ಕೊಹ್ಲಿಗೆ ದೊರೆಯುವುದೇ ಖೇಲ್ ರತ್ನ..?

ಈ ಸುದ್ದಿಯನ್ನು ಶೇರ್ ಮಾಡಿ

Kohli-n
ನವದೆಹಲಿ, ಸೆ. 18- ಕ್ರಿಕೆಟ್ ಅಂಗಳ ಹಾಗೂ ಸಮಾಜಿಕ ತಾಣಗಳಲ್ಲಿ ಬೇಡಿಕೆಯ ಐಕಾನ್ ಆಗಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಈ ಬಾರಿಯಾದರೂ ಪ್ರತಿಷ್ಠಿತ ಖೇಲ್‍ರತ್ನ ಪ್ರಶಸ್ತಿ ಲಭಿಸುವುದೇ ಎಂಬ ಅನುಮಾನ ಮೂಡಿದೆ. ಕಳೆದ 3 ವರ್ಷಗಳಿಂದಲೂ ವಿರಾಟ್ ಕೊಹ್ಲಿ ಅವರ ಹೆಸರನ್ನು ಖೇಲ್‍ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗುತ್ತಿದೆಯಾದರೂ 2016ರಲ್ಲಿ ರಿಯೋ ಒಲಿಂಪಿಕ್ಸ್‍ನಲ್ಲಿ ಅಭೂತಪೂರ್ವ ಸಾಧನೆ ತೋರಿ ಭಾರತಕ್ಕೆ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದು ದೇಶದ ಕೀರ್ತಿ ಬೆಳಗಿದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹಾಗೂ ಜಿಮ್ನಾಸ್ಟಿಕ್ ದೀಪಾಕರ್ಮಾಕರ್, ಕುಸ್ತಿಪಟು ಸಾಕ್ಷಿಮಲ್ಲಿಕ್ ಅವರನ್ನು ಕೊನೆಯ ಕ್ಷಣದಲ್ಲಿ ಖೇಲ್‍ರತ್ನಕ್ಕೆ ಶಿಫಾರಸ್ಸು ಮಾಡಿದ್ದರಿಂದ ವಿರಾಟ್ ಕೊಹ್ಲಿ ಅವರ ಹೆಸರನ್ನು ಕೈ ಬಿಡಲಾಗಿತ್ತು.

2017ರಲ್ಲೂ ಕೊಹ್ಲಿ ಅವರ ಹೆಸರನ್ನು ಖೇಲ್‍ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿದರಾದರೂ ಹಾಕಿ ಪಟು ಸರ್ದಾರ್ ಸಿಂಗ್ ಹಾಗೂ ಪ್ಯಾರಾ ಅಥ್ಲೀಟ್ ದೇವೇಂದ್ರ ಜಾಜಾರಿಯಾ ಅವರಿಗೆ ಅದೃಷ್ಟ ಒಲಿದಿತ್ತು. ಕೊಹ್ಲಿಯ ಸಾಧನೆಯನ್ನು ಪರಿಗಣಿಸಿ ಈ ಬಾರಿಯು ಅವರ ಹೆಸರನ್ನು ಖೇಲ್‍ರತ್ನಗೆ ಶಿಫಾರಸ್ಸು ಮಾಡಿದ್ದು ಈ ಬಾರಿಯಾದರೂ ಕೊಹ್ಲಿಗೆ ಖೇಲ್‍ರತ್ನ ಪ್ರಶಸ್ತಿ ದೊರೆಯಲಿದೆ ಎಂದು ಅಂದಾಜಿಸಲಾಗಿದೆ.  ಕ್ರಿಕೆಟ್ ಜೀವನದಲ್ಲಿ ಮಹೋನ್ನತ ಸಾಧನೆ ತೋರಿದ್ದ ಸಚಿನ್‍ತೆಂಡೂಲ್ಕರ್ (1997) ಹಾಗೂ ಮಹೇಂದ್ರಸಿಂಗ್ ಧೋನಿ (2007)ಗೆ ಈಗಾಗಲೇ ಖೇಲ್ ರತ್ನ ಪ್ರಶಸ್ತಿ ಲಭಿಸಿದ್ದು , ಈಗಾಗಲೇ ಪದ್ಮಶ್ರೀ ಪ್ರಶಸ್ತಿ ಭಾಜನರಾಗಿರುವ ವಿರಾಟ್ ಕೊಹ್ಲಿ ಖೇಲ್‍ರತ್ನ ಪ್ರಶಸ್ತಿ ಪಡೆದ 3ನೆ ಕ್ರಿಕೆಟಿಗನಾಗಿ ಗುರುತಿಸಿಕೊಳ್ಳಲಿದ್ದಾರೆ.

Facebook Comments

Sri Raghav

Admin