ಡಿಕೆಶಿ ಟನ್ ಲೆಕ್ಕದಲ್ಲಿ ಬ್ಲ್ಯಾಕ್ ಮನಿ ಡೀಲ್ ಮಾಡಿದ್ದಾರೆ..!

ಈ ಸುದ್ದಿಯನ್ನು ಶೇರ್ ಮಾಡಿ

Sambit

ನವದೆಹಲಿ, ಸೆ.19-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಮಂತ್ರಿ ಮಂಡಲದಲ್ಲಿ ಅತ್ಯಂತ ಪ್ರಬಲ ಸಚಿವರಾಗಿರುವ ಡಿ.ಕೆ.ಶಿವಕುಮಾರ್ ಟನ್‍ಗಟ್ಟಲೆ ಲೆಕ್ಕದಲ್ಲಿ ಕಾಳಧನ ಮತ್ತು ಹವಾಲಾ ದಂಧೆ ನಡೆಸಿದ್ದಾರೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ  ಆರೋಪಿಸಿದ್ದಾರೆ. ದೆಹಲಿಯಲ್ಲಿಂದು ಈ ಕುರಿತ ದಾಖಲೆ ಪತ್ರಗಳು ಹಾಗೂ ದಸ್ತಾವೇಜುಗಳನ್ನು ಪ್ರದರ್ಶಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಮೂರು ಫ್ಲ್ಯಾಟ್‍ಗಳಲ್ಲಿ ಕೋಟಿ ಕೋಟಿ ಹಣವನ್ನು ತುಂಬಿಸಿಟ್ಟಿದ್ದರು. ಒಮ್ಮೆ ಒಂದು ಫ್ಲ್ಯಾಟ್‍ನಲ್ಲಿ ಭಾರೀ ಕಳ್ಳತನವಾಗಿತ್ತು.

ಕಳ್ಳರು ಕೋಟ್ಯಂತರ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದರು. ಆದರೆ ಡಿಕೆಶಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಿಲ್ಲ. ಏಕೆಂದರೆ ತಮ್ಮ ಕಾಳಧನ, ಅಕ್ರಮಗಳಿಕೆ ಮತ್ತು ಹವಾಲಾ ದಂಧೆ ಬಯಲಾಗುತ್ತದೆ ಎಂಬ ಭೀತಿಯಿಂದ ಅವರು ದೂರು ನೀಡಲು ಹಿಂದೇಟು ಹಾಕಿದರು. ಈ ಸಂಬಂಧ ತಮ್ಮ ಬಳಿ ದಾಖಲೆ ಇದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರದರ್ಶಿಸಿದರು.

#ಡಿಕೆಶಿ ಆರೋಗ್ಯದಲ್ಲಿ ಚೇತರಿಕೆ
ಅನಾರೋಗ್ಯದಿಂದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಿಕೆಶಿ ಆರೋಗ್ಯ ಚೇತರಿಸಿಕೊಂಡಿದ್ದು, ಇಂದು ಅಥವಾ ನಾಳೆ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ ಎಂದು ಸಹೋದರ ಹಾಗೂ ಸಂಸದ ಡಿ.ಕೆ ಸುರೇಶ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಸುರೇಶ್, ಸಚಿವ ಡಿಕೆ ಶಿವಕುಮಾರ್ ಅವರದ್ದು ಓಡಿಹೋಗುವ ಜಾಯಮಾನವಲ್ಲ.

ಯಾವುದೋ ಭಯದಿಂದ ಬಂದು ಆಸ್ಪತ್ರೆಗೆ ಅಡ್ಮಿಟ್ ಆಗಿಲ್ಲ. ಭಗವಂತ, ಗುರುಗಳು, ಜನರ ಕೃಪೆ ಡಿಕೆಶಿ ಮೇಲಿದೆ. ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತೇವೆ ಎಂದರು.  ಬಿಎಸ್ ವೈ ಅವರ ಚೆಸ್ ಗೇಮ್ ಹೇಳಿಕೆಗೆ ತಿರುಗೇಟು ನೀಡಿದ ಸುರೇಶ್, ಬಿಎಸ್ ವೈ ಅಂಪೈರ್ ಇಲ್ಲದೇ ಆಟವಾಡುತ್ತಿರುವುದು. ಅವರಿಗೆ ಅಂಪೈರ್ ಯಾರು ಅಂತಲೇ ಗೊತ್ತಿಲ್ಲ. ಇದರ ಬಗ್ಗೆ ಅವರನ್ನೇ ಕೇಳಿ ಎಂದರು.

Facebook Comments

Sri Raghav

Admin