ಸಂಪುಟ ಸಭೆಯಲ್ಲೂ ಬಿಸಿಬಿಸಿ ಚರ್ಚೆ, ಕೋಲಾಹಲ..!

ಈ ಸುದ್ದಿಯನ್ನು ಶೇರ್ ಮಾಡಿ

Cabinet--01
ಬೆಂಗಳೂರು. ಸೆ.20 : ರಾಜ್ಯ ರಾಜಕಾರಣದಲ್ಲಿ ಅಸ್ಥಿರತೆ ತಾಂಡವವಾಡುತ್ತಿರುವ ಮಧ್ಯೆಯೇ ಇಂದು (ಗುರುವಾರ) ಸಚಿವ ಸಂಪುಟ ಸಭೆ ನಡೆದಿದ್ದರೂ, ಅದಕ್ಕಿಂತಲೂ ಹೆಚ್ಚಾಗಿ ಅನುದಾನ ವಿಚಾರದಲ್ಲಿ ಅಸಮಾಧಾನ ಕಾಡಿದ್ದು ಇದಕ್ಕೆ ಸಿಎಂ ಸಮಾಧಾನ ಮಾಡುವ ರೀತಿ ಮಾತನಾಡಿದ್ದಾರೆ. ಇದಕ್ಕಿಂತ ಹೆಚ್ಚಾಗಿ ದಂಗೆಯ ವಿಷಯ ಕಾಡಿ ಸಂಪುಟ ಸಭೆಯ ನಂತರ ಬಾರೀ ಕೋಲಾಹಲ ಸೃಷ್ಟಿಸಿದ ಘಟನೆ ನಡೆದಿದೆ ಎನ್ನಲಾಗಿದೆ.

ಗುರುವಾದ 5 ಗಂಟೆಗೆ ಸಚಿವ ಸಂಪುಟ ಸಭೆ ಎಂದು ನಿಗದಿಯಾಗಿದ್ದರೂ, ಮುಖ್ಯಮಂತ್ರಿ ಅವರು ಕಾರ್ಯಕ್ರಮದಿಂದ ವಿಳಂಬವಾಗಿ ಬಂದಿದ್ದರಿಂದ ಆರು ಗಂಟೆಗೆ ಆರಂಭವಾಯಿತು. ಮೊದಲಿಗೆ ಸುಮಾರು 23 ಅಂಶಗಳ ಬಗ್ಗೆ ಸಂಪುಟದಲ್ಲಿ ಚರ್ಚೆಯಾಗಬೇಕಿದ್ದರೂ, ವಿಷಯಗಳ ಸಂಖ್ಯೆ ಹೆಚ್ಚಾಗಿ 30ಕ್ಕೂ ಅಕ ವಿಚಾರಗಳು ಮಂಡನೆಯಾಗಿದೆ. ಇದರಲ್ಲಿ ಪ್ರಮುಖವಾಗಿ ಸಿಎಂ ಪ್ರತಿನಿಸುವ ರಾಮನಗರ, ಚನ್ನಪಟ್ಟಣ ಹಾಗೂ ಹಾಸನಕ್ಕೆ ಸಂಬಂಸಿದ ಎರಡೆರದು ಅನುದಾನ ಹಾಗೂ ಕಾಮಗಾರಿಗಳ ವಿಚಾರ ಹೊರತು ಪಡಿಸಿ, ಮಿಕ್ಕೆಲ್ಲವೂ ದಂಗೆಗೆ ಸೀಮಿತವಾಗಿದ್ದರೂ ನಂತರ ಆಯಾ ಮೈತ್ರಿ ಸರ್ಕಾರದ ಕಾಂಗ್ರೆಸ್ ಪಕ್ಷದ ಶಾಸಕರು ಪ್ರತಿನಿಸುವ ಕ್ಷೇತ್ರಗಳಲ್ಲಿಗೆ ಅನುದಾನ ಕಡಿತದ ಅಸಮಾಧಾನ ಬಿಗಿಲೆದ್ದು ನಂತರ ಚರ್ಚೆ ನಡೆದಿದೆ ಎನ್ನಲಾಗಿದೆ.

ಈ ವೇಳೆಯಲ್ಲಿ ಜೆಡಿಎಸ್ ಕ್ಷೇತ್ರಗಳಿಗೆ ಮಾತ್ರ ಅನುದಾನ ಬಿಡುಗಡೆಯಾಗುತ್ತಿದೆ ಎಂಬ ಅಸಮಾ‘ಾನ ವ್ಯಕ್ತವಾಗಿದೆ. ಅಲ್ಲದೆ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಹಾಗೂ ಕಾಮಗಾರಿಗಳು ಹೆಚ್ಚಿಗೆ ದೊರೆಯಬೇಕು ಎಂಬ ಒತ್ತಡವನ್ನೂ ಕಾಂಗ್ರೆಸ್ ಸಚಿವರು ಹಾಕಿದ್ದಾರೆ. ಈ ಹಂತದಲ್ಲಿ ಬಿರುಸಿನ ಮಾತುಕತೆಗಳು ನಡೆದಿದೆ ಎನ್ನಲಾಗಿದೆ.

ಸುಮಾರು ಒಂದು ಗಂಟೆಗಳ ಕಾಲ ನಡೆದ ಬಿಸಿಬಿಸಿ ಚರ್ಚೆಯಲ್ಲಿ, ಬಿಜೆಪಿಯವರು ಆಡಳಿತಕ್ಕಾಗಿ ಪಕ್ಷದ ಶಾಕಸರಿಗೆ ಅಮಿಷ ಒಡ್ಡುತ್ತಿದ್ದಾರೆ. ಇದನ್ನು ತಡೆಯಲು ಕ್ರಮ ಕೈಗೊಳ್ಳಲು ಶಾಸಕರಿಗೆ ಆಯಾ ಕ್ಷೇತ್ರಕ್ಕೆ ಅನುದಾನ ಹಾಗೂ ಕಾಮಗಾರಿಗಳನ್ನು ನೀಡಿ ಸಂತೃಷ್ತಿಗೊಳಿಸುವುದು, ಅತೃಪ್ತರೊಂದಿಗೆ ಕರೆದು ಸಮಾಧಾನ ಪಡಿಸುವ ಸಂಬಂಧ  ಚರ್ಚೆ ನಡೆದಿದೆ. ಆಡಳಿತ ಪಕ್ಷಕ್ಕೆ ಸಂಬಂಸಿದ ಶಾಸಕರ ಕ್ಷೇತ್ರದಲ್ಲಿ ಆಯಾ ಇಲಾಖೆಗಳಿಂದ ‘ಬೇಕು ಬೇಡಗಳ ಹಾಗು ಕಾಮಗಾರಿಗಳನ್ನು ನೀಡಿ ಜನರಿಗೆ ಉತ್ತಮ ಆಡಳಿತ ನೀಡಬೇಕೆಂದು ಚರ್ಚೆಯಾಗಿದೆ.

ಸಚಿವ ಸಂಪುಟ ಸಭೆಯ ನಂತರ ಮೈತ್ರಿ ಅಲುಗಾಡುತ್ತಿರುವ ಬಗ್ಗೆ ಹಾಗೂ ಅದನ್ನು ಉಳಿಸಿಕೊಳ್ಳುವ ಸಂಬಂಧ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಸರ್ಕಾರವನ್ನು ಮುಂದುವರೆಸಿಕೊಂಡು ಹೋಗುವ ವಿಚಾರದ ಬಗ್ಗೆ ಸಹ ಮೌಖಿಕವಾಗಿ ನಿರ್ಣಯ ಕೈಗೊಂಡಿದೆ. ಹೀಗಿದ್ದರೂ ಸಿಎಂ ಅವರ ದಂಗೆಯ ವಿಚಾರವೂ ಪ್ರಸ್ತಾಪವಾಗಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.

# ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು : 

ಮಂಗಳೂರು ಬಂದರಿನಲ್ಲಿರುವ ಮಲೇಷ್ಯಾ ಮರಳನ್ನು ಚೀಲದ ಬದಲಿಗೆ ಟ್ರಕ್ ಗಳಲ್ಲಿ ಮಾರಾಟ ಮಾಳು ಗುರುವಾರ ನಡೆದ ಸಂಪಿಟ ಸಮಿತಿ ಒಪ್ಪಿಗೆ ನೀಡಿದೆ. ಇದೀಗ 1 ಲಕ್ಷ ಟನ್ ಮಷ್ಟು ಮರಳು ದಾಸ್ತಾನಿದ್ದು, ಕೇವಲ 500 ಟನ್ ಮಾರಲಷ್ಟೇ ಎಂಎಸ್ಐಎಲ್ ನಿಂದ ಸಾಧ್ಯವಾಗಿದೆ. ಬ್ಯಾಗ್ ನಲ್ಲಿ ಮಾರುತ್ತಿರುವುದು ಮತ್ತು ಒಂದೇ ಸಂಸ್ಥೆ ಮಾರಾಟ ಮಾಡುತ್ತಿರುವ ಕಾರಣ ಬೆಲೆ ಹೆಚ್ಚಿದೆ. ಖರೀದಿಗೆ ಯಾರೂ ಬಾರದಿರುವ ಕಾರಣ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಬೆಲೆ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ತೀರ್ಮಾನ ಮಾಡಲಾಗಿದೆ.

ಬ್ಯಾಗ್ ಬದಲಿಗೆ ಜಿಪಿಎಸ್ ಅಳವಡಿಸಿ ಟ್ರಕ್ ಗಳಲ್ಲಿ ಮಾರಾಟ ಮಾಡಲು ಸಂಪುಟ ಅನುಮತಿ ನೀಡಿದೆ. ಬೇರೆ ರಾಜ್ಯಗಳಿಗೆ ಮಲೇಷ್ಯಾ ಮರಳು ಸಾಗಿಸಲು ಮಂಗಳೂರು ಬಂದರು ಉಪಯೋಗಿಸಲು ಸಂಪುಟ ಅನುಮತಿ ನೀಡಿದೆ. ಈಗಿರುವ ಮರಳು ದಾಸ್ತಾನನ್ನು ರಾಜ್ಯಕ್ಕೆ ಮಾತ್ರ ಬಳಸಬೇಕು. ಮುಂದೆ ಬರುವ ಆಮದನ್ನು ಸಾಗಿಸಲು ಅನುಮತಿ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

# ಕರಾವಳಿ ನದಿ ಅಧ್ಯಯನ :
ಕರಾವಳಿಯಲ್ಲಿ ಹರಿಯುವ ನದಿಗಳನ್ನು‌ ಅಧ್ಯಯನ ನಡೆಸಲು ಸಂಪುಟ ಒಪ್ಪಿಗೆ ನೀಡಿದೆ. ಈ‌ವರ್ಷ ಸಾಕಷ್ಟು ಮಳೆ ಬಂದಿದೆ.‌ಆದರೂ ಕಳೆದ ವರ್ಷ ಸುಮಾರು 21 ಅಡಿ ಇದ್ದ ನದಿ ಹರಿವು ಈ ಬಾರಿ 12-13 ಅಡಿಗೆ ಕುಸಿದಿದೆ. ಈ ಅಗಾಧ ಬದಲಾವಣೆಗೆ ಕಾರಣ ಹಾಗೂ ಭವುಷ್ಯದ ಬಗ್ಗೆ ಅಧ್ಯಯನ ‌ನಡೆಸಲು ತಜ್ಞರ ಸಮಿತಿ ನೇಮಿಸಲು ಸಮ್ಮತಿ‌ ಸೂಚಿಸಲಾಗಿದೆ.

# ಮುಂಬಡ್ತಿ ಮೀಸಲಾತಿ ಸಂಕಷ್ಟ :
ಕಾನೂನು ಮಾಡಿದರೂ ಮುಂಬಡ್ತಿ ಮೀಸಲಾತಿ ವಿಚಾರ ಬಗೆ ಹರಿಯದಿರುವುದು ಸಂಪುಟದಲ್ಲಿ ಸುದೀರ್ಘ ಚರ್ಚೆ ಆಗಿದೆ. ರಾಷ್ಟ್ರಪತಿ ಅಂಕಿತ ನೀಡಿದ್ದರೂ, ಮುಂಬಡ್ತಿ‌ಮೀಸಲು ರಕ್ಷಿಸುವ ಕಾಯ್ದೆ ಜಾರಿ ಆಗುತ್ತಿಲ್ಲ. ಜಾರಿ ಮಾಡಿದರೆ ನ್ಯಾಯಾಂಗ ನಿಂದನೆ ಅಪಾಯವಿದೆ. ಜಾರಿ ಮಾಡದಿದ್ದರೆ ನಮ್ಮದೇ ಕಾಯ್ದೆಯನ್ನು ಶಿತಲೀಕರಣದಲ್ಲಿ ಇರಿಸಿದಮನತಾಗುತ್ತದೆ. ಈ ಬಗ್ಗೆ ಸಧ್ಯದಲ್ಲೆ ಸಿಎಂ, ಡಿಸಿಎಂ ಹಾಗೂ ಅಡ್ವೋಕೇಟ್ ಜನರಲ್ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.

ರಾಜ್ಯದಲ್ಲಿ ಸಿರಿಧಾನ್ಯ‌ ಬೆಳೆ ವಿಸ್ತೀರ್ಣವನ್ನು 60 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಹೆಚ್ಚಿಸುವ ಅಂದಾಜು 24 ಕೋಟಿ ರೂ. ಯೋಜನೆಗೆ ಒಪ್ಪಿಗೆ. 14 ಸಾವಿರ ಹಾಲು ಒಕ್ಕೂಟದ ಸಿಬ್ಬಂದಿಗೆ ಗುಣಮಟ್ಟದ ಹಾಲು ಸಂಗ್ರಹಕ್ಕಾಗಿ ಪ್ರತಿ ಲೀಟರ್ ಗೆ 20 ಪೈಸೆ ಪ್ರೋತ್ಸಾಹ ಧನ ನೀಡಲು ಒಪ್ಪಿಗೆ. ಈ ಯೋಜನೆಗೆ 27.5 ಕೋಟಿ ರೂ.‌ಅನುದಾನ ಮಂಜೂರು. ಹಾಸನ ಜಿಲ್ಲೆಯಲ್ಲಿ 473 ಕೋಟಿ ರೂ.‌ಅಂದಾಜಿನಲ್ಲಿ ನಿರ್ಮಾಣವಾಗುವ 10-15 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೇರಿಗೆ 50 ಕೋಟಿ ರೂ.‌ಅನುದಾನ. ಆರ್ಯವೈಷ್ಯ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಪ್ರವೇಶ ಪಡೆಯಲು ಜಾತಿ ದೃಢೀಕರಣ ಪತ್ರ ನೀಡಿಕೆ. ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ 371ಜೆ ಜಾರಿ ಕುರಿತು ಹಿರಡಿಸಲಾಗಿರುವ ಆದೇಶಗಳ ಪ್ರಗತಿ ಪರಿಶೀಲನೆಗೆ ರಚಿಸಿರುವ ಸಂಪುಟ ಉಪಸಮಿತಿಗೆ ಘಟನೋತ್ತರ ಅನುಮೋದನೆ. ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ 16.15 ಕೋಟಿ ರೂ.‌ಮೊತ್ತದಲ್ಲಿ ಸ್ಥಾಪನೆಯಾಗಲಿರುವ ಮಹಿಳಾ ಪಾಲಿಟೆಕ್ನಿಕ್ ಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

Facebook Comments

Sri Raghav

Admin