‘ಜಾರಕಿ ಹೊಳಿ ಬ್ರದರ್ಸ್ ಕಾಂಗ್ರೆಸ್ ಬಿಡಲ್ಲ ಬರೆದಿಟ್ಟುಕೊಳ್ಳಿ’

ಈ ಸುದ್ದಿಯನ್ನು ಶೇರ್ ಮಾಡಿ

GT-Devegowda--01
ಮಂಡ್ಯ, ಸೆ.18-ಜಾರಕಿ ಹೊಳಿ ಬ್ರದರ್ಸ್ ಕಾಂಗ್ರೆಸ್ ಬಿಟ್ಟು ಹೋಗಲ್ಲ. ಬೇಕಿದ್ದರೆ ಬರೆದಿಟ್ಟುಕೊಳ್ಳಿ ಎಂದು ಖಡಾಖಂಡಿತವಾಗಿ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ. ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಅಸ್ತಿತ್ವಕ್ಕೆ ಬಂದು ನಾಲ್ಕು ತಿಂಗಳುಗಳಾಗಿವೆ. ಈ ಸಂದರ್ಭದಲ್ಲಿ ಯಾವ ಪಕ್ಷದ ಶಾಸಕರೂ ರಾಜೀನಾಮೆ ನೀಡುವ ಸಾಹಸ ಮಾಡುವುದಿಲ್ಲ. ಒಂದು ವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಅದು ಮಾರಿಗೆ ಬಲಿ ಕೊಟ್ಟಂತೆ ಆಗಲಿದೆ ಎಂದು ತಿಳಿಸಿದರು. ಆಯ್ಕೆ ಮಾಡಿ ಕಳಿಸಿದವರು ಬೇರೆ ಪಕ್ಷಕ್ಕೆ ಹೋದರೆ ಮತ್ತೆ ಜನಕ್ಕೆ ಮುಖ ತೋರಿಸಿ ಮತ ಕೇಳಲು ಸಾಧ್ಯವೇ? ಕಾಸಿನ ಆಸೆಗಾಗಿ ಮಾತ್ರ ಶಾಸಕ ಸ್ಥಾನವನ್ನು ಮಾರಿ ಕೊಳ್ಳಬೇಕು. ರಾಜಕೀಯ ಅಂತ್ಯ ಮಾಡಿಕೊಳ್ಳುವವರಷ್ಟೇ ಪಕ್ಷಾಂತರ ಮಾಡ ಬಹುದು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್‍ನ ಯಾರೂ ಸಹ ಪಕ್ಷಾಂತರ ಮಾಡಲ್ಲ ಎಂದು ತಿಳಿಸಿದರು.

Facebook Comments