ಪಂಜಾಬ್ ಜಿಲ್ಲಾ ಪರಿಷತ್, ಪಂಚಾಯಿತಿ ಸಮಿತಿಗಳಿಗೆ ಬಿಗಿಭದ್ರತೆ ನಡುವೆ ಮತದಾನ

ಈ ಸುದ್ದಿಯನ್ನು ಶೇರ್ ಮಾಡಿ

Punjaab--01

ಚಂಡಿಗಢ್, ಸೆ.19 (ಪಿಟಿಐ)- ಪಂಬಾಜ್‍ನ ಜಿಲ್ಲಾ ಪರಿಷತ್‍ಗಳು ಹಾಗೂ ಪಂಚಾಯಿತಿ ಸಮಿತಿಗಳಿಗೆ ಇಂದು ವ್ಯಾಪಕ ಭದ್ರತೆ ನಡುವೆ ಚುನಾವಣೆ ನಡೆಯಿತು. ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಮತದಾನ ಬಹುತೇಕ ಶಾಂತಿಯುತವಾಗಿತ್ತು.  ಈ ಚುನಾವಣೆಯಲ್ಲಿ 354 ಜಿಲ್ಲಾ ಪರಿಷತ್ ಸದಸ್ಯರು ಹಾಗೂ 2,900 ಪಂಚಾಯಿತಿ ಸಮಿತಿ ಸದಸ್ಯರು ಚುನಾಯಿತರಾಗಲಿದ್ದಾರೆ. ಪಂಜಾಬ್ ರಾಜ್ಯದಲ್ಲಿ 22 ಜಿಲ್ಲಾ ಪರಿಷತ್‍ಗಳು ಮತ್ತು 150 ಪಂಚಾಯಿತಿ ಸಮಿತಿಗಳಿವೆ.

ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾದ ಮತದಾನ ಸಂಜೆ 4 ಗಂಟೆವರೆಗೂ ಮುಂದುವರಿಯಿತು ಎಂದು ಚುನಾವಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ. ಒಟ್ಟು 1,27,87,395 ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಲು ಅರ್ಹತೆ ಪಡೆದಿದ್ದು. ಇವರಲ್ಲಿ 60,99,053 ಮಹಿಳೆಯರು ಮತ್ತು 97 ತೃತೀಯ ಲಿಂಗಿಗಳಿದ್ದಾರೆ.  ವಿವಿಧ ಜಿಲ್ಲಾ ಪರಿಷತ್‍ಗಳಿಗೆ ಈಗಾಗಲೇ 33 ಅಭ್ಯರ್ಥಿಗಳು ಹಾಗೂ 369 ಉಮೇದುವಾರರು ಪಂಚಾಯಿತಿ ಸಮಿತಿಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗಿದೆ.

ಸೆಪ್ಟೆಂಬರ್ 22(ಶನಿವಾರ) ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪಷ್ಟ ಬಹುಮತ ಗಳಿಸುವುದಾಗಿ ಕಾಂಗ್ರೆಸ್ ಈಗಾಗಲೇ ಹೇಳಿಕೊಂಡಿದೆ. ಶಿರೋಮಣಿ ಅಕಾಲಿದಳ-ಭಾರತೀಯ ಜನತಾ ಪಕ್ಷ ಮಿತ್ರಕೂಟ ಹಾಗೂ ಆಮ್ ಆದ್ಮಿ ಪಾರ್ಟಿ ಸಹ ಗೆಲುವಿನ ಆಶಾಭಾವನೆ ಹೊಂದಿದೆ.

Facebook Comments

Sri Raghav

Admin