ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ತಮ್ಮನನ್ನು ಕೊಂದ ಅಣ್ಣ….!

ಈ ಸುದ್ದಿಯನ್ನು ಶೇರ್ ಮಾಡಿ

Murder-v-01

ಬೆಂಗಳೂರು, ಸೆ.18- ಸಹೋದರರಿಬ್ಬರ ನಡುವೆ ನಡೆದ ಜಗಳ ತಮ್ಮನ ಕೊಲೆಯಲ್ಲಿ ಅಂತ್ಯವಾದ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ನಡೆದಿದೆ. ಬ್ಯಾಡರಹಳ್ಳಿಯ ತಾವರೆಕೆರೆಯ ಹೊನ್ನಗನಹಟ್ಟಿ ನಿವಾಸಿ ಜಗದೀಶ್ (23) ಕೊಲೆಯಾದ ವ್ಯಕ್ತಿ. ಆರೋಪಿ ಅಣ್ಣ ಮುನಿರಾಜು ತಲೆ ಮರೆಸಿಕೊಂಡಿದ್ದಾನೆ.

ಕಳೆದ ಒಂದು ತಿಂಗಳ ಹಿಂದೆಯಷ್ಟೇ ಜಗದೀಶ್ ಅವರಿಗೆ ಮದುವೆಯಾಗಿತ್ತು. ಪತ್ನಿಗೆ ಅಣ್ಣ ಮುನಿರಾಜು ಬೈದ ಹಿನ್ನೆಲೆಯಲ್ಲಿ ಜಗದೀಶ್, ಅಣ್ಣನೊಂದಿಗೆ ಜಗಳ ತೆಗೆದಿದ್ದ. ಇದೇ ವಿಷಯ ಕೊಲೆಗೆ ಕಾರಣ ಎನ್ನಲಾಗಿದೆ. ಮಾಗಡಿ ಮುಖ್ಯರಸ್ತೆಯ ಅಂಜನಾನಗರದ ಕೆಇಬಿ ರಸ್ತೆಯಲ್ಲಿರುವ ಅಣ್ಣ ಮುನಿರಾಜು ಮನೆಗೆ ಹೋಗಿದ್ದ ಜಗದೀಶ್ ಅಣ್ಣನೊಂದಿಗೆ ಜಗಳವಾಡಿ, ಆತನ ಕಾರಿನ ಗಾಜು ಪುಡಿ ಮಾಡಿದ್ದ. ಇದರಿಂದ ಆಕ್ರೋಶಗೊಂಡ ಮುನಿರಾಜು ನಾಲ್ಕನೇ ಮಹಡಿಯಿಂದ ಸಿಮೆಂಟ್ ಇಟ್ಟಿಗೆಯನ್ನು ತಮ್ಮನ ಮೇಲೆ ಎಸೆದಿದ್ದಾನೆ. ಇಟ್ಟಿಗೆ ತಲೆಗೆ ಬಿದ್ದು ಅಲ್ಲೇ ಕುಸಿದುಬಿದ್ದ ಜಗದೀಶ್‍ನನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.

ಘಟನೆ ಬಳಿಕ ಆರೋಪಿ ಮುನಿರಾಜು ತಲೆ ಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ.

Facebook Comments

Sri Raghav

Admin