Shocking : ಗುಜರಾತ್‍ನ ಗಿರ್ ಅರಣ್ಯದಲ್ಲಿ 12 ಸಿಂಹಗಳ ಮೃತದೇಹ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Lions--01

ರಾಜ್‍ಕೋಟ್, ಸೆ.21-ಗುಜರಾತ್‍ನ ವಿಶ್ವವಿಖ್ಯಾತ ಗಿರ್ ಅರಣ್ಯದಲ್ಲಿ 12 ಸಿಂಹಗಳ ಮೃತದೇಹಗಳು ಪತ್ತೆಯಾಗಿದ್ದು, ಈ ಘಟನೆ ಬಗ್ಗೆ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಎಂಟು ಸಿಂಹಗಳು ಪರಸ್ಪರ ಕಾದಾಟದಲ್ಲಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.   ಗಿರ್(ಪೂರ್ವ) ವಿಭಾಗ ಅದರಲ್ಲೂ ಮುಖ್ಯವಾಗಿ ಡಲ್ಕಾನಿಯಾ ವಲಯದಲ್ಲಿ ಕಳೆದ ಕೆಲವು ದಿನಗಳಿಂದ ಸಿಂಹಗಳು ಸಾವಿಗೀಡಾಗಿದ್ದು, ಅವುಗಳ ಮೃತದೇಹಗಳು ಪತ್ತೆಯಾಗಿವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ. ಪುರುಷೋತ್ತಮ ಹೇಳಿದ್ದಾರೆ.

ಆಡಳಿತಾತ್ಮಕ ಉದ್ದೇಶಗಳಿಗಾಗಿ ಗಿರ್ ಅರಣ್ಯವನ್ನು ಪೂರ್ವ ಮತ್ತು ಪಶ್ವಿಮ ವಲಯವನ್ನಾಗಿ ವಿಂಗಡಿಸಲಾಗಿದೆ. ಬುಧವಾರ ಅಮ್ರೇಲಿ ಜಿಲ್ಲೆಯ ರಜುಲಾ ಬಳಿ ಅರಣ್ಯ ಪ್ರದೇಶದಲ್ಲಿ ಹೆಣ್ಣು ಸಿಂಹದ ಕಳೆಬರ ಪತ್ತೆಯಾಯಿತು. ಅದೇ ದೀನ ಡಲ್ಕಾನಿಯಾ ವಲಯದಲ್ಲಿ ಇನ್ನೂ ಮೂರು ಸಿಂಹಗಳ ಮೃತದೇಹಗಳು ಕಂಡುಬಂದವು. ಕೆಲವು ದಿನಗಳಲ್ಲಿ ಈ ಪ್ರದೇಶಗಳಲ್ಲಿ ಇನ್ನೂ ಏಳು ಸಿಂಹಗಳ ಮೃತಪಟ್ಟಿವೆ ಎಂದು ಅವರು ತಿಳಿಸಿದ್ದಾರೆ.

ಮೃತ ಸಿಂಹಗಳ ಒಳಾಂಗಗಳ ಮಾದರಿಗಳನ್ನು ಸಂಗ್ರಹಿಸಿ ಮರಣೋತ್ತರ ಪರೀಕ್ಷೆಗಾಗಿ ಜುನಗಢ್ ಪಶುವೈದ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಡಿಎಫ್‍ಒ ತಿಳಿಸಿದ್ದಾರೆ.

Lions--02

ಸಿಂಹಗಳ ಸಾವಿನ ಬಗ್ಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ) ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಾಜ್‍ಕುಮಾರ್ ಗುಪ್ರಾ ಹೇಳಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಎಂಟು ಸಿಂಹಗಳು ಪರಸ್ಪರ ಕಾಳಗದಲ್ಲಿ ಮೃತಪಟ್ಟಿದ್ದು, ಇನ್ನೂ ಮೂರು ವನ್ಯಜೀವಿಗಳ ಸಾವಿಗೆ ವರದಿ ಲಭಿಸಿದ ನಂತರ ಕಾರಣ ತಿಳಿಯಲಿದೆ ಎಂದು ಡಾ.ಗುಪ್ತಾ ತಿಳಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin