ಕ್ಷಿಪಣಿ ಪರೀಕ್ಷಾ ಸ್ಥಳ ಮುಚ್ಚಲು ಸರ್ವಾಧಿಕಾರಿ ಕಿಮ್ ಸಮ್ಮತಿ

ಈ ಸುದ್ದಿಯನ್ನು ಶೇರ್ ಮಾಡಿ

Kim--01
ಪೊಯಂಗ್‍ಯಾಂಗ್, ಸೆ.19-ಅಮೆರಿಕ ಪೂರಕ ಕ್ರಮಗಳನ್ನು ಕೈಗೊಂಡರೆ, ನೊಯಂಗ್‍ಬೊಯಂಗ್‍ನಲ್ಲಿರುವ ಮುಖ್ಯ ಅಣ್ವಸ್ತ್ರ ಸಂಕೀರ್ಣವನ್ನು ಮುಚ್ಚಲು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಸಮ್ಮತಿ ನೀಡಿದ್ದಾರೆ. ಇದರೊಂದಿಗೆ ಏಷ್ಯಾ ಖಂಡದಲ್ಲಿ ಆತಂಕ ಮತ್ತು ಭೀತಿಗೆ ಕಾರಣವಾಗಿದ್ದ ಉತ್ತರ ಕೊರಿಯಾದ ವಿನಾಶಕಾರಿ ಕ್ಷಿಪಣಿ ಪರೀಕ್ಷೆಗಳ ಪೂರ್ಣವಿರಾಮಕ್ಕೆ ವೇದಿಕೆ ಸಜ್ಜಾಗಿದೆ.

ಅಣ್ವಸ್ತ್ರ ನಿಶ್ಶಸ್ತ್ರೀಕರಣಕ್ಕಾಗಿ ಉತ್ತರ ಕೊರಿಯಾ ಮೇಲೆ ಅಮೆರಿಕ ತೀವ್ರ ಒತ್ತಡ ಹೇರುತ್ತಿರುವ ಸಂದರ್ಭದಲ್ಲೇ ರಾಜಧಾನಿ ಪೊಯಂಗ್‍ಯಾಂಗ್‍ನಲ್ಲಿ ಉತ್ತರ ಮತ್ತು ದಕ್ಷಿಣ ಕೊರಿಯಾ ನಾಯಕರುಗಳಾದ ಕಿಮ್ ಮತ್ತು ಮೂನ್ ಜಾಯಿ-ಇನ್ ಮಹತ್ವದ ಶೃಂಗಸಭೆ ನಡೆಸಿ ಗಹನ ಸಮಾಲೋಚನೆ ನಡೆಸಿದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್, ಕ್ಷಿಪಣಿ ಪರೀಕ್ಷಾ ಸ್ಥಳಗಳೂ ಅದರಲ್ಲೂ ಮುಖ್ಯವಾಗಿ ನೊಯಂಗ್‍ಬೊಯಂಗ್‍ನಲ್ಲಿರುವ ಪ್ರಧಾನ ಅಣ್ವಸ್ತ್ರ ಸಂಕೀರ್ಣವನ್ನು ಮುಚ್ಚಲು ಕಿಮ್ ಒಪ್ಪಿಗೆ ನೀಡಿದ್ದಾರೆ ಎಂದು ಮೂನ್ ಹೇಳಿದರು.

Facebook Comments

Sri Raghav

Admin