ಕರ್ನಾಟಕದಲ್ಲಿದ್ದಾರೆ 203 ಶ್ರೀಮಂತ ಎಂಎಲ್‍ಎಗಳು..! ಇವರ ಆದಾಯ ಎಷ್ಟು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

MLA-Pilitioan-Money
ನವದೆಹಲಿ, ಸೆ.18-ಭಾರತದ ವಿವಿಧ ರಾಜ್ಯಗಳ ಶಾಸಕರ ಘೋಷಿತ ವಾರ್ಷಿಕ ವರಮಾನ ಸರಾಸರಿ 24.59 ಲಕ್ಷ ರೂ.ಗಳಾಗಿದ್ದು, ಕರ್ನಾಟಕ 203 ಶಾಸಕರು 11 ಕೋಟಿ ರೂ.ಗಳ ಗರಿಷ್ಠ ಆದಾಯ ಹೊಂದಿದ್ದಾರೆ. ಭಾರತದ ಪೂರ್ವ ಭಾಗದ 641 ಶಾಸಕರ ವಾರ್ಷಿಕ ಗಳಿಕೆ 8.5 ಲಕ್ಷ ರೂ.ಗಳ ಕನಿಷ್ಠ ಪ್ರಮಾಣದಲ್ಲಿದೆ.

ಎಡಿಆರ್ ಮತ್ತು ರಾಷ್ಟ್ರೀಯ ಚುನಾವಣಾ ಕಾವಲು ಸಂಸ್ಥೆ ಬಿಡುಗಡೆ ಮಾಡಿರುವ ಆದಾಯ ವಿಶ್ಲೇಷಣೆಯಲ್ಲಿ ಕೆಲವು ಕುತೂಹಲ ಸಂಗತಿಗಳೂ ಇವೆ. 8ನೇ ತರಗತಿವರೆಗೆ ಮಾತ್ರ ಓದಿರುವ ಶಾಸಕರು ಗರಿಷ್ಠ ವರಮಾನ ಹೊಂದಿದ್ದಾರೆ. ಅವರ ವಾರ್ಷಿಕ ಆದಾಯ ಸರಾಸರಿ 89.9 ಲಕ್ಷ ರೂ.ಗಳು. ಪದವಿ ಮತ್ತು ಸ್ನಾತಕೋತ್ತರ ಪದವಿ ಹೊಂದಿರುವ ಎಂಎಲ್‍ಎಗಳ ವಾರ್ಷಿಕ ಗಳಿಕೆ ಸರಾಸರಿ 19.8 ಲಕ್ಷ ರೂ.ಗಳು ಎಂಬುದು ಅಚ್ಚರಿಯ ಸಂಗತಿ. ಅನಕ್ಷರಸ್ಥ ಶಾಸಕರ ಘೋಷಿತ ವಾರ್ಷಿಕ ವರಮಾನ ಸರಾಸರಿ 9.3 ಲಕ್ಷ ರೂ.ಗಳು.

ವಿವಿಧ ರಾಜ್ಯಗಳ 941 ಶಾಸಕರು ತಮ್ಮ ಆದಾಯವನ್ನು ಘೋಷಣೆ ಮಾಡಿಲ್ಲ. ಈಗಾಗಿ ಅವರ ಗಳಿಕೆಯನ್ನು ವಿಶ್ಲೇಷಣೆ ಮಾಡಲಾಗಿಲ್ಲ.  ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣ ಭಾಗದಲ್ಲಿ ಅದರಲ್ಲೂ ಕರ್ನಾಟಕ ಶಾಸಕರ ವಾರ್ಷಿಕ ಆದಾಯವೇ ಹೆಚ್ಚು. ದಕ್ಷಿಣ ಪ್ರಾಂತ್ಯಗಳ ಶಾಸಕರ ಘೋಷಿತ ಸರಾಸರಿ ವರಮಾನ 52 ಲಕ್ಷ ರೂ.ಗಳು. ಛತ್ತೀಸ್‍ಗಢದ ಎಂಎಲ್‍ಎಗಳು ಕಡೆ ಸ್ಥಾನದಲ್ಲಿದ್ದಾರೆ. ಕರ್ನಾಟಕ 203 ಶಾಸಕರು ಸರಾಸರಿ 11 ಕೋಟಿ ರೂ.ಗಳ ಗರಿಷ್ಠ ವರಮಾನ ಹೊಂದಿದ್ದರೆ, ಛತ್ತೀಸ್‍ಗಢದ 63 ಜನಪ್ರತಿನಿಧಿಗಳ ವಾರ್ಷಿಕ ಗಳಿಕೆ ಸರಾಸರಿ 5.4 ಲಕ್ಷ ರೂ.ಗಳು.

ದಕ್ಷಿಣ ರಾಜ್ಯಗಳ 711 ಶಾಸಕರ ತಮ್ಮ ವಾರ್ಷಿಕ ಆದಾಯವನ್ನು ಘೋಷಿಸಿಕೊಂಡಿದ್ದು. ಅದು ಸರಾಸರಿ 51.99 ಲಕ್ಷ ರೂ.ಗಳ ಗರಿಷ್ಠ ಆದಾಯ ಎನಿಸಿದೆ.
ಪದವಿ ಮತ್ತು ಸ್ನಾತಕೋತ್ತರ ಪದವಿ ಗಳಿಸಿರುವ ಶಾಸಕರ ವರಮಾನ ಕಡಿಮೆ ಇರುವುದು ಇಲ್ಲಿ ಗಮನಾರ್ಹ. 4,086 ಶಾಸಕರಲ್ಲಿ 3.145 ಮಂದಿಯ ಘೋಷಿತ ಪ್ರಮಾಣಪತ್ರದಲ್ಲಿ ಶೇ.33ರಷ್ಟು ಎಂಎಲ್‍ಎಗಳು 5 ರಿಂದ 12 ತರಗತಿವರೆಗೆ ಮಾತ್ರ ಓದಿದ್ದಾರೆ. ಇವರ ಸರಾಸರಿ ವಾರ್ಷಿಕ ವರಮಾನ 31.03 ಲಕ್ಷ ರೂ.ಗಳು. ಪದವಿ ಮತ್ತು ಅದಕ್ಕೂ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರುವ ಶಾಸಕರ ಸರಾಸರಿ ಗಳಿಕೆ 20.87 ಲಕ್ಷ ರೂ.ಗಳು.

Facebook Comments

Sri Raghav

Admin