ಫಿಲಿಪ್ಪೈನ್ಸ್’ನಲ್ಲಿ ಬಿರುಗಾಳಿ ಸಹಿತ ಮಹಾ ಮಳೆಗೆ 25ಕ್ಕೂ ಹೆಚ್ಚು ಮಂದಿ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

Philiphnes--01

ಫಿಲಿಪ್ಪೈನ್ಸ್, ಸೆ.16- ಚೀನಾ ದಕ್ಷಿಣ ಪ್ರಾಂತ್ಯ ಹಾಗೂ ಫಿಲಿಪ್ಪೈನ್ಸ್ ನಲ್ಲಿ ಬಿರುಗಾಳಿ ಸಹಿತ ಮಹಾ ಮಳೆಗೆ 25ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು , ಕೋಟ್ಯಂತರ ರೂ. ಮೌಲ್ಯದ ಆಸ್ತಿ ನಷ್ಟವಾಗಿದೆ. ಬಿರುಗಾಳಿಗೆ ಮನೆ ಛಾವಣಿಗಳು ಹಾರಿ ಹೋಗಿದ್ದು , ಭೂ ಕುಸಿತಕ್ಕೆ 25ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು , ಇನ್ನು ಇತರರು ನಾಪತ್ತೆಯಾಗಿದ್ದು , ಶೋಧ ಕಾರ್ಯ ಮುಂದುವರೆದಿದೆ. ಬಿರುಗಾಳಿಯ ಅಬ್ಬರಕ್ಕೆ ಐದು ಮಿಲಿಯನ್‍ಗೂ ಹೆಚ್ಚು ಮಂದಿ ಮನೆ, ಮಠ ಕಳೆದುಕೊಂಡಿದ್ದಾರೆ.

ಹವಾಮಾನ ಇಲಾಖೆ ಅಧಿಕಾರಿಗಳು ಬಿರುಗಾಳಿ ಅಬ್ಬರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸಲು ಸೂಚಿಸಿದ್ದಾರೆ.
ಫಿಲಿಪ್ಪೈನ್ಸ್‍ನ ಮಾಂಕ್‍ಹಟ್ ಪ್ರದೇಶದಲ್ಲಿ ಬಿರುಗಾಳಿಯ ಅಬ್ಬರ ಮುಂದುವರೆದಿದ್ದು , ಅಲ್ಲಿನ ನಾಗರಿಕರು ತಮ್ಮ ಪ್ರಾಣ ಮತ್ತು ಆಸ್ತಿ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

20180915T103539Z_1_LYNXNPEE8E0AB_RTROPTP_4_ASIASTORM

ಹವಾಮಾನ ವೈಪರೀತ್ಯದಿಂದಾಗಿ 150ಕ್ಕೂ ಹೆಚ್ಚು ವಿಮಾನ ಯಾನ ರದ್ದುಗೊಂಡಿದೆ. ಇದರ ಪರಿಣಾಮ ಚೀನಾ ವಿದೇಶಾಂಗ ಸಚಿವರ ಫಿಲಿಪ್ಪೈನ್ಸ್ ಪ್ರವಾಸವು ರದ್ದಾಗಿದೆ. ಬಿರುಗಾಳಿಯ ಅಬ್ಬರಕ್ಕೆ ಉತ್ತರ ಫಿಲಿಪ್ಪೈನ್ಸ್, ಚೀನಾ ದಕ್ಷಿಣ ಪ್ರಾಂತ್ಯ , ಹಾಂಕಾಂಗ್ ತತ್ತರಿಸಿ ಹೋಗಿವೆ.   ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಪ್ರವಾಹ ಎದುರಾಗಿದ್ದು, ನೀರಿನ ರಭಸಕ್ಕೆ ರೈತರು ಬೆಳೆದ ಬೆಳೆಗಳು ಕೊಚ್ಚಿ ಹೋಗಿವೆ. ಮಾಂಕ್‍ಹಟ್ ಪ್ರದೇಶದಲ್ಲಿ ಬಿರುಗಾಳಿ ತೀವ್ರತೆ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ನದಿ ಮತ್ತು ಸಮುದ್ರ ತೀರದ ಪ್ರದೇಶಗಳಿಗೆ ತೆರಳದಂತೆ ನಾಗರಿಕರಿಗೆ ಎಚ್ಚರಿಕೆ ನೀಡಲಾಗಿದೆ.

image

ಬಿರುಗಾಳಿಯ ಬಗ್ಗೆ ಎಚ್ಚರಿಕೆ ನೀಡಿದ್ದರೂ ತಕ್ಷಣ ಪ್ರವಾಹ ಪೀಡಿತ ಪ್ರದೇಶದಿಂದ ತೆರಳಲು ಮೀನಾ ಮೇಷ ಎಣಿಸಿದ ಪರಿಣಾಮ ದಂಪತಿ ತಮ್ಮ ಎರಡು ವರ್ಷದ ಕಂದಮ್ಮನನ್ನು ಕಳೆದುಕೊಳ್ಳುವಂತಾಗಿದೆ. ಈಗಾಗಲೇ 25ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು , ಸಾವನ್ನಪ್ಪಿರುವ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆದಾಗ್ಯೂ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ಫಿಲಿಪ್ಪೈನ್ಸ್ ಅಧ್ಯಕ್ಷರ ಸಲಹೆಗಾರ ಫ್ರಾನ್ಸಿಸ್ ಟೊಲೆಂಟೈನೋ ತಿಳಿಸಿದ್ದಾರೆ.  ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು , ಇದುವರೆಗೂ 87 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ತಲುಪಿಸಲಾಗಿದೆ.

daily-sun-2018-09-16-31 philippines-asia-typhoon

Facebook Comments

Sri Raghav

Admin