ಪಿಪಿಎಫ್ ಸೇರಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರದಲ್ಲಿ ಹೆಚ್ಚಳ

ಈ ಸುದ್ದಿಯನ್ನು ಶೇರ್ ಮಾಡಿ

SMa-Saving--01

ನವದೆಹಲಿ, ಸೆ.20-ರಾಷ್ಟ್ರೀಯ ಉಳಿತಾಯ ಪತ್ರ(ಎನ್‍ಎಸ್‍ಸಿ) ಹಾಗೂ ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್) ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಕೇಂದ್ರ ಸರ್ಕಾರ ಶೇ.0.4ರಷ್ಟು ಹೆಚ್ಚಿಸಿದೆ. ಐದು ವರ್ಷ ಅವಧಿ ಠೇವಣಿ, ಮರುಕಳಿಸುವ ಠೇವಣಿ ಯೋಜನೆ ಹಾಗೂ ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಅನುಕ್ರಮವಾಗಿ ಶೇ.7.8, 7.3 ಹಾಗೂ 8.7ರಷ್ಟು ಹೆಚ್ಚಿಸಲಾಗಿದೆ.

ಬ್ಯಾಂಕುಗಳಲ್ಲಿ ಠೇವಣಿ ದರಗಳ ಹೆಚ್ಚಳದೊಂದಿಗೆ ಆಕ್ಟೋಬರ್-ಡಿಸೆಂಬರ್ ತೈಮಾಸಿಕ ಅವಧಿಗಾಗಿ ಈ ಏರಿಕೆ ಮಾಡಲಾಗಿದೆ. ತ್ರೈಮಾಸಿಕ ಆಧಾರದ ಮೇಲೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳ ಅಧಿಸೂಚನೆ ಹೊರಡಿಸಲಾಗುತ್ತದೆ. ಅದರಂತೆ ಎನ್‍ಎಸ್‍ಸಿ ಮತ್ತು ಪಿಪಿಎಫ್ ಸೇರಿದಂತೆ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರದಲ್ಲಿ ಶೇ.0.4ರಷ್ಟು ಹೆಚ್ಚಳವಾಗಲಿದೆ.

ಈ ವರ್ಷ ಆಕ್ಟೋಬರ್ 1ರಿಂದ ಆರಂಭವಾಗಿ ಡಿಸೆಂಬರ್ 31ಕ್ಕೆ ಕೊನೆಗೊಳ್ಳುವ 2018=19ನೇ ಹಣಕಾಸು ಸಾಲಿನ ತೃತೀಯ ತ್ರೈಮಾಸಿಕ ಅವಧಿಗಾಗಿ ವಿವಿಧ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

Facebook Comments

Sri Raghav

Admin