ಎಸ್‍ಬಿಐ ಬ್ಯಾಂಕ್‍ಗೆ ಬೆಂಕಿ ಬಿದ್ದು ಹಣ, ಒಡವೆ, ದಾಖಲೆಗಳು ಭಸ್ಮ

ಈ ಸುದ್ದಿಯನ್ನು ಶೇರ್ ಮಾಡಿ

SBI-Bank
ಗುಬ್ಬಿ, ಸೆ.20- ತಾಲ್ಲೂಕಿನ ಸಿ.ಎಸ್.ಪುರ ಗ್ರಾಮದ ಎಸ್‍ಬಿಐ ಬ್ಯಾಂಕ್‍ಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಬ್ಯಾಂಕ್‍ನಲ್ಲಿದ್ದ ಹಣ, ಒಡವೆ, ದಾಖಲಾತಿಗಳು, ಪೀಠೋಪಕರಣ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟು ಕರಕಲಾಗಿದೆ. ಇಂದು ಬೆಳಗಿನ ಜಾವ 5.30ರ ಸಮಯದಲ್ಲಿ ಬ್ಯಾಂಕ್‍ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದ್ದು , ನೋಡು ನೋಡುತ್ತಿದ್ದಂತೆಯೇ ಬೆಂಕಿ ಮುಗಿಲೆತ್ತರಕ್ಕೆ ಆವರಿಸಿದೆ.

ಭಾರೀ ಪ್ರಮಾಣದ ಬೆಂಕಿಯನ್ನು ಕಂಡ ಗ್ರಾಮಸ್ಥರು ಬ್ಯಾಂಕಿನ ಓಡಿ ಬಂದು ನೋಡಿದಾಗ ಬೆಂಕಿಯ ಪ್ರಮಾಣ ಹೆಚ್ಚಾಗಿದ್ದರಿಂದ ನಂದಿಸಲು ಸಾಧ್ಯವಾಗಲಿಲ್ಲ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಸುದ್ದಿ ಮುಟ್ಟಿಸಿದ್ದು , ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸತತ ಎರಡು, ಮೂರು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.

ಈ ವೇಳೆಗಾಗಲೇ ಬ್ಯಾಂಕ್‍ನಲ್ಲಿದ್ದ ದಾಖಲಾತಿಗಳು, ಒಡವೆಗಳು ಸುಟ್ಟು ಕರಕಲಾಗಿವೆ ಎನ್ನಲಾಗಿದೆ. ಬ್ಯಾಂಕಿನಲ್ಲಿ ಎಷ್ಟು ಹಣ ಮತ್ತು ಆಭರಣ ಸುಟ್ಟು ಕರಕಲಾಗಿವೆ ಹಾಗೂ ಯಾವ್ಯಾವ ದಾಖಲೆಗಳು ಸುಟ್ಟಿ ಕರಕಲಾಗಿವೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

ಬ್ಯಾಂಕ್‍ನ ಶಾಖೆಗೆ ಸೂಕ್ತ ಭದ್ರತೆ ಇಲ್ಲ. ಅಗ್ನಿ ನಂದಿಸುವ ಉಪಕರಣಗಳು ಇಲ್ಲದಿರುವುದರಿಂದ ಈ ಬೆಂಕಿ ಅವಘಡ ಸಂಭವಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಸ್ಥಳಕ್ಕೆ ಬ್ಯಾಂಕಿನ ಮೇಲಧಿಕಾರಿಗಳು , ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin