ಶಹಬಾಜ್ ನದೀಮ್ ಹೊಸ ದಾಖಲೆ

ಈ ಸುದ್ದಿಯನ್ನು ಶೇರ್ ಮಾಡಿ

Nadeem

ಚೆನ್ನೈ, ಸೆ. 20- ಜರ್ಖಾಂಡ್‍ನ ಸ್ಪಿನ್ನರ್ ಶಹಬಾಜ್ ನದೀಮ್ ವಿಜಯ ಹಾಜರೆ ಸರಣಿಯಲ್ಲಿ ನೂತನ ದಾಖಲೆಯನ್ನು ಬರೆದಿದ್ದಾರೆ. ರಾಜಸ್ಥಾನ ತಂಡದ ವಿರುದ್ಧ ನದೀಮ್ ಅವರು 10 ಓವರ್‍ಗಳಲ್ಲಿ 4 ಮೇಡಿನ್ ಒಳಗೊಂಡಂತೆ 10 ರನ್‍ಗಳನ್ನು ನೀಡಿ 8 ವಿಕೆಟ್‍ಗಳನ್ನು ಕಬಳಿಸುವ ಮೂಲಕ ಈ ದಾಖಲೆ ನಿರ್ಮಿಸಿದ್ದಾರೆ.

ಈ ಹಿಂದೆ ನವದೆಹಲಿಯ ರಾಹುಲ್ ಸಾಂಗ್ವಿ ಹಿಮಾಚಲ ಪ್ರದೇಶದ ವಿರುದ್ಧ 1997-98ರಲ್ಲಿ 15 ರನ್‍ಗಳನ್ನು ನೀಡಿ 8 ವಿಕೆಟ್ ಕೆಡವಿದ್ದು ದಾಖಲೆಯಾಗಿತ್ತು. ನಂತರದ ಸ್ಥಾನಗಳಲ್ಲಿ ಶ್ರೀಲಂಕಾದ ವೇಗಿ ಚಾಮಿಂಡ ವಾಸ್ 2001-2002ರಲ್ಲಿ ಜಿಂಬಾಬ್ವೆ ವಿರುದ್ಧ 19 ರನ್‍ಗಳಿಗೆ 8 ವಿಕೆಟ್, ತರಕ ಕೊಟ್ಟೆಹೆವಾ ರಂಗಮ ತಂಡದ ವಿರುದ್ಧ 20 ರನ್‍ಗಳಿಗೆ 8 ವಿಕೆಟ್, ಡರ್ಬಿಶೈರ್ ತಂಡದ ಮೈಕಲ್ ಹೋಲ್ಡಿಂಗ್ ಸುಸೆಕ್ಸ್ ವಿರುದ್ಧ 21 ರನ್‍ಗಳಿಗೆ 8 ವಿಕೆಟ್‍ಗಳನ್ನು ಕಬಳಿಸಿದ್ದಾರೆ.

ಶಹಬಾಜ್ ನದೀಮ್ ಅವರ ಮಾರಕ ಬೌಲಿಂಗ್‍ನಿಂದಾಗಿ ರಾಜಸ್ಥಾನ 28.3 ಓವರ್‍ಗಳಲ್ಲೇ 73 ರನ್‍ಗಳಿಗೆ ಸರ್ವಪತನಗೊಂಡಿತು. ಜಾರ್ಖಂಡ್ 14.3 ಓವರ್‍ಗಳಲ್ಲಿ 3 ವಿಕೆಟ್‍ಗಳನ್ನು ಕಳೆದುಕೊಂಡು 76 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.

Facebook Comments

Sri Raghav

Admin