24 ಹೊಸ ಆರೋಪಗಳಲ್ಲಿ ಮಲೇಷ್ಯಾ ಮಾಜಿ ಪ್ರಧಾನಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Arrested--01
ಕೌಲಾಲಂಪೂರ್, ಸೆ.20-ಅಧಿಕಾರ ದುರುಪಯೋಗ, ಹಣ ದುರ್ಬಳಕೆ ಮತ್ತು ಭ್ರಷ್ಟಾಚಾರಗಳ ಸುಳಿಗೆ ಸಿಲುಕಿರುವ ಮಲೇಷ್ಯಾ ಮಾಜಿ ಪ್ರಧಾನಮಂತ್ರಿ ನಜೀಬ್ ರಜಾಕ್ ಅವರನ್ನು ಪೊಲೀಸರು ಮತ್ತು ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಬಂಧಿಸಿದೆ. ಕನಿಷ್ಠ 24 ಹೊಸ ಆರೋಪಗಳ ಸಂಬಂಧ ಅವರನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ರಾಷ್ಟ್ರ ಮತ್ತು ರಾಜ್ಯ ಹೂಡಿಕೆ ನಿಧಿಯಿಂದ ಕೋಟ್ಯಂತರ ಡಾಲರ್‍ಗಳ ಲೂಟಿ ಪ್ರಕರಣದಲ್ಲಿ ರಜಾಕ್ ಹೆಸರು ಪ್ರಮುಖವಾಗಿ ಕೇಳಿ ಬಂದಿದೆ. ಅಧಿಕಾರ ದುರ್ಬಳಕೆ, ಹಣಕಾಸು ಅವ್ಯವಹಾರ, ಅಕ್ರಮ ಹಣ ಸ್ವೀಕಾರ, ಅನಧಿಕೃತ ನಿಧಿ ಸಂಗ್ರಹ ಮತ್ತು ಭ್ರಷ್ಟಾಚಾರಗಳಿಗೆ ಸಂಬಂಧಪಟ್ಟಂತೆ ಕನಿಷ್ಟ ಎರಡು ಡಜನ್ ಆರೋಪಗಳನ್ನು ಈಗ ಮಲೇಷ್ಯಾ ಮಾಜಿ ಪ್ರಧಾನಿ ಎದುರಿಸಬೇಕಿದೆ.

ತಮ್ಮ ಖಾತೆಗೆ 681 ದಶಲಕ್ಷ ಡಾಲರ್‍ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣದ ಸಂಬಂಧ ನಿನ್ನೆ ಅಧಿಕಾರಿಗಳು ಅವರನ್ನು ಬಂಧಿಸಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ರಾಷ್ಟ್ರೀಯ ಪೊಲೀಸ್ ಉಪ ಮುಖ್ಯಸ್ಥ ನೂರ್ ರಷೀದ್ ಹೇಳಿದ್ದಾರೆ.

Facebook Comments

Sri Raghav

Admin