ಕ್ರೈಸ್ತ ಸನ್ಯಾಸಿ ಅತ್ಯಾಚಾರ ಪ್ರಕರಣ : ಎಸ್‍ಐಟಿ ಮುಂದೆ ಬಿಷಪ್ ಹಾಜರು

ಈ ಸುದ್ದಿಯನ್ನು ಶೇರ್ ಮಾಡಿ

Kochi-Rape-Case-Bhishap
ಕೊಚ್ಚಿ, ಸೆ.19- ಕ್ರೈಸ್ತ ಸನ್ಯಾಸಿನಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾಗಿರುವ ಜಲಂಧರ್ ಬಿಷಪ್ ಫ್ರಾಂಕೊ ಮಳಕ್ಕಲ್ ವಿಚಾರಣೆ ತೀವ್ರಗೊಂಡಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಕೇರಳ ಪೊಲೀಸ್ ಇಲಾಖೆಯ ವಿಶೇಷ ತನಿಖಾ ತಂಡ (ಎಸ್‍ಐಟಿ)ದ ಮುಂದೆ ಬಿಷಪ್ ಇಂದು ಹಾಜರಾಗಿ ವಿಚಾರಣೆ ಎದುರಿಸಿದರು. ಕೊಚ್ಚಿಯ ತ್ರಿಪ್ಪುನಿತುರಾ ಬಳಿ ರಹಸ್ಯ ಸ್ಥಳದಲ್ಲಿ 54 ವರ್ಷದ ಬಿಷಪ್‍ನನ್ನು ಎಸ್‍ಐಟಿ ಮುಖ್ಯಸ್ಥ ಸುಭಾಷ್ ವಿಚಾರಣೆಗೆ ಒಳಪಡಿಸಿ ಪ್ರಶ್ನೆಗಳಿಗೆ ಉತ್ತರ ಪಡೆದರು.

Facebook Comments