ತ್ರಿಪುರ ಸಿಎಂ ಹತ್ಯೆಗೆ ಡ್ರಗ್ಸ್ ಮಾಫಿಯಾ ಸ್ಕೆಚ್..!

ಈ ಸುದ್ದಿಯನ್ನು ಶೇರ್ ಮಾಡಿ

Drug--01

ಅಗರ್ತಲಾ, ಸೆ.19 (ಪಿಟಿಐ)- ಈಶಾನ್ಯ ರಾಜ್ಯವನ್ನು ಮಾದಕ ವಸ್ತು ಮುಕ್ತಗೊಳಿಸಲು ಮುಂದಾಗಿರುವ ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರನ್ನು ಹತ್ಯೆ ಮಾಡಲು ಮ್ಯಾನ್ಮಾರ್ ಮೂಲದ ಡ್ರಗ್ಸ್ ಮಾಫಿಯಾ ಸಂಚು ರೂಪಿಸಿದೆ ಎಂದು ಆಡಳಿತರೂಢ ಬಿಜೆಪಿ ಹೇಳಿದೆ.

ಮುಖ್ಯಮಂತ್ರಿ ಅವರ ಜೀವಕ್ಕೆ ಅಪಾಯವಿದೆ ಎಂಬ ಆತಂಕಕಾರಿ ಸಂಗತಿ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ವರದಿಗಳು ಲಭಿಸಿವೆ. ಮ್ಯಾನ್ಮಾರ್ ಮೂಲದ ಮಾದಕವಸ್ತು ಕಳ್ಳಸಾಗಣೆದಾರರು ಬಿಪ್ಲಬ್ ಕುಮಾರ್ ದೇಬ್ ಅವರನ್ನು ಮುಗಿಸಲು ಪಿತೂರಿ ನಡೆಸಿದ್ದಾರೆ ಎಂಬ ಮಾಹಿತಿ ಇದೆ.

ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ರತನ್ ಚಕ್ರೊಬರ್ತಿ ನಿನ್ನೆ ರಾಜಧಾನಿ ಅಗರ್ತಲಾದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಪಕ್ಷದ ಮೂಲಗಳಿಂದಲೂ ಸಹ ಈ ಬಗ್ಗೆ ಮಾಹಿತಿ ಲಭಿಸಿದೆ ಎಂದು ಅವರು ವಿವರಿಸಿದರು. ಈಶಾನ್ಯ ರಾಜ್ಯವನ್ನು ಮಾದಕ ವಸ್ತುಗಳಿಂದ ಮುಕ್ತಗೊಳಿಸಲು ಮುಖ್ಯಮಂತ್ರಿ ಮುಂದಾಗಿದ್ದಾರೆ. ಇದರಿಂದ ಮಾದಕ ವಸ್ತು ಕಳ್ಳಸಾಗಣೆದಾರರು ಮತ್ತು ಈ ದಂಧೆಯಲ್ಲಿ ತೊಡಗಿರುವವರು ಕುಪಿತರಾಗಿದ್ದಾರೆ. ಇದೇ ಕಾರಣಕ್ಕಾಗಿ ಸಿಎಂ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು ಅವರು ಹೇಳಿದರು.

ಕಳೆದ ಆರು ತಿಂಗಳಿನಲ್ಲಿ ತ್ರಿಪುರದಲ್ಲಿ ಕೋಟ್ಯಂತರ ರೂ.ಗಳ 50,000 ಮಾದಕ ವಸ್ತುಗಳನ್ನು ವಶಪಡಿಸಿಕೊಂಡು 120 ಜನರನ್ನು ಬಂಧಿಸಲಾಗಿದೆ. ಗಾಂಜಾ, ಮಾದಕ ಮಾತ್ರೆಗಳು, ಹೆರಾಯಿನ್, ಬ್ರೌನ್ ಶುಗರ್ ಮತ್ತು ಇತರ ಡ್ರಗ್ಸ್‍ಗಳ ಜಪ್ತಿ ಮಾಡಿರುವ ಮಾದಕ ವಸ್ತುಗಳಲ್ಲಿ ಸೇರಿವೆ.

Facebook Comments

Sri Raghav

Admin