ಕಟ್ಟಡದಿಂದ ಹಾರಿ ಕಂಪ್ಯೂಟರ್ ಆಪರೇಟರ್ ಸಾವು

ಈ ಸುದ್ದಿಯನ್ನು ಶೇರ್ ಮಾಡಿ
ಸಾಂದರ್ಭಿಕ
ಸಾಂದರ್ಭಿಕ

ಬೆಂಗಳೂರು, ಸೆ.22-ಕಟ್ಟಡವೊಂದರ ಮೂರನೆ ಮಹಡಿಯಿಂದ ಹಾರಿ ಕಂಪ್ಯೂಟರ್ ಆಪರೇಟರ್ ಸಾವನ್ನಪ್ಪಿರುವ ಘಟನೆ ಭಾರತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೆಣ್ಣೂರು ನಿವಾಸಿ ಶಮಿನ್ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಇವರು ಮಾರ್ಕೆಟಿಂಗ್ ಕಂಪೆನಿಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.

ನಿನ್ನೆ ಬೆಳಗ್ಗೆ ಎಎಂ ರಸ್ತೆಯಲ್ಲಿನ ಗ್ರೀನ್ ಕ್ಯಾಸೆಲ್ ಕಟ್ಟಡದ ಮೂರನೆ ಮಹಡಿಯಿಂದ ಹಾರಿ ಇವರು ಗಂಭೀರ ಗಾಯಗೊಂಡಿದ್ದರು. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಸಂಜೆ ಮೃತಪಟ್ಟಿದ್ದಾರೆ. ಭಾರತಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Facebook Comments

Sri Raghav

Admin