ಉಗ್ರರ ಕುತಂತ್ರಕ್ಕೆ ಪಾಕ್ ಸುರಕ್ಷಿತ ಸ್ವರ್ಗ : ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Idnai--01

ವಿಶ್ವಸಂಸ್ಥೆ, ಸೆ.18-ಅಫ್ಘಾನಿಸ್ತಾನ ಪಕ್ಕದಲ್ಲಿರುವ ದೇಶವೊಂದರ ಸುರಕ್ಷಿತ ತಾಣಗಳು, ತಾಲಿಬಾನ್ ಮತ್ತು ಲಷ್ಕರ್-ಎ-ತೈಬಾ(ಎಲ್‍ಇಟಿ)ದಂಥ ವಿವಿಧ ಭಯೋತ್ಪಾದನೆ ಸಂಘಟನೆಗಳ ಕರಾಳ ಕುತಂತ್ರಕ್ಕೆ ಹಲವು ವರ್ಷಗಳಿಂದ ಸುರಕ್ಷತೆ ಒದಗಿಸುತ್ತಿವೆ ಎಂದು ಭಾರತ ಪಾಕಿಸ್ತಾನದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದೆ.

ಅಲ್ಲದೇ ಇಂಥ ಉಗ್ರಗಾಮಿ ಸಂಘಟನೆಗಳಿಗೆ ಆರ್ಥಿಕ ಸ್ಥಿರತೆ ಒದಗಿಸಲು ಆ ದೇಶ ನಡೆಸುತ್ತಿರುವ ಅಕ್ರಮ ಮಾದಕ ವಸ್ತುಗಳ ವ್ಯಾಪಾರಕ್ಕೂ ಕಡಿವಾಣ ಹಾಕುವ ಅಗತ್ಯವಿದೆ ಎಂದು ಭಾರತ ಪ್ರತಿಪಾದಿಸಿದೆ. ಅಫ್ಘಾನಿಸ್ತಾನ ಕುರಿತು ಸಂಯುಕ್ತ ರಾಷ್ಟ್ರಗಳ ಭದ್ರತಾ ಮಂಡಳಿ ಸಂವಾದದಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಶಾಶ್ವತ ರಾಯಭಾರಿ ಸೈಯದ್ ಅಕ್ಬರುದ್ದೀನ್, ಪಾಕಿಸ್ತಾನದ ಹೆಸರನ್ನೂ ಉಲ್ಲೇಖಿಸದೇ ಆ ದೇಶದ ಕರ್ಮಕಾಂಡಗಳ ಬಗ್ಗೆ ಪ್ರಸ್ತಾಪಿಸಿದರು.

ತಾಲಿಬಾನ್‍ಗೆ ಅಫ್ಘಾನಿಸ್ತಾನದ ನೆರೆ ದೇಶದ ಬೆಂಬಲಿಗರು ನೆರವು ಮತ್ತು ಸಹಕಾರ ನೀಡುತ್ತಿದ್ದಾರೆ. ಅಫ್ಘಾನ್‍ನ ಘಜ್ನಿ ಮತ್ತು ಹಲವಾರು ಭಾಗಗಳಲ್ಲಿ ಇತ್ತೀಚೆಗೆ ಹಿಂಸಾಚಾರ, ದಾಳಿ ಮತ್ತು ವಿನಾಶಗಳ ಮೂಲಕ ಭಯೋತ್ಪಾದನೆ ಕುಕೃತ್ಯಗಳಿಗೆ ಕುಮ್ಮಕು ನೀಡುತ್ತಿದೆ ಎಂದು ಸೈಯದ್ ವಾಗ್ದಾಳಿ ನಡೆಸಿದರು.

ಅಫ್ಘಾನಿಸ್ತಾನ ಪಕ್ಕದಲ್ಲಿರುವ ಆ ದೇಶವು ಉಗ್ರರ ಸುರಕ್ಷಿತ ಸ್ವರ್ಗವಾಗಿದೆ. ಅಲ್ಲಿನ ಉಗ್ರರು ದಾಳಿಗಳಿಗೆ ಯೋಜನೆ ರೂಪಿಸಿ ಅದನ್ನು ಮುಂದುವರಿಸಿದ್ದಾರೆ. ಅನೇಕ ವರ್ಷಗಳಿಂದಲೂ ಇಂಥ ತಾಣಗಳು ತಾಲಿಬಾನ್, ಹಕ್ಕಾನಿ ಜಾಲ, ಡಾಯಿಷ್, ಅಲ್-ಖೈದಾ ಹಾಗೂ ಇವುಗಳಿಗೆ ಸೇರಿರುವ ಲಷ್ಕರ್-ಎ-ತೈಬಾ ಮತ್ತು ಜೈಷ್-ಎ-ಮಹಮದ್‍ನಂಥ ಕುಖ್ಯಾತ ಭಯೋತ್ಪಾದನೆ ಸಂಘಟನೆಗಳ ಕರಾಳ ಕಾರ್ಯತಂತ್ರಗಳು ಮತ್ತು ಅಪಾಯಕಾರಿ ಯೋಜನೆಗಳಿಗೆ ಸುರಕ್ಷತೆ ಒದಗಿಸುತ್ತಿವೆ ಎಂದು ಅವರು ವಾಕ್ ಪ್ರಹಾರ ನಡೆಸಿದರು.

Facebook Comments

Sri Raghav

Admin