ಜೆಟ್ ಏರ್‍ವೇಸ್ ಪ್ರಯಾಣಿಕರ ಮೂಗು-ಕಿವಿಯಲ್ಲಿ ರಕ್ತಸ್ರಾವ..!

ಈ ಸುದ್ದಿಯನ್ನು ಶೇರ್ ಮಾಡಿ

Jet-Airways

ನವದೆಹಲಿ, ಸೆ.20-ಕ್ಯಾಬಿನ್ ಒತ್ತಡ(ಪ್ರೆಷರ್) ಸಮಸ್ಯೆಯಿಂದಾಗಿ ಹಲವಾರು ಪ್ರಯಾಣಿಕರ ಮೂಗು ಮತ್ತು ಕಿವಿಗಳಲ್ಲಿ ರಕ್ತಸ್ರಾವವಾದ ಆತಂಕಕಾರಿ ಘಟನೆ ಜೆಟ್ ಏರ್‍ವೇಸ್ ವಿಮಾನದೊಂದರಲ್ಲಿ ಸಂಭವಿಸಿದೆ. ಪ್ರಯಾಣಿಕರ ಸುರಕ್ಷತೆ ವಿಚಾರದಲ್ಲಿ ಜೆಟ್ ಏರ್‍ವೇಸ್ ಸಂಸ್ಥೆ ಈಗಾಗಲೇ ವಿವಾದಕ್ಕೆ ಸಿಲುಕಿರುವಾಗಲೇ ಈ ಘಟನೆ ಮತ್ತೊಂದು ಕಳಂಕವಾಗಿದೆ.

ಮುಂಬೈನಿಂದ ಜೈಪುರ್‍ಗೆ ತೆರಳುತ್ತಿದ್ದ ಬೋಯಿಂಗ್ 737 ವಿಮಾನದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕರ ಮೂಗು ಮತ್ತು ಕಿವಿಗಳಲ್ಲಿ ರಕ್ತ ಸೋರಿದ ನಂತರ ವಿಮಾನ ಮುಂಬೈಗೆ ಹಿಂದಿರುಗಿತು.

ವಿಮಾನ ಮೇಲೇರುವಾಗ ಸಿಬ್ಬಂದಿ ಒತ್ತಡ ನಿಯಂತ್ರಣ ಸ್ವಿಚ್ ಆಯ್ಕೆ ಮಾಡಲು ಮರೆತರು. ಇದರಿಂದಾಗಿ ಕ್ಯಾಬಿನ್ ಒತ್ತಡದಲ್ಲಿ ಏರುಪೇರಾಯಿತು. ಕೆಲ ಪ್ರಯಾಣಿಕರ ಮೂಗಿನಲ್ಲಿ ರಕ್ತಸ್ರಾವವಾಯಿತು. ತಕ್ಷಣ ಅವರಿಗೆ ಆಮ್ಲಜನರ ಮಾಸ್ಕ್‍ಗಳನು ನೀಡಲಾಯಿತು ಎಂದು ವಿಮಾನಯಾನ ನಿಯಂತ್ರಣ ಸಂಸ್ಥೆ ಡಿಜಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಮಾನದಲ್ಲಿ 166 ಪ್ರಯಾಣಿಕರಿದ್ದರು. ಇವರಲ್ಲಿ 30 ಮಂದಿಗೆ ಈ ಸಮಸ್ಯೆ ಕಾಣಿಸಿಕೊಂಡಿತು. ಕೆಲವರಿಗೆ ಮೂಗಿನಲ್ಲಿ, ಮತ್ತಿತ್ತರ ಪ್ರಮಾಣಿಕರಿಗೆ ಕಿವಿಯಲ್ಲಿ ರಕ್ತ ಸೋರಿತು. ಇನ್ನೂ ಕೆಲವರಿಗೆ ತಲೆನೋವು ಕಾಣಿಸಿಕೊಂಡಿತು ಎಂದು ಅವರು ಹೇಳಿದ್ದಾರೆ.  ಜೈಪುರಕ್ಕೆ ತೆರಳುತ್ತಿದ್ದ ಈ ವಿಮಾನವನ್ನು ತಕ್ಷಣ ಮುಂಬೈಗೆ ವಾಪಸ್ ತಂದು ತೊಂದರೆಗೆ ಒಳಗಾದ ಪ್ರಯಾಣಿಕರಿಗೆ ವಿಮಾನನಿಲ್ದಾಣ ವೈದ್ಯರಿಂದ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Facebook Comments

Sri Raghav

Admin