ಚಾಂಪಿಯನ್ಸ್ ಟ್ರೋಫಿಯ ಸೋಲಿಗೆ ಸೇಡು ತೀರಿಸಿಕೊಳ್ಳುವುದೇ ರೋಹಿತ್ ಪಡೆ..?

ಈ ಸುದ್ದಿಯನ್ನು ಶೇರ್ ಮಾಡಿ

Team-India

ದುಬೈ,ಸೆ.19- ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಏಷ್ಯಾ ಕಪ್ ಮುಂತಾದ ಮಹತ್ತರ ಸರಣಿಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಣಸುತ್ತಿದ್ದರೆ ಪ್ರತಿಯೊಂದು ಎಸೆತವನ್ನು ಮಿಸ್ ಮಾಡದೆ ಕ್ರಿಕೆಟ್ ಪ್ರೇಮಿಗಳು ನೋಡುತ್ತಾರೆ. ಈಗ ಮತ್ತೊಮ್ಮೆ ಆ ಅವಕಾಶವು ಕ್ರಿಕೆಟ್ ಪ್ರೇಮಿಗಳಿಗೆ ಒಲಿದು ಬಂದಿದ್ದು, ರೋಹಿತ್ ಶರ್ಮಾ ಹಾಗೂ ಶರ್ಫಾಜ್ ಅಹಮದ್‍ರ ಪೈಕಿ ಯಾರ ಕೈ ಬಲವಾಗುತ್ತದೆ ಎಂಬುದು ಕೂಡ ಮಹತ್ತರವಾಗಿದ್ದು ಬೆಟ್ಟಿಂಗ್ ಕೂಡ ಜೂರಾಗಿದೆ ಇದೆ.

# ಕಾಡುತ್ತಿದೆ ಕೊಹ್ಲಿ ಕೊರತೆ:
ಟೀಂ ಇಂಡಿಯಾದ ಖಾಯಂ ನಾಯಕ ವಿರಾಟ್ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಹಂಗಾಮಿ ನಾಯಕ ರೋಹಿತ್ ಶರ್ಮಾ 11ರ ಬಳಗವನ್ನು ಮೈದಾನಕ್ಕಿಳಿಸುವಲ್ಲಿ ಎಡವಿದ್ದರೆಂಬುದನ್ನು ಹಾಂಗ್‍ಕಾಂಗ್ ವಿರುದ್ಧ ಪಡೆದ ನೀರಾಸ ಗೆಲುವೇ ಸಾಕ್ಷಿ. ಆದರೆ ಇಂದಿನ ಚಿತ್ರಣವೇ ಬೇರೆ, ಸಾಂಪ್ರದಾಯಿಕ ವೈರಿ ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಪಂದ್ಯವನ್ನು ಗೆಲ್ಲುವ ಮೂಲಕ 2017ರ ಜೂನ್ 18 ರಂದು ಕ್ರಿಕೆಟ್ ಸ್ವರ್ಗ ಲಂಡನ್‍ನಲ್ಲಿ ಕಂಡ ಚಾಂಪಿಯನ್ಸ್ ಟ್ರೋಫಿಯ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ಕೂಡ ರೋಹಿತ್ ಪಡೆ ಸಜ್ಜಾಗಿದೆ.

ಅಂದಿನ ಪಂದ್ಯದಲ್ಲಿ ಪಾಕ್‍ನ ಗೆಲುವಿಗೆ ಪ್ರಮುಖ ಕಾರಣರಾದ ಫಕ್ತರ್ ಜಮಾನ್, ಮೊಹಮ್ಮದ್ ಅಮೀರ್, ಹಸನ್ ಆಲಿ, ಶಬ್ದರ್ ಖಾನ್ ಅವರು ಇಂದಿನ ಪಂದ್ಯದಲ್ಲೂ ಸ್ಥಾನ ಪಡೆದಿದ್ದು ಅವರನ್ನು ದಿಟ್ಟವಾಗಿ ಎದುರಿಸುವುದು ಕೂಡ ಭಾರತೀಯ ಬೌಲರ್‍ಗಳು ಹಾಗೂ ಬ್ಯಾಟ್ಸ್‍ಮನ್‍ಗಳ ಜವಾಬ್ದಾರಿಯಾಗಿದೆ.

# ಪಾಕ್‍ಗೆ ಪ್ಲಸ್ ಪಾಯಿಂಟ್:
ಭಾರತದ ನಾಯಕ ವಿರಾಟ್ ಕೊಹ್ಲಿ ಅವರು ವಿಶ್ರಾಂತಿ ಪಡೆಯುತ್ತಿರುವುದರಿಂದ ಇಂದಿನ ಪಂದ್ಯವು ಪಾಕ್‍ಗೆ ಪ್ಲಸ್ ಪಾಯಿಂಟ್ ಆಗಿದೆ.
ಹಾಂಗ್‍ಕಾಂಗ್ ವಿರುದ್ಧದ ಪಂದ್ಯದಲ್ಲಿ ಭಾರತದ ದಾಂಡಿಗರಾದ ಶಿಖರ್‍ಧವನ್ ಹಾಗೂ ಅಂಬಟಿರಾಯುಡು ಬಿಟ್ಟರೆ ಉಳಿದ ಬ್ಯಾಟ್ಸ್‍ಮನ್‍ಗಳು ಎಡವಿರುವುದು ಕೂಡ ಪಾಕ್ ಬೌಲರ್‍ಗಳು ರೋಹಿತ್ ಪಡೆಯನ್ನು ಸುಲಭವಾಗಿ ಕಟ್ಟಿಹಾಕುವ ಯೋಚನೆಯಲ್ಲಿದ್ದರಾದರೂ, ರೋಹಿತ್ ಶರ್ಮಾ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳು ಗುಡುಗಿದರೆ ಶರ್ಫಾತಜ್ ಅಹಮ್ಮದ್‍ರ ತಂತ್ರವೆಲ್ಲಾ ತಲೆಕೆಳಗಾಗಬಹುದು.

# ಪಾಕ್ ಬ್ಯಾಟ್ಸ್‍ಮನ್‍ಗಳಿಗೆ ಹಾಕುವರೇ ಬ್ರೇಕ್..?
ಹಾಂಕ್‍ಕಾಂಗ್ ವಿರುದ್ಧದ ಭಾರತದ ಬೌಲಿಂಗ್ ಪ್ರದರ್ಶನವನ್ನು ಕಂಡರೆ ಭಾರತದ ಬೌಲರ್‍ಗಳು ಪಾಕ್ ನ ದಾಂಡಿಗರನ್ನು ಕಟ್ಟಿ ಹಾಕುವವರೇ ಎಂಬ ಅನುಮಾನವು ಕೂಡ ಕ್ರೀಡಾ ಪ್ರೇಮಿಗಳಲ್ಲಿ ಮೂಡಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ರನ್‍ಗಳ ಹೊಳೆ ಹರಿಸಿದ್ದ ಫಕ್ತರ್ ಜಮಾನ್, ಬಾಬರ್ ಅಜಂ, ಶೋಹಿಬ್ ಮಲ್ಲಿಕ್ ಅವರು ಉತ್ತಮ ಫಾರ್ಮ್‍ನಲ್ಲಿದ್ದು ಅವರನ್ನು ಭಾರತದ ಬೌಲರ್‍ಗಳಾದ ಭುವನೇಶ್ವರ್‍ಕುಮಾರ್, ಕಲೀಲ್‍ಅಹಮ್ಮದ್ ಕಟ್ಟಿ ಹಾಕಲು ಯಶಸ್ವಿಯಾಗುವವರೇ ಎಂಬುದನ್ನು ಕ್ರೀಡಾ ಪ್ರೇಮಿಗಳು ಎದುರು ನೋಡುತ್ತಾರೆ. ಒಟ್ಟಾರೆ ಇಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾರೆ ಎಂಬುದನ್ನು ನೋಡಲು ಕ್ರೀಡಾಪ್ರೇಮಿಗಳ ಹೃದಯ ಬಡಿತ ಹೆಚ್ಚಾಗಿರುವುದಂತೂ ಖಚಿತ.9

Facebook Comments

Sri Raghav

Admin