ವಿಯೆಟ್ನಾಂ ಅಧ್ಯಕ್ಷ ಟ್ರಾನ್ ಡೈ ಕ್ವಾಂಗ್ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Viatnam--01

ಹನೋಯ್, ಸೆ.21 (ಪಿಟಿಐ)- ವಿಯೆಟ್ನಾಂ ರಾಷ್ಟ್ರಾಧ್ಯಕ್ಷ ಟ್ರಾನ್ ಡೈ ಕ್ವಾಂಗ್ ಇಂದು ಬೆಳಗ್ಗೆ ನಿಧನರಾದರು. ಅವರಿಗೆ 61 ವರ್ಷ ವಯಸ್ಸಾಗಿತ್ತು. ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶುಕ್ರವಾರ ರಾಜಧಾನಿ ಹನೋಯ್‍ನ 108 ಮಿಲಿಟರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ವಿಯೆಟ್ನಾಂ ಅಧಿಕೃತ ವಾರ್ತಾ ಸಂಸ್ಥೆ ತಿಳಿಸಿದೆ.

ಕಳೆದ ವರ್ಷ ಕಮ್ಯೂನಿಸ್ಟ್ ರಾಷ್ಟ್ರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಥಮ ಬಾರಿ ಭೇಟಿ ನೀಡಿದ್ದ ವೇಳೆ ಕ್ವಾಂಗ್ ರಾಜಾತಿಥ್ಯ ನೀಡಿದ್ದರು. ಕಳೆದ ಬುಧವಾರ ಆಡಳಿತಾರೂಢ ಕಮ್ಯೂನಿಸ್ಟ್ ಪಾರ್ಟಿಯ ಪಾಲಿಟ್‍ಬ್ಯೂರೋ ಸಭೆ ಹಾಗೂ ಚೀನಾ ನಿಯೋಗದ ಕಾರ್ಯಕ್ರಮವೊಂದರಲ್ಲಿ ಅವರು ಭಾಗವಹಿಸಿದ್ದರು.

ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಿರಲಿಲ್ಲ. ಇದು ಅವರ ಆರೋಗ್ಯದ ಬಗ್ಗೆ ಅನೇಕ ಊಹಾಪೋಹಾಗಳನ್ನು ಸೃಷ್ಟಿಸಿತ್ತು. ಭದ್ರತಾ ಪಡೆ ಅಧಿಕಾರಿಯಾಗಿದ್ದ ಅವರು 2016ರ ಏಪ್ರಿಲ್‍ನಲ್ಲಿ ವಿಯೆಟ್ನಾಂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

Facebook Comments

Sri Raghav

Admin