ತಕ್ಷಣವೇ ರಸ್ತೆಗುಂಡಿಗಳನ್ನು ಮುಚ್ಚುವಂತೆ ಬಿಬಿಎಂಪಿಗೆ ಹೈಕೋರ್ಟ್ ತಪರಾಕಿ

ಈ ಸುದ್ದಿಯನ್ನು ಶೇರ್ ಮಾಡಿ

BBMP-POTWOLe

ಬೆಂಗಳೂರು, ಸೆ.19- ತಕ್ಷಣವೇ ನಗರದಲ್ಲಿ ಒಂದು ರಸ್ತೆ ಗುಂಡಿ ಇರಕೂಡದು ಎಂದು ಹೈಕೋರ್ಟ್ ವಿಭಾಗೀಯ ಪೀಠ ಬಿಬಿಎಂಪಿಗೆ ತಾಕೀತು ಮಾಡಿದೆ.
ನಗರದ ರಸ್ತೆ ಗುಂಡಿ ಮುಚ್ಚುವ ಕುರಿತು ಸಲ್ಲಿಸಲಾಗಿದ್ದ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ 1655 ರಸ್ತೆ ಗುಂಡಿಗಳಿವೆ ಎಂಬ ಹೇಳಿಕೆ ನೀಡಿದ್ದೀರಿ. ರಸ್ತೆ ಗುಂಡಿಗಳಿಂದ ಜನ ತೊಂದರೆ ಅನುಭವಿಸುತ್ತಿರುವುದು ನಿಮಗೆ ಕಾಣುವುದಿಲ್ಲವೆ ಎಂದು ತರಾಟೆಗೆ ತೆಗೆದುಕೊಂಡಿತು.

ಪಾಲಿಕೆ ಪರ ವಕೀಲರ ಹೇಳಿಕೆಗೆ ಗರಂ ಆದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ನಾವೇನು ಇಲ್ಲಿ ತಮಾಷೆ ನೋಡಲು ಕುಳಿತಿದ್ದೇವೆಯೇ ಹೀಗೆ ಏನು ನಿಮ್ಮ ಅಧಿಕಾರಿಗಳು ಕೆಲಸ ಮಾಡುವುದು ಎಂದು ಪ್ರಶ್ನಿಸಿದರು. ಗುಂಡಿಗಳ ಮುಚ್ಚುವ ಕಾಮಗಾರಿಯನ್ನು ಅಳತೆ ಇಲ್ಲದೆ ನಡೆಸುತ್ತಿದ್ದೀರಾ ಸರಿಯಾಗಿ ಕೆಲಸ ಮಾಡಲಾಗದಿದ್ದರೆ ಬಿಬಿಎಂಪಿ ಮುಚ್ಚುವುದೇ ಲೇಸು ಎಂದು ಖಾರವಾಗಿ ನುಡಿದರು.

ಕಾಮಗಾರಿ ಆದೇಶ: ಸಂಜೆಯೊಳಗೆ ಅಳತೆ ಪುಸ್ತಕ ಸಲ್ಲಿಸಬೇಕು. ನಾಳೆಯೊಳಗೆ ನಗರದ ಎಲ್ಲಾ ರಸ್ತೆಗಳ ಗುಂಡಿ ಮುಚ್ಚಿಸಿರಬೇಕೆಂದೂ ಇಲ್ಲದೆ ಹೋದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತಿಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

Facebook Comments