ಸೀಮಾ ಅವಾರ್ಡ್ಸ್ 2018 : 5 ಪ್ರಶಸ್ತಿ ಬಾಚಿಕೊಂಡ ‘ರಾಜಕುಮಾರ’

ಈ ಸುದ್ದಿಯನ್ನು ಶೇರ್ ಮಾಡಿ

Siima-Awards--01

ಬೆಂಗಳೂರು, ಸೆ.16- ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ರಾಜಕುಮಾರ ಚಲನಚಿತ್ರಕ್ಕೆ ವಿವಿಧ ವಿಭಾಗಗಳಲ್ಲಿ ಪ್ರತಿಷ್ಠಿತ 5 ಸೀಮಾ ಪ್ರಶಸ್ತಿಗಳು ಲಭಿಸಿವೆ. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ನಿರ್ದೇಶನ, ಸಂಗೀತ, ಸಾಹಿತ್ಯ ಸೇರಿ ಒಟ್ಟು ಐದು ಪ್ರಶಸ್ತಿಗಳು ರಾಜಕುಮಾರ ಚಿತ್ರಕ್ಕೆ ಲಭಿಸಿವೆ.  ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ರಾಜಕುಮಾರ ಚಿತ್ರದ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಅವರ ಪಾಲಾಗಿದೆ. ಅತ್ಯುತ್ತಮ ನಟ ಪ್ರಶಸ್ತಿಗೆ ಮುಫ್ತಿ ಚಿತ್ರದ ಅಭಿನಯಕ್ಕಾಗಿ ಶಿವರಾಜ್‍ಕುಮಾರ್, ರಾಜಕುಮಾರ ಚಿತ್ರದ ಅಭಿನಯಕ್ಕಾಗಿ ಪುನೀತ್ ರಾಜ್‍ಕುಮಾರ್, ಮುಫ್ತಿ ಚಿತ್ರದ ನಟನೆಗಾಗಿ ಮುರಳಿ, ಚಮಕ್ ಚಿತ್ರದ ಅಭಿನಯಕ್ಕಾಗಿ ಗಣೇಶ್, ಭರ್ಜರಿ ಚಿತ್ರದ ನಟನೆಗಾಗಿ ಧ್ರುವ ಸರ್ಜಾ ಅವರಿಗೆ ಲಭಿಸಿದೆ.

DnMhG6NUwAAVlLh

ಆಪರೇಷನ್ ಅಲಮೇಲಮ್ಮ ಚಿತ್ರದ ಅಭಿನಯಕ್ಕಾಗಿ ಶ್ರದ್ದಾ ಶ್ರೀನಾಥ್, ಸುದ್ದಿ ಚಿತ್ರದ ನಟನೆಗಾಗಿ ನಿವೇದಿತಾ, ತಾರಕ್ ಚಿತ್ರದ ಅಭಿನಯಕ್ಕಾಗಿ ಶಾನ್ವಿ ಶ್ರೀವಾಸ್ತವ, ಚಮಕ್ ಚಿತ್ರದ ನಟನೆಗಾಗಿ ರಶ್ಮಿಕಾ ಮಂದಣ್ಣ, ಬ್ಯೂಟಿಫುಲ್ ಮನಸುಗಳು ಚಿತ್ರದ ಅಭಿನಯಕ್ಕಾಗಿ ಶೃತಿ ಹರಿಹರನ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿವೆ.

ಪೋಷಕ ನಟನೆಗಾಗಿ ಕನ್ನಡದ ಚೌಕಿ ಚಿತ್ರದ ಕಾಶಿನಾಥ್ ಅವರಿಗೆ ಹಾಗೂ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸತ್ಯ ಹರಿಶ್ಚಂದ್ರ ಚಿತ್ರದ ಭಾವನಾ ರಾವ್ ಅವರಿಗೆ ಲಭಿಸಿದೆ. ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ರಾಜ್ ಕುಮಾರ್ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ವಿ.ಹರಿಕೃಷ್ಣ ಅವರಿಗೆ ಹಾಗೂ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ ರಾಜ್ ಕುಮಾರ್ ಚಿತ್ರಕ್ಕಾಗಿ ಸಂತೋಷ್ ಆನಂದರಾಮ್ ಅವರ ಪಾಲಾಗಿದೆ. ಹಿನ್ನೆಲೆ ಗಾಯಕ ಪ್ರಶಸ್ತಿಗೆ ಅಂಜನಿಪುತ್ರ ಚಿತ್ರದ ರವಿ ಬಸ್ರೂರು ಅವರಿಗೆ ಲಭಿಸಿದೆ. ಹಿನ್ನೆಲೆ ಗಾಯಕಿ ಪ್ರಶಸ್ತಿ ಚೌಕ ಚಿತ್ರದ ಅಪ್ಪಾ ಐ ಲವ್ ಯೂ ಹಾಡಿಗೆ ಅನುರಾಧ ಭಟ್ ಅವರಿಗೆ ಲಭಿಸಿದೆ.

DnMe0hbUcAEIuY9

ಅತ್ಯುತ್ತಮ ನಕಾರಾತ್ಮಕ ಪಾತ್ರದ ಪ್ರಶಸ್ತಿ ಪಟಾಕಿ ಚಿತ್ರದ ನಟನೆಗಾಗಿ ಆಶಿಸ್ ವಿದ್ಯಾರ್ಥಿ ಅವರಿಗೆ ದೊರಕಿದೆ. ಚೊಚ್ಚಲ ನಟನೆಗಾಗಿ ಆಪರೇಷನ್ ಅಲಮೇಲಮ್ಮ ಚಿತ್ರದ ನಟನೆಗಾಗಿ ಮನೀಶ್ ರಿಶಿ ಅವರಿಗೆ ಹಾಗೂ ಚೊಚ್ಚಲ ನಟಿ ಪ್ರಶಸ್ತಿ ಸಿಲಿಕಾನ್ ಸಿಟಿ ನಟನೆಗಾಗಿ ಏಕ್ತಾ ರಾಥೋಡ್ ಅವರ ಪಾಲಾಗಿದೆ.  ಚೊಚ್ಚಲ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಚೌಕ ಚಿತ್ರಕ್ಕಾಗಿ ತರುಣ್ ಸುಧೀರ್ ಹಾಗೂ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಚಮಕ್ ಚಿತ್ರಕ್ಕಾಗಿ ಸಂತೋಷ್ ರೈ ಪತಾಜೆ ಹಾಗೂ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ ಹ್ಯಾಪಿ ನ್ಯೂ ಇಯರ್ ಚಿತ್ರದ ಸಾಯಿ ಕುಮಾರ್ ಅವರ ಪಾಲಾಗಿದೆ.

DnHDfsPW0AA7oIv DnLr1qzUYAAxoYY DnMhIPjV4AA1cnq

Facebook Comments

Sri Raghav

Admin