ರಫೇಲ್ ಫೈಟರ್ ಜೆಟ್ ಖರೀದಿ ಒಪ್ಪಂದ ಕುರಿತ ಪಿಐಎಲ್ ವಿಚಾರಣೆ ಅ.10ಕ್ಕೆ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

China-Rafel-Jet
ನವದೆಹಲಿ, ಸೆ.18 (ಪಿಟಿಐ)- ಭಾರತ ಮತ್ತು ಫ್ರಾನ್ಸ್ ನಡುವಣ ಬಹುಕೋಟಿ ರೂ.ಗಳ ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆಯನ್ನು ಸುಪ್ರೀಂಕೋರ್ಟ್ ಅಕ್ಟೋಬರ್ 10ಕ್ಕೆ ಮುಂದೂಡಿದೆ.

ನ್ಯಾಯಮೂರ್ತಿಗಳಾದ ರಂಜನ್ ಗೊಗೈ, ನವೀನ್ ಸಿನ್ಹಾ ಮತ್ತು ಕೆ.ಎಂ.ಜೋಸೆಪ್ ಅವರನ್ನು ಒಳಗೊಂಡ ಪೀಠ ಇಂದು ಪಿಐಎಲ್ ಅರ್ಜಿ ವಿಚಾರಣೆ ನಡೆಸಿತು. ಆದರೆ ಈ ಪ್ರಕರಣದಲ್ಲಿ ಕೆಲವು ಹೆಚ್ಚುವರಿ ದಾಖಲೆಗಳ ಅಗತ್ಯವಿರುವ ಕಾರಣ ವಿಚಾರಣೆಯನ್ನು ಅ.10ಕ್ಕೆ ಮುಂದೂಡಿತು.

ನೀವು ಅನಾರೋಗ್ಯದ ಆಧಾರದ ಮೇಲೆ ಪ್ರಕರಣದ ವಿಚಾರಣೆಯನ್ನು ಮುಂದೂಡಬೇಕೆಂದು ಈ ಹಿಂದೆ ಮನವಿ ಮಾಡಿದ್ದೀರಿ. ಈಗ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಬೇಕಿದೆ ಎಂದು ಹೇಳುತ್ತಿರುವಿರಿ. ಆದ್ದರಿಂದ ಈ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ಪೀಠವು ಪ್ರತಿವಾದಿಗೆ ತಿಳಿಸಿತು. ಫ್ರಾನ್ಸ್ ಜೊತೆ ನಡೆದ ರಫೇಲ್ ಖರೀದಿ ಒಪ್ಪಂದದಲ್ಲಿ ಭಾರೀ ಅಕ್ರಮಗಳು ನಡೆದಿವೆ. ಆದ್ದರಿಂದ ಈ ವ್ಯವಹಾರಕ್ಕೆ ತಡೆ ನೀಡಬೇಕೆಂದು ವಕೀಲ ಎಂ.ಎಲ್. ಶರ್ಮ ಎಂಬುವರು ಸುಪ್ರೀಂಕೋರ್ಟ್‍ಗೆ ಪಿಐಎಲ್ ಸಲ್ಲಿಸಿದ್ದರು.

Facebook Comments

Sri Raghav

Admin