ಜಪಾನ್ ಮರು ಚುನಾವಣೆಯಲ್ಲಿ ಪ್ರಧಾನಿ ಅಬೆ ಪಕ್ಷಕ್ಕೆ ಭರ್ಜರಿ ಗೆಲುವು

ಈ ಸುದ್ದಿಯನ್ನು ಶೇರ್ ಮಾಡಿ

Japan--01

ಟೋಕಿಯೊ, ಸೆ.20 (ಪಿಟಿಐ)- ಜಪಾನ್ ಪ್ರಧಾನಮಂತ್ರಿ ಶಿನ್‍ಜೋ ಅಬೆ ನೇತೃತ್ವದ ಆಡಳಿತರೂಢ ಲಿಬರಲ್ ಡೆಮೊಕ್ರಾಟಿಕ್ ಪಾರ್ಟಿ(ಎಲ್‍ಡಿಪಿ) ಪಕ್ಷವು ಮರು ಚುನಾವಣೆಯಲ್ಲಿ ಗೆಲುವು ದಾಖಲಿಸಿದೆ.  ಈ ಜಯದೊಂದಿಗೆ ಅಬೆ ಪ್ರಧಾನಿಯಾಗಿ ಮುಂದುವರಿಯಲಿದ್ದು, ಉದಯರವಿ ನಾಡಿನಲ್ಲಿ ದೀರ್ಘಾವಧಿ ಆಡಳಿತದ ಹೊಸ ದಾಖಲೆ ನಿರ್ಮಿಸಿದ್ದಾರೆ. 2012ರಲ್ಲಿ ಪ್ರಧಾನಿಯಾಗಿದ್ದ ಅವರು ಮತ್ತೆ ಇನ್ನೂ ಮೂರು ವರ್ಷಗಳ ಕಾಲ ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದ್ದಾರೆ.
63 ವರ್ಷದ ಅಬೆ ಮತ್ತೆ ಪ್ರಧಾನಿಯಾಗಿರುವುದರಿಂದ ದೇಶದ ಸಂವಿಧಾನ ಸುಧಾರಣೆ ಮಾಡಬೇಕೆಂಬ ಕನಸು ಸಾಕಾರಗೊಳ್ಳಲಿದೆ.   ಮರು ಚುನಾವಣೆಯಲ್ಲಿ ಅಬೆ ನೇತೃತ್ವದ ಪಕ್ಷ 553 ಮತಗಳನ್ನು ಗಳಿಸಿ ವಿಜಯ ದುಂದುಭಿ ಮೊಳಗಿಸಿದ್ದರೆ, ಮಾಜಿ ರಕ್ಷಣಾ ಸಚಿವ ಶಿಗುರು ಇಶಿಬಾ 254ಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

Facebook Comments

Sri Raghav

Admin