ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಸ್ವಾಮೀಜಿಯೊಬ್ಬರ ಶಿಷ್ಯ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Swamiji--01

ಮೈಸೂರು, ಸೆ.21-ಪತ್ರಕರ್ತನ ಪತ್ನಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸ್ವಾಮೀಜಿಯೊಬ್ಬರ ಶಿಷ್ಯನನ್ನು ಕುವೆಂಪು ನಗರದ ಪೊಲೀಸರು ಬಂಧಿಸಿದ್ದಾರೆ.
ಅನಿಲ್ ಆಚಾರ್ಯ ಬಂಧಿತ ಆರೋಪಿ. ಈತ ಶ್ರೀ ವಿದ್ಯಾಹಂಸ ಭಾರತಿ ಸ್ವಾಮೀಜಿಯ ಶಿಷ್ಯ.

ರಾಮಕೃಷ್ಣ ನಗರದಲ್ಲಿನ ಪತ್ರಕರ್ತ ರಾಜೇಶ್ ಬೋರೆ ಅವರ ಮನೆಗೆ ಸೆ.4 ರಂದು ವಿದ್ಯಾಹಂಸ ಭಾರತಿ ಸ್ವಾಮೀಜಿ ಹಾಗೂ ಕೆಲವರು ತೆರಳಿ ರಾಜೇಶ್ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎನ್ನಲಾಗಿದೆ.ಈ ಹಿನ್ನೆಲೆಯಲ್ಲಿ ಪತ್ರಕರ್ತನ ಪತ್ನಿ ಠಾಣೆಗೆ ತೆರಳಿ ಸೆ.7 ರಂದು ನನ್ನ ಪತಿ ರಾಜೇಶ್ ಬೋರೆ ಸ್ವಾಮೀಜಿಯೊಂದಿಗೆ ಸೇರಿ ತನಗೆ ಲೈಂಗಿಕ ಕಿರುಕುಳ ನೀಡಿದರೆಂದು ಐದು ಮಂದಿ ವಿರುದ್ಧ ದೂರು ನೀಡಿದ್ದರು.

ದೂರಿನ ನಂತರ ಸ್ವಾಮೀಜಿ ಮತ್ತು ಈಕೆಯ ಪತಿ ತಲೆ ಮರೆಸಿಕೊಂಡಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ಸ್ವಾಮೀಜಿ ಶಿಷ್ಯನೊಬ್ಬನನ್ನು ಬಂಧಿಸಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಸ್ವಾಮೀಜಿ ಶಿಷ್ಯ ಅನಿಲ್ ಸಹ ಇದ್ದನೆಂಬುದನ್ನು ನೊಂದ ಮಹಿಳೆ ಗುರುತಿಸಿದ್ದಾರೆ. ಉಳಿದವರ ಬಂಧನಕ್ಕೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin