ಬದ್ಧ ವೈರಿಗಳನ್ನು ಮಣಿಸಿ ಹೈವೋಲ್ಟೇಜ್ ಪಂದ್ಯ ಗೆದ್ದು ಬೀಗಿದ ಟೀಮ್ ಇಂಡಿಯಾ

ಈ ಸುದ್ದಿಯನ್ನು ಶೇರ್ ಮಾಡಿ

Rohit-sharma

ದುಬೈ,ಸೆ.19- ದುಬೈನಲ್ಲಿ ಇಂದು ಭಾರತ -ಪಾಕ್ ನಡುವೆ ನಡೆದ ಏಷ್ಯನ್ ಕಪ್ ಟ್ರೋಫಿಯ ಹೈವೋಲ್ಟೇಜ್ ಪಂದ್ಯದಲ್ಲಿ 8 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ಸಾಂಪ್ರದಾಯಿಕ ಎದುರಾಳಿಗಳನ್ನು ಬಗ್ಗು ಬಡಿದಿದೆ.

ಈ ಮೊದಲು ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ದುಕೊಂಡ ಪಾಕ್ ಆರಂಭದಲ್ಲೇ ಭುವನೇಶ್ವರ್ ಕುಮಾರ್ ಅವರ ಮಾರಕ ಸ್ವಿಂಗ್ ದಾಳಿಗೆ 2 ವಿಕೆಟ್ ಕಳೆದುಕೊಂಡು ರನ್ ಗಳಿಸಲು ಚಡಪಡಿಸಿತು. ತಮ್ಮ ಮೊದಲನೇ ಓವರ್ ನಲ್ಲೆ ಆರಂಭಿಕ ಆಟಗಾರ ಇಮ್ರಾನ್ ಉಲ್ ಹಕ್ ಅವರನ್ನು ಬಲಿ ಪಡೆದ ಭುವನೇಶ್ವರ್ ನಂತರ ಮೂರನೇ ಓವರ್ ನಲ್ಲಿ ಫಕಾರ್ ಡಮಾನ್ ಅವರನ್ನು ಖಾತೆ ತೆರೆಯುವ ಮುನ್ನವೇ ಪೆವೇಲಿಯನ್ ಕಳಿಸಿದರು. ಭುವಿ ಎಸೆಯುತ್ತಿದ್ದ ಚಂಡು ಬ್ಯಾಟ್ಸ್ಮೆನ್ ಗಳನ್ನ ತಬ್ಬಿಬ್ಬಿಮಾಡುವಂತೆ ಮಾಡಿತ್ತು. ಅಂತಿಮವಾಗಿ 43.1 ನೇ ಓವರ್ ನಲ್ಲಿ ತನ್ನೆಲ್ಲ ವಿಕೆಟ್ ಗಳನ್ನೂ ಕಳೆದುಕೊಂಡು 162 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಬೌಲರ್ ಗಳು ಪ್ರಾಬಲ್ಯ ಮೆರೆದು ಅಲ್ಪ ಮೊತ್ತಕ್ಕೆ ಪಾಕಿಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಪಾಕ್ ಪರ ಬಾಬರ್ ಅಝಮ್(47) ಮತ್ತು ಶೋಯೆಬ್ ಮಲಿಕ್(43) ಗರಿಷ್ಠ ರನ್ ದಾಖಲಿಸಿದರು. ಫಹೀಮ್ ಅಶ್ರಫ್ (21) ಮತ್ತು ಮುಹಮ್ಮದ್ ಆಮಿರ್ (ಔಟಾಗದೆ 18) ಎರಡಂಕೆಯ ಕೊಡುಗೆ ನೀಡಿದರು. ತಂಡದ ಸಹ ಆಟಗಾರರು ಕಳಪೆ ಪ್ರದರ್ಶನ ನೀಡಿದರು. ಭಾರತದ ಭುವನೇಶ್ವರ ಕುಮಾರ್ 15ಕ್ಕೆ 3, ಕೇದಾರ್ ಜಾಧವ್ 23ಕ್ಕೆ 3, ಜಸ್‌ಪ್ರೀತ್ ಬುಮ್ರಾ 23ಕ್ಕೆ 2 ಮತ್ತು ಕುಲ್‌ದೀಪ್ ಯಾದವ್ 37ಕ್ಕೆ 1 ವಿಕೆಟ್ ಪಡೆದರು.

ನಂತರ ಪಾಕಿಸ್ತಾನ ನೀಡಿದ 163 ರನ್ ಟಾರ್ಗೆಟ್ ಬೆನ್ನಟ್ಟುತ್ತಿರುವ ಟೀಂ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಡೀಸೆಂಟ್ ಒಪನಿಂಗ್ ನೀಡಿದರು . ರೋಹಿತ್ ಶರ್ಮ ಅರ್ಧ ಶತಕ ಸಿಡಿಸಿ ಜವಾಬ್ದಾರಿಯುತ ಆಟವಾಡಿದರು. ಸರಳ ಟಾರ್ಗೆಟ್ ಬೆನ್ನತ್ತಿದ್ದ ಭಾರತ ಅಂತಿಮವಾಗಿ 29 ನೇ ಓವರ್ ನಲ್ಲಿ 164 ರನ್ ಗಳಿಸುವ ಮೂಲಕ ಹೈ ವೋಲ್ಟೇಜ್ ಪಂದ್ಯವನ್ನು ಗೆದ್ದು ಬೀಗಿತು. ಭಾರತದ ಪರ ರೋಹಿತ್ ಶರ್ಮ 52(39), ಶಿಖರ್ ಧವನ್ 46(54), ರಾಯುಡು ಮತ್ತು ದಿನೇಶ್ ಕಾರ್ತಿಕ್ ತಲಾ 31 ರನ್ ಗಳ ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರ್ :
ಪಾಕಿಸ್ತಾನ : 162
ಭಾರತ : 164/2 (29/50 ov, target 163)

 

Pak--01

# ಮನೀಶ್ ಪಾಂಡೆ ಅದ್ಬುತ ಕ್ಯಾಚ್
ಪಾಕಿಸ್ತಾನ ವಿರುದ್ಧ ಏಷ್ಯಾಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದೆ. ಬೌಲರ್‌ಗಳ ಅಚ್ಚುಕಟ್ಟು ಬೌಲಿಂಗ್ ನಿರ್ವಹಣೆಯಿಂದ ಭಾರತ ಭರ್ಜರಿ ಮೇಲುಗೈ ಸಾಧಿಸಿದೆ. ಇದರ ಜೊತೆಗೆ ಕನ್ನಡಿಗ ಮನೀಶ್ ಪಾಂಡೆ ಹಿಡಿದ ಅದ್ಬುತ ಕ್ಯಾಚ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ. ಕೇದಾರ್ ಜಾದವ್ ಬೌಲಿಂಗ್‌ನಲ್ಲಿ ಪಾಕಿಸ್ತಾನ ಸರ್ಫರಾಜ್ ಅಹಮ್ಮದ್ ಸಿಕ್ಸರ್ ಹೊಡೆಯ ಪ್ರಯತ್ನ ಮಾಡಿದರು. ಆದರೆ ಬೌಂಡರಿ ಲೈನ್‌ನಲ್ಲಿದ್ದ ಮನೀಶ್ ಪಾಂಡೆ ಅದ್ಬುತವಾಗಿ ಕ್ಯಾಚ್ ಹಿಡಿಯೋ ಮೂಲಕ ಸರ್ಫರಾಜ್‌ಗೆ ಪೆವಿಲಿಯನ್ ದಾರಿ ತೋರಿಸಿದರು.  ಮನೀಶ್ ಪಾಂಡೆ ಹಿಡಿದು ಸೂಪರ್ ಕ್ಯಾಚ್‌ ಇದೀಗ ವೈರಲ್ ಆಗಿದೆ. ತಂಡದಲ್ಲಿ ಹಾರ್ದಿಕ್ ಪಾಂಡ್ಯ ಇಂಜುರಿಯಿಂದ ಫೀಲ್ಡಿಂಗ್ ಅವಕಾಶ ಪಡೆದ ಮನೀಶ್ ಪಾಂಡೆ ಸಿಕ್ಕ ಅದ್ಬುತ ಕ್ಯಾಚ್ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

Facebook Comments

Sri Raghav

Admin