ಇಂಡಿಗೋ ಬಸ್‍ನಲ್ಲಿ ಬೆಂಕಿ, ಬಚಾವಾದ್ರು 50 ಪ್ರಯಾಣಿಕರು..!

ಈ ಸುದ್ದಿಯನ್ನು ಶೇರ್ ಮಾಡಿ

Indiago-bus--01
ಚೆನ್ನೈ, ಸೆ.21- ಪ್ರಯಾಣಿಕರ ಸುರಕ್ಷತೆ ವಿಚಾರದಲ್ಲಿ ಟೀಕೆಗೆ ಗುರಿಯಾಗಿರುವ ಇಂಡಿಗೋ ಏರ್‍ಲೈನ್ಸ್ ಸಂಸ್ಥೆಗೆ ಮತ್ತೆ ಇರಿಸುಮುರಿಸು ಉಂಟಾಗುವಂಥ ಘಟನೆ ನಿನ್ನೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಇಂಡಿಗೋ ಏರ್‍ಲೈನ್ಸ್ ಸಂಸ್ಥೆಗೆ ಸೇರಿದ ಬಸ್ಸೊಂದರಲ್ಲಿ ನಿನ್ನೆ ಬೆಂಕಿ ಕಾಣಿಸಿಕೊಂಡು 50 ಜನ ಪ್ರಯಾಣಿಕರು ಪರಾದ ಘಟನೆ ವರದಿಯಾಗಿದೆ. ವಿಮಾನವೊಂದರಿಂದ ಪ್ರಯಾಣಿಕರನ್ನು ಕರೆತರಲು ಆಗಮಿಸಿದ್ದ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿತು.

ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿ, ಪ್ರಯಾಣಿಕರನ್ನು ರಕ್ಷಿಸಿದರು ಎಂದು ಏರ್ ಪೋರ್ಟ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 50 ಪ್ರಯಾಣಿಕರಿದ್ದ ಇಂಡಿಗೋ ಬಸ್ ವಿಮಾನ ಬರುತ್ತಿದ್ದ ಸ್ಥಳದ ಬಳಿ ಚಲಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿತು. ಬಸ್ಸಿನ ಮುಂಭಾಗಕ್ಕೆ ಹಾನಿಯಾಗಿದೆ.

ದೇಶದ ಮುಂಚೂಣಿಯಲ್ಲಿರುವ ಇಂಡಿಗೋ ಏರ್‍ಲೈನ್ಸ್ ಸಂಸ್ಥೆಯ ವಿಮಾನಗಳಲ್ಲಿ ದೋಷಗಳು ಕಂಡುಬರುತ್ತಿರುವ ಬೆನ್ನಲ್ಲೇ ಆ ಸಂಸ್ಥೆಗೆ ಸೇರಿದ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದೆ. ಮೊನ್ನೆ ಮುಂಬೈನಿಂದ ಬರುತ್ತಿದ್ದ 185 ಪ್ರಯಾಣಿಕರಿದ್ದ ಇಂಡಿಗೋ ಏರ್‍ಲೈನ್ಸ್ ವಿಮಾನ ಚಕ್ರ ಸ್ಫೋಟಗೊಂಡು ಅಹಮದಾಬಾದ್‍ನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆಯೂ ನಡೆದಿತ್ತು.

Facebook Comments

Sri Raghav

Admin