ದೊಡ್ಡಣ್ಣನಿಂದ ‘ಸುಖ’ ಸಿಗಲಿಲ್ಲ.! ಟ್ರಂಪ್ ಜೊತೆಗಿನ ಸೆಕ್ಸ್ ‘ಅನುಭವ’ ಬಿಚ್ಚಿಟ್ಟ ನೀಲಿ ತಾರೆ..!

ಈ ಸುದ್ದಿಯನ್ನು ಶೇರ್ ಮಾಡಿ

Trump--01

ವಾಷಿಂಗ್ಟನ್, ಸೆ.19-ಸ್ತ್ರೀ ಲಂಪಟ ಎಂದೇ ಬಿರುದಾಂಕಿತರಾಗಿರುವ ಅಮೆರಿಕದ ವಿವಾದಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪಲ್ಲಂಗ ಪುರಾಣಗಳು ಒಂದೊಂದೇ ಬೆಳಕಿಗೆ ಬರುತ್ತಿವೆ. ನೀಲಿ ಚಿತ್ರಗಳ ತಾರೆಯರೊಂದಿಗೆ ಚಕ್ಕಂದವಾಡಿ ಮಾಧ್ಯಮಗಳಿಗೆ ಸುದ್ದಿಗಳ ಭರ್ಜರಿ ಭೋಜನ ನೀಡುತ್ತಿರುವ ಅಧ್ಯಕ್ಷರ ರಸಿಕತೆ ಬಗ್ಗೆ ಅನೇಕ ಸ್ವಾರಸ್ಯಕರ ಸಂಗತಿಗಳು ಕೇಳಿಬರುತ್ತಿವೆ. ಇದೇ ವೇಳೆ ಅಮೆರಿಕದ ಪೋರ್ನ್ ಸ್ಟಾರ್ ಸ್ಟ್ರೋಮಿ ಡೇನಿಯಲ್ಸ್, ಪಲ್ಲಂಗದಲ್ಲಿ ಟ್ರಂಪ್ ವಿಫಲತೆ ಬಗ್ಗೆ ಇದೇ ಮೊದಲ ಬಾರಿಗೆ ಬಾಯಿ ಬಿಟ್ಟಿದ್ದಾಳೆ.

ಟ್ರಂಪ್ ಜೊತೆ ಮಿಲನ ಅತ್ಯಂತ ನೀರಸವಾಗಿತ್ತು. ಅವರು ನನಗೆ ತೃಪ್ತಿ ಪಡಿಸಲಿಲ್ಲ. ಅಷ್ಟೇನೂ ಸುಖ ನೀಡಲಿಲ್ಲ. ನನ್ನ ವೃತ್ತಿಯಲ್ಲಿ ಇದು ಅತ್ಯಂತ ಕೆಟ್ಟ ಅನುಭವ ಎಂದು ದಶಕದ ಹಿಂದೆ ಟ್ರಂಪ್ ಜೊತೆ ಪಲ್ಲಂಗ ಹಂಚಿಕೊಂಡಿದ್ದಾಗಿ ಹೇಳಿಕೊಂಡಿರುವ ಸ್ಟ್ರೋಮಿ ವಿವರಿಸಿದ್ದಾಳೆ.  ಮಾದಕ ಮೈಮಾಟದ ಈ ನೀಲಿ ತಾರೆ ಫುಲ್ ಡಿಸ್‍ಕ್ಲೋಷರ್(ಪೂರ್ಣ ಬಹಿರಂಗ) ಎಂಬ ಪುಸ್ತಕದಲ್ಲಿ ಟ್ರಂಪ್ ಮಹಾಶಯನ ಕಾಮಕಾಂಡಗಳನ್ನು ವಿವರಿಸಿದ್ದಾಳೆ. ಅಲ್ಲದೆ, ಟ್ರಂಪ್ ಗುಪ್ತಾಂಗದ ಗ್ರಾಫಿಕ್ ವಿವರಣೆಯನ್ನೂ ಸಹ ಒದಗಿಸಿದ್ದಾಳೆ.

Trump--03

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅದು ಮಾರಿಯೋ ಕಾರ್ಟ್ ವೀಡಿಯೋಗೇಮ್‍ನಲ್ಲಿರುವ ಪುಟ್ಟ ಆಕಾರದ ಪಾತ್ರದಂತಿತ್ತು ಎಂದು ಆಕೆ ತುಲನೆ ಮಾಡಿದ್ದಾಳೆ. ಸ್ಟ್ರೋಮಿ ಹೇಳಿಕೆಗಳು ಬ್ರಿಟಿಷ್ ವಾರ್ತಾಪತ್ರಿಕೆ ಗಾರ್ಡಿಯನ್‍ನಲ್ಲಿ ರಸವತ್ತಾಗಿ ಪ್ರಕಟಗೊಂಡಿದೆ.

ಟ್ರಂಪ್ ಮತ್ತು ಸ್ಟ್ರೋಮಿ ಮಿಲನ 2006ರಲ್ಲಿ ನಡೆದಿತ್ತಂತೆ. ಲೇಕ್ ಟಾಹೊಯಿಯಲ್ಲಿ ನಡೆದ ಸೆಲೆಬ್ರಿಟಿ ಗಾಲ್ಫ್ ಟೂರ್ನಿಮೆಂಟ್ ವೇಳೆ ಟ್ರಂಪ್ ಮತ್ತು ನನ್ನ ಸಮಾಗಮ ಆಗಿತ್ತು. ಆಗ ಟ್ರಂಪ್ ಪತ್ನಿ ಟೆಲಿವಿಷನ್ ಸ್ಟಾರ್ ಮೆಲಾನಿಯಾ, ಬರೋನ್ ಹೆಸರಿನ ಗಂಡು ಮಗುವಿಗೆ ಜನ್ಮ ನೀಡಿ ಬಾಣಂತನದಲ್ಲಿದ್ದರು. ಇದೇ ವೇಳೆ ಟ್ರಂಪ್ ನನ್ನೊಂದಿಗೆ ಚಕ್ಕಂದ ಆಡಿದರು.

ಈ ಬ್ಲೂಫಿಲ್ಮ್ ಸ್ಟಾರ್ ಬರೆದಿರುವ ಪುಸ್ತಕಕ್ಕೆ ಬಿಡುಗಡೆಗೆ ಮುನ್ನ ಭಾರೀ ಡಿಮ್ಯಾಂಡ್ ಲಭಿಸಿದೆ. ಟ್ರಂಪ್‍ನ ಪಲ್ಲಂಗ ಪುರಾಣಗಳು, ಆತನ ವಿಫಲ ಮೈಥುನಗಳ ಇತ್ಯಾದಿಗಳ ವಿವರಗಳು ಇದರಲ್ಲಿವೆ ಎನ್ನಲಾಗಿದೆ.   ಅಮೆರಿಕದ ಮಹತ್ವದ ಮಧ್ಯಂತರ ಚುನಾವಣೆ ಮುನ್ನವೇ ಅಕ್ಟೋಬರ್ 2ರಂದು ಈ ಪುಸ್ತಕ ಬಿಡುಗಡೆಯಾಗಲಿದ್ದು, ಇದರ ಪ್ರತಿ ಗಾರ್ಡಿಯನ್ ಪತ್ರಿಕೆಗೆ ಲಭಿಸಿದೆ.

Trump--02

Facebook Comments

Sri Raghav

Admin