ಹೆಣ್ಣಿನ ವಿಚಾರಕ್ಕೆ ಬಿತ್ತು ಕಾರ್ ಡ್ರೈವರ್ ಹೆಣ..?

ಈ ಸುದ್ದಿಯನ್ನು ಶೇರ್ ಮಾಡಿ

MJurder--01

ಬೆಂಗಳೂರು, ಸೆ.20-ನೈಸ್ ರಸ್ತೆಯಲ್ಲಿ ನಿನ್ನೆ ಹಾಡಹಗಲೇ ಕಾರು ಚಾಲಕ ಹರೀಶ್ (25) ಎಂಬಾತನ ಕೊಲೆ ನಡೆದಿದ್ದು, ಇದು ಹೆಣ್ಣಿನ ವಿಚಾರಕ್ಕೆ ನಡೆದಿರಬಹುದೆಂದು ಶಂಕೆ ವ್ಯಕ್ತಪಡಿಸಿರುವ ತಲಘಟ್ಟಪುರ ಪೊಲೀಸರು, ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ. ಬನ್ನೇರುಘಟ್ಟ-ಕನಕಪುರ ರಸ್ತೆಯ ತುಳಸೀಪುರ ಕೆರೆ ಬಳಿ ನಿನ್ನೆ ಸಂಜೆ 4.30ರ ವೇಳೆಗೆ ಹರೀಶ್ ಬೈಕ್‍ನಲ್ಲಿ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು, ಬೈಕ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡಿದ್ದ ತಲಘಟ್ಟಪುರ ಪೊಲೀಸರು, ಹರೀಶ್ ಅವರ ಕುಟುಂಬ ಮತ್ತು ಸ್ನೇಹಿತರ ಹೇಳಿಕೆ ಪಡೆದುಕೊಂಡಿದ್ದಾರೆ. ಹೆಣ್ಣಿನ ವಿಚಾರಕ್ಕೆ ಈ ಕೊಲೆ ನಡೆದಿದೆ ಎಂದು ಶಂಕಿಸಿರುವ ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ.

# ಈ ಸುದ್ದಿಯೊಯನ್ನೂ ಓದಿ..
ಬುಲೆಟ್ ಬೈಕ್‍ಗೆ ವಾಹನ ಡಿಕ್ಕಿ, ಯುವಕ ದುರ್ಮರಣ
ಬೆಂಗಳೂರು, ಸೆ.20- ಬುಲೆಟ್‍ಬೈಕ್‍ನಲ್ಲಿ ಮನೆಗೆ ಹೋಗುತ್ತಿದ್ದ ಯುವಕನಿಗೆ ಅತಿ ವೇಗವಾಗಿ ಬಂದ ಯಾವುದೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಆತ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಅಂಜನಾಪುರದ ನಿವಾಸಿ ರಾಘವೇಂದ್ರ ಕೆ. (26) ಮೃತಪಟ್ಟ ದುರ್ದೈವಿ.

ಹೆಸರುಘಟ್ಟದಲ್ಲಿ ಟಿವಿಎಸ್ ಶೋರೂಮ್ ನಡೆಸುತ್ತಿದ್ದ ರಾಘವೇಂದ್ರ ಅವರು ಎಂದಿನಂತೆ ನಿನ್ನೆ ರಾತ್ರಿ ಕೆಲಸ ಮುಗಿಸಿಕೊಂಡು ಶೋರೂಮ್ ಬಾಗಿಲು ಹಾಕಿ ತಮ್ಮ ಬುಲೆಟ್ ಬೈಕ್‍ನಲ್ಲಿ ಮನೆಗೆ ತೆರಳುತ್ತಿದ್ದರು. ರಾತ್ರಿ 9.45ರಲ್ಲಿ ನೈಸ್‍ರಸ್ತೆಯ ಬೈರೋಹಳ್ಳಿ ಅಂಡರ್‍ಪಾಸ್ ಬಳಿ ಹೋಗುತ್ತಿದ್ದಾಗ ಅತಿ ವೇಗವಾಗಿ ಮುನ್ನುಗ್ಗಿದ ಯಾವುದೋ ವಾಹನ ಇವರಿಗೆ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೆ ಪರಾರಿಯಾಗಿದೆ.

ಅಪಘಾತದಿಂದಾಗಿ ರಾಘವೇಂದ್ರ ಅವರು ಬೈಕ್‍ನಿಂದ ಕೆಳಗೆ ಬಿದ್ದ ಪರಿಣಾಮ ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿದ ಕೆಂಗೇರಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತ ದೇಹವನ್ನು ರಾಜರಾಜೇಶ್ವರಿನಗರ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin