹುದು.ಈ ಹಿಂದೆನೂ ನಮ್ಮ ಶಾಸಕರು ಬಿಜೆಪಿಗೆ ಹೋಗಿದ್ದರು.

ನಮ್ಮ ಬೇಡಿಕೆ ಬೆಳಗಾವಿಗೆ ಬೇರೆ ನಾಯಕರು ಎಂಟ್ರಿ ಆಗಬಾರದು ಎಂಬುದಾಗಿತ್ತು. ಆ ಬೇಡಿಕೆ ಈಡೇರಿದೆ, ಈಗ ನಮ್ಮಲ್ಲಿ ಒಡಕು ಇಲ್ಲ ಎಂದು ಹೇಳಿದರು. ರಾಜ್ಯಕ್ಕೆ ವೇಣುಗೋಪಾಲ್ ಬಂದಿದ್ದಾರೆ. ಅವರನ್ನು ನಾಳೆ ಭೇಟಿಯಾಗಲು ಬೆಂಗಳೂರಿಗೆ ತೆರಳುವೆ. ಸಚಿವ ರಮೇಶ ಜಾರಕಿಹೊಳಿಯವರು ಕೂಡ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರನ್ನು ಭೇಟಿಯಾಗಲಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಹೇಳಿಕ್ಕೊಳ್ಳಲಿಕ್ಕೆ ಯಾವುದೇ ಸಮಸ್ಯೆ ಇಲ್ಲ. ಅವರನ್ನು ಭೇಟಿಯಾಗುವ ಅವಶ್ಯಕತೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಡಿ ಕೆ ಶಿವಕುಮಾರ ಮತ್ತು ರಮೇಶ ಜಾರಕಿಹೊಳಿ ಇಬ್ಬರು 20 ವರ್ಷದಿಂದ ಒಂದೇ ಗರಡಿ ಮನೆಯಲ್ಲಿ ಕುಸ್ತಿ ಆಡಿದವರು. ಸರಕಾರ ಪತನವಾದರೂ ಆಗಬಹುದು, ನಾವಂತೂ ಕಾಂಗ್ರೆಸ್‍ಬಿಟ್ಟು ಹೋಗಲ್ಲ. ಈಗಾಗಲೆ ಫೋನಿನಲ್ಲೆ ಚರ್ಚೆ ಮಾಡಲಾಗಿದೆ ಎಂದರು.

Facebook Comments

Sri Raghav

Admin