ಮಾರಣಾಂತಿಕ ಗಂಟಲು ಮಾರಿಗೆ 12 ಮಕ್ಕಳು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

12-Chindren--01
ನವದೆಹಲಿ, ಸೆ. 21(ಪಿಟಿಐ)- ಮಾರಣಾಂತಿಕ ಗಂಟಲು ಮಾರಿ ರೋಗ ನವದೆಹಲಿಯಲ್ಲಿ ವ್ಯಾಪಿಸಿದ್ದು 13 ದಿನಗಳಲ್ಲಿ 12 ಮಕ್ಕಳು ಬಲಿಯಾಗಿದ್ದಾರೆ.
ರಾಜಧಾನಿಯ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಹಲವಾರು ರೋಗಿಗಳ ಪೈಕಿ 12 ಮಂದಿ ದುರಂತ ಸಾವನ್ನಪ್ಪಿದ್ದಾರೆ. ಬ್ಯಾಕ್ಟೀರಿಯಾ ಸೋಂಕಿನಿಂದ ಉಂಟಾಗುವ ಗಂಟಲುಮಾರಿಗೆ ಚಿಕಿತ್ಸೆ ಪಡೆಯಲು ದಾಖಲಾಗಿದ್ದ ರೋಗಿಗಳಲ್ಲಿ ಕಳೆದ 13 ದಿನಗಳಲ್ಲಿ 12 ಮಂದಿ ಸಾವನ್ನಪ್ಪಿರುವುದು ಎಚ್ಚರಿಕೆಯ ಗಂಟೆಯಾಗಿದೆ.

ಉತ್ತರ ದೆಹಲಿಯಲ್ಲಿರುವ ಮಹರ್ಷಿ ವಾಲ್ಮೀಕಿ ಆಸ್ಪತ್ರೆಯಲ್ಲೇ 11 ಮಕ್ಕಳು ಸಾವಿಗೀಡಾಗಿದ್ದರೆ, ಲೋಕನಾಯಕ ಆಸ್ಪತ್ರೆಯಲ್ಲಿ ಒಂದು ಮಗು ಜೀವ ಕಳೆದುಕೊಂಡಿದೆ.

ಕಳೆದ ಒಂದು ವರ್ಷದಲ್ಲಿ 300ಕ್ಕೂ ಹೆಚ್ಚು ಮಂದಿಗೆ ಗಂಟಲು ಮಾರಿ ಕಾಣಿಸಿಕೊಂಡಿದ್ದು 85 ಮಂದಿ ವಾಲ್ಮೀಕಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಗಂಟಲು ಮಾರಿ ದೆಹಲಿಯಲ್ಲಿ ಸಾವಿನ ಗಂಟೆ ಬಾರಿಸುತ್ತಿದ್ದರೂ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ರೋಗಕ್ಕೆ ಬಲಿಯಾದವರ ಸಂಖ್ಯೆ ಕಡಿಮೆ ಎನ್ನುತ್ತಾರೆ ವಾಲ್ಮೀಕಿ ಆಸ್ಪತ್ರೆಯ ಆರೋಗ್ಯಾಧಿಕಾರಿ ಎಸ್.ಕೆ. ಗುಪ್ತಾ.

ಮೃತಪಟ್ಟಿರುವ 12 ಮಂದಿ ಬಹುತೇಕ ಉತ್ತರ ಪ್ರದೇಶಕ್ಕೆ ಸೇರಿದವರು. ಇವರಲ್ಲಿ ಒಬ್ಬ ಬಾಲಕ ಮಾತ್ರ ದೆಹಲಿ ನಿವಾಸಿಯಾಗಿದ್ದಾನೆ. ವಿಶ್ವ ರೋಗ ನಿವಾರಣೆ ದಿನಾಚರಣೆ ಅಂಗವಾಗಿ ಸರ್ಕಾರ ಗಂಟಲು ಮಾರಿಗೆ ಉಚಿತ ಚಿಕಿತ್ಸೆ ನೀಡುತ್ತಿದೆ. 1.5 ತಿಂಗಳು, 2.5 ತಿಂಗಳು ಹಾಗೂ 3.5 ತಿಂಗಳಿಗೊಮ್ಮೆ ಮೂರು ಡೋಸ್‍ಗಳ ಚಿಕಿತ್ಸೆ ಅಗತ್ಯ.

Facebook Comments

Sri Raghav

Admin