ಶಾಂತಿ ಮಾತುಕತೆ ಪುನರಾರಂಭಕ್ಕೆ ಮೋದಿಗೆ ಪತ್ರ ಬರೆದ ಪಾಕ್ ಪಿಎಂ ಇಮ್ರಾನ್

ಈ ಸುದ್ದಿಯನ್ನು ಶೇರ್ ಮಾಡಿ

Imran-akhan--1

ನವದೆಹಲಿ, ಸೆ.20- ಒಂದೆಡೆ ಗಡಿಯಲ್ಲಿ ಪಾಕ್ ಸೈನಿಕರು ಭಾರತದ ಯೋಧರ ತಲೆ ಕತ್ತರಿಸುತ್ತಿದ್ದರೆ ಇತ್ತ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಶಾಂತಿ ಮಾತುಕತೆಯ ಪ್ರಸ್ತಾಪ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಪಾಕಿಸ್ತಾನ ಸಹವರ್ತಿ ಇಮ್ರಾನ್ ಖಾನ್ ಉಭಯ ದೇಶಗಳ ನಡುವಣ ಶಾಂತಿ ಮಾತುಕತೆಯನ್ನು ಪುನರ್ ಆರಂಭಿಸುವಂತೆ ಮನವಿ ಮಾಡಿದ್ದಾರೆ. ಬಾರತ-ಪಾಕ್ ನಡುವಣ ಸಂಬಂಧ ಸುಧಾರಣೆಯಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ. ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ಇಮ್ರಾನ್ ಹೆಚ್ಚು ನಿರ್ದಿಷ್ಟವಾಗಿ ಹಾಗೂ ಪ್ರಮುಖವಾಗಿ ಎರಡೂ ರಾಷ್ಟ್ರಗಳ ವಿದೇಶಾಂಗ ವ್ಯವಹಾರಗಳ ಸಚಿವರಾದ ಸುಷ್ಮಾ ಸ್ವರಾಜ್ ಮತ್ತು ಶಾ ಮೆಹಮೂದ್ ಖುರೇಷಿ ಅವರ ನಡುವೆ ಮಾತುಕತೆ ನಡೆಯಬೇಕೆಂಬುದನ್ನು ಪ್ರಸ್ತಾಪಿಸಿದ್ದಾರೆ.

ಈ ತಿಂಗಳಾಂತ್ಯದಲ್ಲಿ ನಡೆಯುವ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ(ಯುಎನ್‍ಜಿಎ) ಸಂದರ್ಭದಲ್ಲಿ ಇವರಿಬ್ಬರು ಪರಸ್ಪರ ಶಾಂತಿ ಸಮಾಲೋಚನೆ ಮರುಸ್ಥಾಪಿಸಲು ಚರ್ಚಿಸಬೇಕೆಂಬುದು ಪಾಕ್ ಪ್ರಧಾನಮಂತ್ರಿಯ ಬಯಕೆಯಾಗಿದೆ. ಉಭಯ ದೇಶಗಳ ನಡುವೆ ಅರ್ಥಪೂರ್ಣ ಮತ್ತು ರಚನಾತ್ಮಕ ಹೊಂದಾಣಿಕೆಗಾಗಿ ಮೋದಿ ಅವರ ಸಂವಹನಕ್ಕೆ ಇಮ್ರಾನ್ ಪ್ರತ ಮುಖೇನ ನೀಡಿರುವ ಪೂರಕ ಪ್ರತಿಕ್ರಿಯೆ ಇದಾಗಿದೆ.

ಸಾರ್ವತ್ರಿಕ ಚುನಾವಣೆಯಲ್ಲಿ ಜಯ ಸಾಧಿಸಿದ ನಂತರ ಇಮ್ರಾನ್ ಸಂಬಂಧ ಸುಧಾರಣೆಯಲ್ಲಿ ಭಾರತವು ಒಂದು ಹೆಜ್ಜೆ ಮುಂದಿಟ್ಟರೆ ಪಾಕಿಸ್ಥಾನವು ಎರಡು ಹೆಜ್ಜೆ ಮುಂದಿಡುತ್ತದೆ ಎಂದು ಹೇಳಿದ್ದರು. ಅದಕ್ಕೆ ಸ್ಪಂದನೆಯಾಗಿ ಇಮ್ರಾನ್ ನಡೆ ಆಶಾದಾಯಕ ಬೆಳವಣಿಗೆಯಾಗಿದೆ.

ನ್ಯೂಯಾರ್ಕ್‍ನಲ್ಲಿ ನಡೆಯವು ಯುಎನ್‍ಜಿಎ ಸಭೆಯಲ್ಲಿ ಸುಷ್ಮಾ ಮತ್ತು ಖುರೇಷಿ ಪರಸ್ಪರ ಮಾತುಕತೆ ನಡೆಸಲಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಕಳೆದ ಕೆಲವು ವಾರಗಳಿಂದ ವ್ಯಾಪಕ ಊಹಾಪೋಹಗಳ ನಡುವೆಯೇ ಉಭಯ ದೇಶಗಳ ವಿದೇಶಾಂಗ ಸಚಿವರು ಸಮಾಲೋಚನೆ ಮೂಲಕ ಶಾಂತಿ ಚರ್ಚೆ ಮರು ಆರಂಭಕ್ಕೆ ಮುನ್ನುಡಿ ಬರೆಯಬೇಕೆಂಬುದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇಚ್ಚೆಯಾಗಿದೆ.

Facebook Comments

Sri Raghav

Admin