ಛತ್ತೀಸ್‍ಗಢದಲ್ಲಿ ಅಜಿತ್ ಜೋಗಿ ಜೊತೆ ಮಾಯಾವತಿ ದೋಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Mayavati--01

ರಾಯ್‍ಪುರ್, ಸೆ.21- ಛತ್ತೀಸ್‍ಗಢ ವಿಧಾನಸಭೆ ಚುನಾವಣಾ ರಣರಂಗ ಕುತೂಹಲ ಘಟ್ಟ ತಲುಪಿದ್ದು, ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ನಾಯಕಿ ಮಾಯಾವತಿ, ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ನೇತೃತ್ವದ ಜನತಾ ಕಾಂಗ್ರೆಸ್ ಛತ್ತೀಸ್‍ಗಡ್(ಜೆಸಿಸಿ) ಜೊತೆ ಮೈತ್ರಿಗೆ ಮುಂದಾಗಿದ್ದಾರೆ. ಅಲ್ಲದೇ ಜೋಗಿಯನ್ನು ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಮಾಯಾವತಿಯ ಈ ದಿಢೀರ್ ನಡೆ ಯಿಂದಾಗಿ ಬಿಜೆಪಿ ವಿರುದ್ಧ ಮಹಾ ಮೈತ್ರಿಕೂಟ ರಚನೆಗೆ ಸಜ್ಜಾಗಿದ್ದ ಕಾಂಗ್ರೆಸ್‍ಗೆ ದೊಡ್ಡ ಹೊಡೆತ ಬಿದ್ದಿದೆ. ಅದೂ ಅಲ್ಲದೇ ಕಾಂಗ್ರೆಸ್ ವಿರೋಧ ಅಜಿತ್ ಜೋಗಿ ಜೊತೆ ಬಿಎಸ್‍ಪಿ ಪರಮೋಚ್ಚ ನಾಯಕಿ ಕೈಜೋಡಿಸಿರುವುದು ಕಾಂಗ್ರೆಸ್‍ಗೆ ಮುಖಭಂಗವಾಗಿದೆ.

ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಎಸ್‍ಪಿ-ಜನತಾ ಕಾಂಗ್ರೆಸ್ ಛತ್ತೀಸ್‍ಗಡ್ ಸಖ್ಯದ ಬಗ್ಗೆ ಮಾಯಾವತಿ ವಿವರ ನೀಡಿದರು. ಛತ್ತೀಸ್‍ಗಢದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‍ಪಿ 35 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಅಜಿತ್ ನೇತೃತ್ವದ ಜೆಸಿಸಿ 55 ಕ್ಷೇತ್ರಗಳಲ್ಲಿ ಅಖಾಡಕ್ಕೆ ಇಳಿಯ ಲಿದೆ. ಅಜಿತ್ ಜೋಗಿ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಘೋಷಿಸಿದರು.

ಜೋಗಿ 2000-2003 ಅವಧಿಯಲ್ಲಿ ಛತ್ತೀಸ್‍ಗಢ ಮುಖ್ಯಮಂತ್ರಿ ಯಾಗಿದ್ದು. ನಂತರ ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದು, ಬಂಡಾಯ ಕಹಳೆ ಮೊಳಗಿಸಿದ್ದರು. ತರುವಾಯ ಜನತಾ ಕಾಂಗ್ರೆಸ್ ಛತ್ತೀಸ್‍ಗಢ್ ಪಕ್ಷ ಸ್ಥಾಪಿಸಿ ರಾಜಕೀಯ ರಂಗದಲ್ಲಿ ಹೊಸ ದಾಳ ಹಾಕಿದ್ದರು.

Facebook Comments

Sri Raghav

Admin