ಇಬ್ಬರು ಬೈಕ್ ಕಳ್ಳರ ಸೆರೆ, 27 ದ್ವಿಚಕ್ರ ವಾಹನ ವಶ

ಈ ಸುದ್ದಿಯನ್ನು ಶೇರ್ ಮಾಡಿ

PBike--01

ಬೆಂಗಳೂರು, ಸೆ.22- ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ದ್ವಿಚಕ್ರ ವಾಹನ ಕಳ್ಳತನದಲ್ಲಿ ತೊಡಗಿದ್ದ ತುಮಕೂರು ಮೂಲದ ಇಬ್ಬರು ಆರೋಪಿಗಳನ್ನು ಜಾಲಹಳ್ಳಿ ಠಾಣೆ ಪೊಲೀಸರು ಬಂಧಿಸಿ 9 ಲಕ್ಷ ಬೆಲೆಬಾಳುವ ವಿವಿಧ ಕಂಪೆನಿಯ 27 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.  ನಿರಂಜನ್ (18) ಮತ್ತು ನಿತಿನ್‍ಕುಮಾರ್ (18) ಬಂಧಿತ ಆರೋಪಿಗಳು.

ಬಿಎಲ್ ಸರ್ಕಲ್ ಬಳಿ ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ಅನುಮಾನಾಸ್ಪದವಾಗಿ ನಿಂತಿದ್ದ ನಿರಂಜನ್ ಎಂಬಾತನನ್ನು ವಿಚಾರಿಸಿದಾಗ ಬೈಕ್ ಕಳ್ಳತನ ಮಾಡಿರುವುದು ತಿಳಿದುಬಂದ ಮೇರೆಗೆ ಠಾಣೆಗೆ ಕರೆದೊಯ್ದು ಜಾಲಹಳ್ಳಿ ಠಾಣೆ ಪೊಲೀಸರು ವಿಚಾರಣೆ ನಡೆಸಿದಾಗ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ನಿತಿನ್‍ನನ್ನು ಬಂಧಿಸಿದ್ದಾರೆ.

ನಿರಂಜನ್ ಪಿಯುಸಿ ಹಾಗೂ ನಿತಿನ್ ಡಿಪ್ಲಮೋ ಆಟೋ ಮೊಬೈಲ್ ಓದುತ್ತಿದ್ದು, ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ದುಶ್ಚಟಕ್ಕಾಗಿ ಕಳ್ಳತನ ರೂಢಿಸಿಕೊಂಡಿದ್ದರು. ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್‍ಲಾಕ್ ಮುರಿದು ವಯರ್ ಕಟ್ ಮಾಡಿ ಬೈಕ್ ಕಳ್ಳತನ ಮಾಡುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.

ಆರೋಪಿಗಳ ಬಂಧನದಿಂದ ತುಮಕೂರು ನಗರದ 3 ಪ್ರಕರಣ, ಹೊಸಬಡಾವಣೆಯ-3, ತುಮಕೂರಿನ ಜಯನಗರದ ಒಂದು ಪ್ರಕರಣ, ಶಿರಾ-ಒಂದು, ನೆಲಮಂಗಲ ಟೌನ್-3, ಮಾದನಾಯಕನಹಳ್ಳಿ-3, ಸೋಲದೇವನಹಳ್ಳಿ-2, ಮಲ್ಲೇಶ್ವರಂ- ಹಲಗೂರು ವ್ಯಾಪ್ತಿಯ ತಲಾ ಒಂದು ಪ್ರಕರಣ ಸೇರಿ ಒಟ್ಟು 18 ದ್ವಿಚಕ್ರ ವಾಹನ ಪ್ರಕರಣಗಳು ಪತ್ತೆಯಾಗಿವೆ. ಪ್ರಕರಣದ ಪೈಕಿ 9 ವಾಹನಗಳ ವಾರಸುದಾರರನ್ನು ಪತ್ತೆ ಮಾಡಬೇಕಾಗಿದೆ.

Facebook Comments

Sri Raghav

Admin