ಆವಾಸ್ ಯೋಜನೆಯ ನಿವಾಸಗಳಲ್ಲಿ ಪ್ರಧಾನಿ-ಸಿಎಂ ಫೋಟೋಗಳನ್ನು ತೆಗೆಯಲು ಹೈಕೋರ್ಟ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Avas Yojana
ಗ್ವಾಲಿಯರ್ (ಮಧ್ಯಪ್ರದೇಶ), ಸೆ. 20- ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ನಿರ್ಮಾಣಗೊಂಡಿರುವ ನಿವಾಸಗಳಲ್ಲಿ ಹಾಕಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಶಿವರಾಜ್‍ಸಿಂಗ್ ಚೌಹಾಣ್ ಅವರ ಫೋಟೋಗಳನ್ನು ತೆಗೆದು ಹಾಕಲು ಮಧ್ಯಪ್ರದೇಶ ಹೈಕೋರ್ಟ್ ಆದೇಶಿಸಿದೆ.

ಕೋರ್ಟ್ ಆದೇಶದಿಂದಾಗಿ ಮಧ್ಯಪ್ರದೇಶದ ಬಿಜೆಪಿ ಸರ್ಕಾರಕ್ಕೆ ಮುಖಭಂಗವಾಗಿದೆ. ಮಧ್ಯಪ್ರದೇಶದ ಗ್ವಾಲಿಯರ್ ಪೀಠದ ನ್ಯಾಯಮೂರ್ತಿಗಳು ಈ ಆದೇಶ ಹೊರಡಿಸಿದ್ದು ಡಿಸೆಂಬರ್ 20 ರೊಳಗೆ ಮಧ್ಯಪ್ರದೇಶದ ಸರ್ಕಾರದಿಂದ ನಿರ್ಮಾಣಗೊಂಡಿರುವ ಪ್ರಧಾನಮಂತ್ರಿ ಅವಾಜ್ ಯೋಜನೆಗಳ ನಿವಾಸಗಳಲ್ಲಿ ಪ್ರಧಾನಿ ಹಾಗೂ ಸಿಎಂರ ಫೋಟೋಗಳನ್ನು ತೆಗೆಸಿ ಯೋಜನೆಯ ಚಿಹ್ನೆಯನ್ನು ಮಾತ್ರ ಬಳಸಲು ಸೂಚಿಸಿದೆ.

ಮಧ್ಯಪ್ರದೇಶದ ಸಂಜಯ್ ಫೋಗಟ್ ಎಂಬುವವರು ಪಿಎಂಎವೈ ನಿವಾಸಗಳ ಮೇಲೆ ಮೋದಿ ಹಾಗೂ ಚೌಹಾಣ್ ಅವರ ಫೋಟೋಗಳನ್ನು ಬಳಸಿರುವುದರ ವಿರುದ್ಧ ಕೋರ್ಟ್‍ನಲ್ಲಿ ಪಿಐಎಲ್ ಸಲ್ಲಿಸಿದ್ದರು. ಸಂಜಯ್ ಪೋಗಾಟ್ ಅವರ ಪರ ವಕೀಲ ವಾದ ಮಂಡಿಸಿ, ಪಿಎಂಎವೈ ನಿವಾಸಗಳು ಸಾರ್ವಜನಿಕರ ಹಣದಿಂದಲೇ ನಿರ್ಮಾಣಗೊಳ್ಳುತ್ತಿದೆ ಹೊರತು ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಣವನ್ನು ಬಳಕೆ ಮಾಡುವುದಿಲ್ಲ. ಆದ್ದರಿಂದ ಆ ಮನೆಗಳ ಮೇಲೆ ಕೇವಲ ಯೋಜನೆಯ ಚಿಹ್ನೆಯನ್ನು ಬಳಸಬೇಕೆ ವಿನಃ ಮೋದಿ ಹಾಗೂ ಶಿವರಾಜ್‍ಸಿಂಗ್ ಚೌಹಾಣ್ ಅವರ ಭಾವಚಿತ್ರ ಗಳಲ್ಲ ಎಂದು ವಾದ ಮಂಡಿಸಿದ್ದರು.

ಏಪ್ರಿಲ್‍ನಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ನಿರ್ಮಾಣ ಗೊಂಡಿರುವ ಈ ಮನೆಗಳಲ್ಲಿ ಮನೆಯ ಪ್ರವೇಶ ದ್ವಾರದಲ್ಲೇ ಪ್ರಧಾನಿ ಹಾಗೂ ಸಿಎಂ ಭಾವಚಿತ್ರವನ್ನು ಬರೆಸಬೇಕೆಂದು ನಗರ ಆಡಳಿತ ಮತ್ತು ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಮೀಷನರ್ ಮಂಜು ಶರ್ಮಾ ಅವರು ಆದೇಶಿಸಿದ್ದರು.

Facebook Comments

Sri Raghav

Admin