ವಿಶ್ವಾದ್ಯಂತ ಶ್ರದ್ಧಾ-ಭಕ್ತಿಯಿಂದ ಮೊಹರಂ ಆಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

muharram

ನವದೆಹಲಿ, ಸೆ.21-ಭಾರತ ಸೇರಿದಂತೆ ವಿಶ್ವಾದ್ಯಂತ ಇಂದು ಮೊಹರಂ ಕಡೆ ದಿನವನ್ನು(ಅಶುರಾ) ಮುಸ್ಲಿಂ ಬಾಂಧವರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು. ಇಸ್ಲಾಮಿಕ್ ಪಂಚಾಂಗದಲ್ಲಿ ಮೊಹರಂ ಪವಿತ್ರ ಮಾಸದ 10ನೇ ದಿನವನ್ನು ಅಶುರಾವನ್ನಾಗಿ ಆಚರಿಸಲಾಗುತ್ತದೆ.

ಪ್ರವಾದಿ ಮಹಮದ್ ಅವರ ಮೊಮ್ಮಗ ಹುಸೈನ್ ಇಬ್ನ್ ಅಲಿ(ಇಮಾಮ್ ಹುಸೇನ್) ಕರ್ಬಾಲಾದಲ್ಲಿ ನಡೆದ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ದಿನವನ್ನು ಮೊಹಂ ಕಡೆ ದಿನವನ್ನಾಗಿ ಆಚರಿಲಾಗುತ್ತದೆ. ಇದನ್ನು ಝಿಯಾರತ್ ಅಶುರಾ ದಿನ ಎಂದೂ ಸಹ ಕರೆಯಲಾಗುತ್ತದೆ. ಇದನ್ನು ಹುಸೇನ್ ಮತ್ತು ಅವರ ಕುಟುಂಬದವರು ತ್ಯಾಗ ಮತ್ತು ಬಲಿದಾನದ ಹುತಾತ್ಮ ದಿನವನ್ನಾಗಿ ಆಚರಿಸುವ ಸಂಪ್ರದಾಯವೂ ಇದೆ.

ವಿಶ್ವದ ವಿವಿಧ ದೇಶಗಳಲ್ಲಿರುವ ಸುನ್ನಿ ಮತ್ತು ಶಿಯಾ ಈ ಎರಡು ಪಂಥಗಳ ಮುಸ್ಲಿಮರು ಮೊಹರಂ ಕಡೆ ದಿನವನ್ನು ಶ್ರದ್ಧಾ-ಭಕ್ತಿಗಳಿಂದ ಆಚರಿಸುತ್ತಾರೆ. ಶಿಯಾ ಮುಸ್ಲಿಮರು ಕರ್ಬಾಲಾ ಸಂಗ್ರಾಮಕ್ಕೆ ಶೋಕ ಆಚರಿಸಿದರೆ, ಸುನ್ನಿ ಪಂಥದವರು ಪ್ರವಾದಿ ಮಹಮದ್ ಅವರ ಮೊಮ್ಮಗನ ಗೌರವಾರ್ಥ ಉಪವಾಸ ಮಾಡುತ್ತಾರೆ. ಇದು ಮುಸ್ಲಿಮ್ ಬಾಂಧವರಿಗೆ ಶೋಕಾಚರಣೆ ದಿನ.

ಈ ವರ್ಷ ಸೆಪ್ಟೆಂಬರ್ 12ರಿಂದ ಮೊಹರಂ ಆಚರಣೆ ಆರಂಭವಾಗಿದ್ದು, ಇಂದು 10ನೇ ದಿನ. ಆಕ್ಟೋಬರ್ 9ರವರೆಗೂ ಈ ಆಚರಣೆ ಮುಂದುವರಿಯುತ್ತದೆ.

Facebook Comments

Sri Raghav

Admin