ಮೊಟ್ಟೆ ಮಾಂಸಾಹಾರಿಯಲ್ಲ ಸಸ್ಯಾಹಾರಿ…!

ಈ ಸುದ್ದಿಯನ್ನು ಶೇರ್ ಮಾಡಿ

Egg-1

ಪ್ರಾಣಿಯಿಂದ ಬರುವ ಪ್ರತಿಯೊಂದು ಉತ್ಪನ್ನವೂ ಮಾಂಸಾಹಾರವಲ್ಲ. ಅದಕ್ಕೆ ಅತ್ಯುತ್ತಮ ಉದಾಹರಣೆ ಹಾಲು. ಮೊಟ್ಟೆಯಲ್ಲಿ ಮಾಂಸ, ಸ್ನಾಯುಗಳು ಅಥವಾ ಜೀವಕೋಶವಿಲ್ಲ.  ಹಾಗಾಗಿ ತಾಂತ್ರಿಕವಾಗಿ ಮೊಟ್ಟೆಗಳು ಸಸ್ಯಾಹಾರಿ…  ನಮ್ಮ ಜೀವನದಲ್ಲಿ ಆಹಾರ ಮುಖ್ಯವಾದ ಪಾತ್ರ ವಹಿಸುತ್ತದೆ. ಇದು ಪೌಷ್ಠಕತೆ ಒದಗಿಸುವುದು ಮಾತ್ರವಲ್ಲದೆ ನಾವು ಹೇಗಿದ್ದೇವೋ ಹಾಗೆ ಮಾಡುತ್ತದೆ. ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳ ನಡುವೆ ಅನಾದಿ ಕಾಲದಿಂದಲೂ ಆಹಾರ ಸೇವನೆ ಕುರಿತು ಸಂಘರ್ಷ ನಡೆಯುತ್ತಿದೆ. ಅವರು ನೀವು ಏನು ತಿನ್ನುತ್ತೀರಿ ಅದೇ ಆಗುತ್ತೀರಿ ಎನ್ನುತ್ತಾರೆ. ಮೊಟ್ಟೆಯನ್ನು ಸಾಮಾನ್ಯವಾಗಿ ಮಾಂಸಾಹಾರ ಎಂದು ಪರಿಗಣಿಸಲಾಗುತ್ತದೆ. ಆದರೆ ಅದನ್ನು ವಿರೋಧಿಸುವ ಹಲವಾರು ವಾಸ್ತವಾಂಶಗಳಿವೆ. ನಾವು ಅದನ್ನು ವ್ಯಾಖ್ಯಾನದ ದೃಷ್ಟಿಯಿಂದ ನೋಡಿದರೆ ಮಾಂಸ ಸೇವಿಸುವವರು ಮಾಂಸಾಹಾರಿಗಳು, ಆದರೆ ಮೊಟ್ಟೆ ಸೇವಿಸುವವರು ಸಸ್ಯಾಹಾರಿಗಳು, ಏಕೆಂದರೆ ಅದರಲ್ಲಿ ಮಾಂಸ ಅಥವಾ ಜೀವವಿರುವುದಿಲ್ಲ.

ಮೊಟ್ಟೆಗಳು ಅತ್ಯಂತ ಪೌಷ್ಠಿಕಯುಕ್ತವಾಗಿರುತ್ತವೆ. ಅವುಗಳನ್ನು ನಿಸರ್ಗದ ಮಲ್ಟಿ ವಿಟಮಿನ್ ಎಂದು ಪರಿಗಣಿಸಲಾಗುತ್ತದೆ. ಅವುಗಳಲ್ಲಿ ಉತ್ಕರ್ಷ ನಿರೋಧಕಗಳಿರುತ್ತವೆ ಮತ್ತು ಶಕ್ತಿಯುತ ಮೆದುಳಿನ ಪೋಷಕಾಂಶಗಳಿರುತ್ತವೆ. ಮೊಟ್ಟೆಗಳು ಭೂಮಿಯ ಮೇಲೆ ಅತ್ಯಂತ ಪೌಷ್ಠಿಕ ಆಹಾರಗಳಲ್ಲಿ ಒಂದಾಗಿದೆ. ಆದರೆ ಮೊಟ್ಟೆಗಳನ್ನು ಮಾಂಸಾಹಾರಿ ಎಂದು ಪರಿಗಣಿಸಲಾಗಿದೆ. ಶ್ರೀನಿವಾಸ ಫಾಮ್ರ್ಸ್ ಪ್ರೈವೇಟ್ ಲಿಮಿಟೆಡ್‍ನ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹಾಗೂ ಇಂಟರ್‍ನ್ಯಾಷನಲ್ ಎಗ್ ಕಮೀಷನ್ ಉಪಾಧ್ಯಕ್ಷರಾಗಿರುವ ಸುರೇಶ್ ಚಿತ್ತೂರಿ ಅವರು, ಸಸ್ಯಾಹಾರಿಗಳ ವ್ಯಾಖ್ಯಾನದ ಪ್ರಕಾರ ಪ್ರಾಣಿಯ ಮಾಂಸ ಹೊರತಾಗಿರಬೇಕು. ತಾಂತ್ರಿಕವಾಗಿ ಮೊಟ್ಟೆಗಳು ಸಸ್ಯಾಹಾರಿ, ಏಕೆಂದರೆ ಅವುಗಳಲ್ಲಿ ಪ್ರಾಣಿಯ ಮಾಂಸವಿಲ್ಲ. (ಮಾಂಸ, ಸ್ನಾಯುಗಳು ಅಥವಾ ಪ್ರಾಣಿಯ ಜೀವಕೋಶ). ಹಲವು ಮಂದಿ ಸಸ್ಯಾಹಾರಿಗಳು ತಮ್ಮ ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸಿಕೊಂಡಿದ್ದು, ಕೋಳಿ, ಆಕಳು, ಹಂದಿ, ಮೀನು ಮತ್ತು ಎಲ್ಲ ಪ್ರಾಣಿಗಳನ್ನು ವರ್ಜಿಸುತ್ತಾರೆ. ಪರಿಭಾಷೆಯ ಪ್ರಕಾರ ನೀವು ಓವೊ-ವೆಜಿಟೇರಿಯನ್ ಅಂದರೆ ಮೊಟ್ಟೆಗಳನ್ನು ಸೇವಿಸುವ ಸಸ್ಯಾಹಾರಿಗಳು. ಮೊಟ್ಟೆಗಳು ಸಸ್ಯಾಹಾರವಾದರೂ ಅವು ಯಾವುದೇ ಸಂದರ್ಭದಲ್ಲೂ ಅವುಗಳನ್ನು ಶಾಕಾಹಾರ ಎನ್ನಲಾಗದು.

ಮೊಟ್ಟೆಗಳನ್ನು ಕೋಳಿಯಿಂದ ಪಡೆಯಲಾಗುತ್ತದೆ. ಆದರೆ ಅವುಗಳನ್ನು ಕೇವಿಯರ್ ಅಥವಾ ಮೀನಿನ ಮೊಟ್ಟೆಗಳಂತೆ ಕೋಳಿ ಸಾಯಿಸಿ ಪಡೆಯಲಾಗುವುದಿಲ್ಲ. ಪ್ರಾಣಿಯಿಂದ ಬರುವ ಪ್ರತಿಯೊಂದು ಉತ್ಪನ್ನವೂ ಮಾಂಸಾಹಾರವಲ್ಲ. ಅದಕ್ಕೆ ಅತ್ಯುತ್ತಮ ಉದಾಹರಣೆ ಹಾಲು. ಮೊಟ್ಟೆಗಳಲ್ಲಿ ಮೂರು ಭಾಗಗಳಿರುತ್ತವೆ. ಚಿಪ್ಪು, ತತ್ತಿಬಿಳುಪು ಮತ್ತು ಹಳದಿ ಲೋಳೆ. ಮೊಟ್ಟೆಯ ಬಿಳಿಭಾಗ ನೀರಿನಲ್ಲಿ ಪ್ರೋಟೀನ್ ಅಲ್ಬುಮೆನ್. ಇದರಲ್ಲಿ ಯಾವುದೇ ಪ್ರಾಣಿ ಜೀವಕೋಶವಿಲ್ಲ. ಆದ್ದರಿಂದ ಮೊಟ್ಟೆ ಬಿಳಿ ಭಾಗ ಶಾಕಾಹಾರ. ಮೊಟ್ಟೆಯಲ್ಲಿ ಮೂರು ಭಾಗಗಳಿರುತ್ತವೆ. ಮೊಟ್ಟೆಯ ಚಿಪ್ಪು, ಮೊಟ್ಟೆಯ ಹಳದಿ ಮತ್ತು ಮೊಟ್ಟೆಯ ಬಿಳಿ. ಮೊಟ್ಟೆಯ ಬಿಳಿಭಾಗದಲ್ಲಿ ಪ್ರೋಟೀನ್ ಮಾತ್ರ ಇರುತ್ತದೆ. ಹಳದಿ ಭಾಗವು ಪ್ರೋಟೀನ್‍ಗಳು, ಕೊಲೆಸ್ಟ್ರಾಲ್ ಮತ್ತು ಕೊಬ್ಬಿನಿಂದ ತಯಾರಾಗಿರುತ್ತವೆ. ನಾವು ಸೇವಿಸುವ ಮೊಟ್ಟೆಗಳಲ್ಲಿ ಭ್ರೂಣವಿರುವುದಿಲ್ಲ. ಅಂದರೆ ಮೊಟ್ಟೆಗಳು ಆ ಹಂತದಲ್ಲಿ ಪ್ರಾಣಿ/ಪಕ್ಷಿಯನ್ನು ಸೇವಿಸುತ್ತಿದ್ದಾರೆ ಎನ್ನುವಷ್ಟು ಬೆಳವಣಿಗೆಯಾಗಿರುವುದಿಲ್ಲ.
ಮಾರುಕಟ್ಟೆಯಲ್ಲಿ ದೊರೆಯುವ ಬಹಳಷ್ಟು ಮೊಟ್ಟೆಗಳು ಫಲವತ್ತಾಗಿರುವುದಿಲ್ಲ. ಆದ್ದರಿಂದ ಮೊಟ್ಟೆಗಳನ್ನು ಪ್ರತ್ಯೇಕವಾಗಿರಿಸಿದರೆ ಅವುಗಳಿಂದ ಕೋಳಿಮರಿ ಹೊರಬರುವ ಸಾಧ್ಯತೆ ಕಡಿಮೆ.

EGG

ಸಾಕಷ್ಟು ಜನರು ಮೊದಲಿಗೆ ಒಪ್ಪಿಕೊಳ್ಳುವುದಿಲ್ಲ. ಆದರೆ ತಾಂತ್ರಿಕವಾಗಿ ಮೊಟ್ಟೆಗಳು ಮಾಂಸಾಹಾರಿ ಉತ್ಪನ್ನದ ವ್ಯಾಖ್ಯಾನದ ಅಡಿ ಬರುವುದಿಲ್ಲ.  ಅಲ್ಲದೆ ಬರೀ ಹಾಲು ಕೂಡ ಆಕಳಿನಿಂದ ಬಂದರೂ ಸಸ್ಯಾಹಾರ ಎಂದು ಪರಿಗಣಿಸಿದಂತೆ ನಾವು ಪ್ರಾಣಿಜನ್ಯವಾದ ಪ್ರತಿಯೊಂದು ಉತ್ಪನ್ನವೂ ಮಾಂಸಾಹಾರವಲ್ಲ ಎಂದು ನಾವು ತಿಳಿಯಬೇಕು. ಆದ್ದರಿಂದ ದಿನಕ್ಕೆ ಒಂದು ಮೊಟ್ಟೆ ಸೇವಿಸುವುದು ಮಾರುಕಟ್ಟೆಯಲ್ಲಿ ದೊರೆಯುವ ಕೃತಕ ಡಯೆಟರಿ ಸಪ್ಲಿಮೆಂಟ್ಸ್ (ಪೂರಕ ಆಹಾರಗಳು)ಗಿಂತ ಆರೋಗ್ಯಕರ ಆಯ್ಕೆ. ಅಲ್ಲದೆ ಮೊಟ್ಟೆಗಳನ್ನು ಸೇವಿಸುವುದು ಜನರನ್ನು ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ, ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಕ್ಯಾನ್ಸರ್, ಆಲ್‍ಝೈಮರ್ಸ್, ಪಾರ್ಕಿನ್‍ಸನ್ ಮತ್ತು ಹೃದಯದ ಸಮಸ್ಯೆಗಳನ್ನು ತಡೆಯುತ್ತದೆ.

Facebook Comments

Sri Raghav

Admin