ಚಕ್ರ ಸ್ಫೋಟಗೊಂಡು ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ, 185 ಪ್ರಯಾಣಿಕರು ಸೇಫ್

ಈ ಸುದ್ದಿಯನ್ನು ಶೇರ್ ಮಾಡಿ

Indigo

ಅಹಮದಾಬಾದ್, ಸೆ.20-ದೇಶದ ಮುಂಚೂಣಿಯಲ್ಲಿರುವ ಇಂಡಿಗೋ ಸಂಸ್ಥೆಯ ವಿಮಾನಗಳಲ್ಲಿ ದೋಷಗಳು ಕಂಡುಬರುತ್ತಿರುವ ಬೆನ್ನಲ್ಲೇ ಮತ್ತೊಂದು ಆತಂಕದ ಘಟನೆ ನಡೆದಿದೆ. ಮುಂಬೈನಿಂದ ಬರುತ್ತಿದ್ದ 185 ಪ್ರಯಾಣಿಕರಿದ್ದ ಇಂಡಿಗೋ ವಿಮಾನದ ಚಕ್ರ ಸ್ಫೋಟಗೊಂಡು ಅಹಮದಾಬಾದ್‍ನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಿನ್ನೆ ನಡೆದಿದೆ.

6ಎಫ್-361 ವಿಮಾನ(ಎ-320 ವಿಮಾನದೊಂದಿಗೆ ಕಾರ್ಯನಿರ್ವಹಣೆ) ಮುಂಬೈನಿಂದ ಬರುತ್ತಿದ್ದಾಗ ಈ ಘಟನೆ ನಡೆಯಿತು. ತಕ್ಷಣ ಅಹಮದಾಬಾದ್‍ನಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಲಾಯಿತು. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಏರ್ ಪೋರ್ಟ್  ನಿರ್ದೇಶಕ ಮನೋಜ್ ಗಂಗಲ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin