ಇಂದು ರಾಜ್ಯದಲ್ಲಿ ನಡೆದ ರಾಜಕೀಯ ಬೃಹನ್ನಾಟಕದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Politics--01

ಬೆಂಗಳೂರು. ಸೆ.22 ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್‍ನ ಅತೃಪ್ತ ಶಾಸಕರು ಪಕ್ಷದ ವಿರುದ್ಧ ಸೆಡ್ಡು ಹೊಡೆದಿದ್ದು, ಕೆಲವರು ರೆಸಾರ್ಟ್‍ನತ್ತ ಮುಖ ಮಾಡಿರುವುದರಿಂದ ದೋಸ್ತಿ ಸರ್ಕಾರದ ಭವಿಷ್ಯ ಡೋಲಾಯಮಾನವಾಗಿದೆ. ಶನಿವಾರ ನಡೆದ ಹಠಾತ್ ವಿದ್ಯಮಾನದಲ್ಲಿ ಕಾಂಗ್ರೆಸ್‍ನ ಶಾಸಕರಾದ ಡಾ.ಸುಧಾಕರ್(ಚಿಕ್ಕಬಳ್ಳಾಪುರ), ಎಂ.ಟಿ.ಬಿ.ನಾಗರಾಜ್(ಹೊಸಕೋಟೆ) ಹಾಗೂ ಪಕ್ಷೇತರ ಶಾಸಕ ನಾಗೇಶ್ (ಮುಳಬಾಗಿಲು) ಅವರುಗಳು ಯಾರಿಗೂ ತಿಳಿಯದಂತೆ ರಹಸ್ಯ ಸ್ಥಳಕ್ಕೆ ತೆರಳಿರುವುದು ಆಪರೇಷನ್ ಕಮಲಕ್ಕೆ ಮುನ್ನುಡಿ ಬರೆದಂತೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಕಾಂಗ್ರೆಸ್‍ನ 13 ಶಾಸಕರು ಪಕ್ಷದ ವಿರುದ್ಧ ಭಿನ್ನಮತ ಸಾರಿದ್ದು, ಚೆನ್ನೈ, ಮುಂಬೈ ಸೇರಿದಂತೆ ಬೇರೆ ಬೇರೆ ಕಡೆ ಇವರೆಲ್ಲರೂ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇನ್ನೂ ಕೆಲವು ಶಾಸಕರು ತಡರಾತ್ರಿ ಮುಂಬೈಗೆ ಹೊರಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಅಲ್ಲಿಗೆ ಮತ್ತೆ ರಾಜ್ಯದಲ್ಲಿ ರೆಸಾರ್ಟ್‌ ರಾಜಕಾರಣ ಪ್ರಾರಂಭವಾಗುತ್ತಿರುವ ಮುನ್ಸೂಚನೆ ಕಾಣುತ್ತಿದೆ. ಇನ್ನೆರಡು ದಿನಗಳಲ್ಲಿ ಮೈತ್ರಿ ಸರ್ಕಾರ ಬಿದ್ದು, ಹೊಸ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ ಎಂದು ಕೆಲವು ಬಿಜೆಪಿ ಮುಖಂಡರು ಹೇಳುತ್ತಿರುವುದು ರೆಸಾರ್ಟ್‌ ರಾಜಕಾರಣ ಪ್ರಾರಂಭಕ್ಕೆ ಇಂಬು ನೀಡುತ್ತಿದೆ.
ಕಾಂಗ್ರೆಸ್ ಶಾಸಕರು ಮುಂಬೈನ ಜೂಹು ಏರಿಯಾದ ಜೆ.ಡಬ್ಲೂ ಮ್ಯಾರಿಯೇಟ್ ಹೋಟೆಲನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿ ಮೂಲಗಳು ತಿಳಿಸಿವೆ.

ಈ ಬೆಳವಣಿಗೆಯ ನಡುವೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಜಮೀರ್ ಅಹಮದ್ ಶಾಸಕರಾದ ಅನಂದ್ ಸಿಂಗ್, ಭೈರತಿ ಸುರೇಶ್, ಎನ್.ಎ. ಹ್ಯಾರೀಸ್ ಸೇರಿದಂತೆ ಮತ್ತಿತರರು ಸಭೆ ನಡೆಸಿ ಸರ್ಕಾರವನ್ನು ಉಳಿಸಿಕೊಳ್ಳುವ ಬಗ್ಗೆ ಮಾತುಕತೆ ನಡೆಸಿದರು. ಸೋಮವಾರದ ನಂತರ ಯಾವುದೇ ಕ್ಷಣದಲ್ಲಿ ಇವರೆಲ್ಲರೂ ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಶನಿವಾರ ಸದಾಶಿವನಗರದಲ್ಲಿ ಈ ಮೂವರು ಶಾಸಕರು ಮಧ್ಯಾಹ್ನ ಒಂದೇ ಹೊಟೇಲ್‍ನಲ್ಲಿ ಊಟ ಮಾಡಿ ಬಳಿಕ ಮೂವರು ಲಗೇಜ್ ಸಮೇತ ತಮ್ಮ ಕುಟುಂಬ ಸದಸ್ಯರಿಗೆ ಎಲ್ಲಿ ಹೋಗುತ್ತೇವೆ ಎಂಬುದರ ಮಾಹಿತಿಯನ್ನೂ ನೀಡದೆ ಗೌಪ್ಯ ಸ್ಥಳಕ್ಕೆ ತೆರಳಿದ್ದಾರೆ. ಜಾರಕಿಹೊಳಿ ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ವಿರುದ್ಧ 16 ಶಾಸಕರು ಬಂಡಾಯ ಎದ್ದಿದ್ದು, ಈಗಾಗಲೇ 11 ಶಾಸಕರು ಮುಂಬೈನ ಪಂಚತಾರ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇನ್ನು ಆರು ಶಾಸಕರ ಪೈಕಿ ಮೂವರು ಚೆನ್ನೈ ಮೂಲಕ ಮುಂಬೈಗೆ ಪ್ರಯಾಣ ಬೆಳಸಿದ್ದಾರೆ ಎಂದು ರಾಜ್ಯ ಪೊಲೀಸ್ ಇಲಾಖೆಯಿಂದ ಸಿಎಂಗೆ ಮಾಹಿತಿ ನೀಡಿದ್ದಾರೆ.

ಶಾಸಕರ ಚಲನವಲನದ ಮೇಲೆ ಕಣ್ಣಿಟ್ಟಿರುವ ಪೊಲೀಸ್ ಇಲಾಖೆಗೆ ಆರು ಶಾಸಕರ ಚಲನವಲನ ಪತ್ತೆಯಾಗಿದ್ದು, ಈ ಬಗ್ಗೆ ಸಿಎಂಗೆ ಮಾಹಿತಿ ನೀಡಲಾಗಿದೆ. ಈ ಮಾಹಿತಿ ತಿಳಿದು ಚಿಕ್ಕಮಗಳೂರಿನಲ್ಲಿರುವ ಕುಮಾರಸ್ವಾಮಿ ಕಂಗೆಟ್ಟಿದ್ದಾರೆ ಎಂದು ಕೂಡ ತಿಳಿದು ಬಂದಿದೆ. ಏರ್ ಟೆಲ್ ಸೇರಿದಂತೆ ಇತರ ಕಂಪನಿಗಳ ಸಿಮ್ ಇರುವ ಮೊಬೈಲ್ ಟ್ರ್ಯಾಕ್ ಆಗಿದ್ದು, ಬಿಎಸ್ ಎನ್ ಎಲ್ ಸಿಮ್ ಇರುವ ಮೊಬೈಲ್ ಟ್ರ್ಯಾಕಿಂಗ್ ಆಗುತ್ತಿಲ್ಲ ಎಂದು ಪೊಲೀಸರು ಮಾಹಿತಿಗೆ ಲಭ್ಯವಾಗಿದೆ. ‘ ಮತ್ತೊಂದೆಡೆ ಇನ್ನಷ್ಟು ಅತೃಪ್ತ ಶಾಸಕರು ಕಾಂಗ್ರೆಸ್‍ಗೆ ಕೈ ಕೊಡಲು ಸಿದ್ದರಾಗಿದ್ದು, ಯಾವುದೇ ಕ್ಷಣದಲ್ಲೂ ಅವರು ಕೂಡ ರಹಸ್ಯ ಸ್ಥಳಕ್ಕೆ ತೆರಳುವ ಸಂಭವವಿದೆ ಎಂದು ತಿಳಿದು ಬಂದಿದೆ.

ಏರ್ ಟೆಲ್ ಸೇರಿದಂತೆ ಇತರ ಕಂಪನಿಗಳ ಸಿಮ್ ಇರುವ ಮೊಬೈಲ್ ಟ್ರ್ಯಾಕ್ ಆಗಿದ್ದು, ಬಿಎಸ್ ಎನ್ ಎಲ್ ಸಿಮ್ ಇರುವ ಮೊಬೈಲ್ ಟ್ರ್ಯಾಕಿಂಗ್ ಆಗುತ್ತಿಲ್ಲ ಎಂದು ಪೊಲೀಸರು ಮಾಹಿತಿಗೆ ಲಭ್ಯವಾಗಿದೆ. ಮತ್ತೊಂದೆಡೆ ಇನ್ನಷ್ಟು ಅತೃಪ್ತ ಶಾಸಕರು ಕಾಂಗ್ರೆಸ್‍ಗೆ ಕೈ ಕೊಡಲು ಸಿದ್ದರಾಗಿದ್ದು, ಯಾವುದೇ ಕ್ಷಣದಲ್ಲೂ ಅವರು ಕೂಡ ರಹಸ್ಯ ಸ್ಥಳಕ್ಕೆ ತೆರಳುವ ಸಂಭವವಿದೆ ಎಂದು ತಿಳಿದು ಬಂದಿದೆ. ಸಚಿವ ಸ್ಥಾನ ನೀಡದಿದ್ದರೆ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಅಥವಾ ಪಕ್ಷ ಬದಲಾವಣೆ ಮಾಡುವಂತೆ ಕಾರ್ಯಕರ್ತರು ಸೂಚಿಸಿದರೆ ಅದಕ್ಕೆ ಸಿದ್ಧ ಎಂದು ಈ ಹಿಂದೆ ಎಂಟಿಬಿ ನಾಗರಾಜ್ ತಿಳಿಸಿದ್ದರು. ಬಳಿಕ ಸರ್ಕಾರದ ವಿರುದ್ದ ಬಂಡಾಯವೆದ್ದಿದ್ದ ಜಾರಕಿಹೊಳಿ ಸಹೋದರರು ಮುಖ್ಯಮಂತ್ರಿ ಕುಮಾರಸ್ವಾಮಿ ಮಾತುಕತೆ ಬಳಿಕ ತಣ್ಣಗಾಗಿದ್ದಾರೆ ಎಂದು ಪರಿಸ್ಥಿತಿಯನ್ನು ಅವಲೋಕಿಸಲಾಗಿತ್ತು. ಆದರೆ ಈಗ ಇವರ ನಡೆ ಗಮನಿಸಿದರೆ ಅತೃಪ್ತ ನಾಯಕರ ಬಂಡಾ ಇನ್ನು ಶಮನವಾಗಿಲ್ಲ ಎಂಬುದು ಕಾಣುತ್ತಿದೆ. ಹೈಕಮಾಂಡ್ ಭೇಟಿ, ರಾಜ್ಯ ನಾಯಕರ ಮಾತುಕತೆ ಬಳಿಕವೂ ಶಾಸಕರು ಮತ್ತೆ ಅತೃಪ್ತಿ ಹೊರಹಾಕಿರುವುದು ನೋಡಿದರೆ ಬಿಜೆಪಿ ಹಿಂಬಾಗಿಲಿನ ಕಾರ್ಯಚಾರಣೆ ನಡೆಸಿದೆ ಎನ್ನಲಾಗಿದ್ದು, ಅತೃಪ್ತ ಶಾಸಕರ ನಡೆ ತೀವ್ರ ಕುತೂಹಲವನ್ನು ಕೆರಳಿಸಿದೆ.

# ಶಾಸಕರ ಮೇಲೆ ಹೈ ಅಲರ್ಟ್:
ಇನ್ನು ಶಾಸಕರು ಕೈ ಕೊಡಬಹುದೆಂಬ ಭೀತಿಗೊಳಗಾಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎರಡೂ ಪಕ್ಷಗಳ ಶಾಸಕರ ಮೇಲೆ ಹದ್ದಿನ ಕಣ್ಣಿಡಲು ಗುಪ್ತಚರ ವಿಭಾಗಕ್ಕೆ ಸೂಚಿಸಿದ್ದಾರೆ. ಶನಿವಾರ ಶೃಂಗೇರಿಯಲ್ಲಿದ್ದರೂ ಅವರ ಗಮನ ಮಾತ್ರ ಬೆಂಗಳೂರಿನತ್ತಲೇ ಇತ್ತು. ಯಾವ ಶಾಸಕರು ಎಲ್ಲಿ ಸಭೆ ನಡೆಸುತ್ತಿದ್ದಾರೆ ಎಂಬ ಬಗ್ಗೆ ಗುಪ್ತಚರ ವಿಭಾಗದ ಮುಖ್ಯಸ್ಥರಿಂದ ಪ್ರತಿಕ್ಷಣವೂ ಮಾಹಿತಿ ಪಡೆಯುತ್ತಿದ್ದರು. ಶಾರದಾಂಬೆ ದರ್ಶನ ಮುಗಿಸಿಕೊಂಡು ಹೊರಬಂದ ಸಂದರ್ಭದಲ್ಲಿ ಅಚಾನಕ್ಕಾಗಿ ಬಂದ ದೂರವಾಣಿ ಕರೆ ಸ್ವೀಕರಿಸಿ ಮಾತನಾಡಿದ ನಂತರ ಮೊಗದಲ್ಲಿ ಕಳೆ ಕಟ್ಟಿರಲಿಲ್ಲ. ತಕ್ಷಣವೇ ಜಾಗೃತರಾದ ಅವರು ಗುಪ್ತಚರ ವಿಭಾಗದ ಮುಖ್ಯಸ್ಥರಿಗೆ ಸೂಚನೆ ಕೊಟ್ಟು ವಿಮಾನ ನಿಲ್ದಾಣ ಹಾಗೂ ಹೊರರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಚೆಕ್‍ ಪೋಸ್ಟ್ ಗಳಲ್ಲಿ ಶಾಸಕರ ಚಲನವಲನಗಳ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಸೂಚಿಸಿದರು.

ಆ ವೇಳೆಗಾಗಲೇ ಕೆಲ ಶಾಸಕರು ಬೆಂಗಳೂರು ಬಿಟ್ಟು ರಹಸ್ಯ ಸ್ಥಳಕ್ಕೆ ತೆರಳಿದ್ದರು. ಸದ್ಯಕ್ಕೆ ಅತೃಪ್ತಗೊಂಡಿರುವ ಶಾಸಕರ ಮೇಲೆ ಹದ್ದಿನ ಕಣ್ಣಿಡುವಂತೆ ಸಿಎಂ ಗುಪ್ತಚರ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಶಾಸಕರು ಪಕ್ಷ ಬಿಟ್ಟು ಹೋಗದಂತೆ ತಡೆಯಲು ಇದೇ ತಿಂಗಳ 25ಕ್ಕೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶಾಸಕರ ಸಭೆ ಕರೆದಿದ್ದಾರೆ. ಒಟ್ಟಿನಲ್ಲಿ ರಾಜ್ಯ ರಾಜಕೀಯ ವಿದ್ಯಮಾನಗಳು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಕ್ಷಿಪ್ರ ಬದಲಾವಣೆ ಸಾಧ್ಯವಾಗಬಹುದು.

# ಸರ್ಕಾರ ಬೀಳಿಸಿಯೇ ಸಿದ್ದ
ರಾಜ್ಯ ರಾಜಕೀಯ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ. ದೋಸ್ತಿ ಪಕ್ಷಗಳು ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಸಾಹಸ ಪಡುತ್ತಿದ್ದರೆ, ಸರ್ಕಾರ ಉರುಳಿಸಿ ತೀರಿಯೇ ಸಿದ್ಧ ಎಂದು ಬಿಜೆಪಿ ಟೊಂಕ ಕಟ್ಟಿ ನಿಂತಿದೆ.ಹಲವು ಏಳು-ಬೀಳುಗಳ ನಡುವೆಯೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸರ್ಕಾರ ರಚಿಸುವ ಆಸೆಯನ್ನು ಇನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಶನಿವಾರ ಕೂಡ ತಮ್ಮ ನಿವಾಸದಲ್ಲಿ ಬಿರುಸಿನ ಚಟುವಟಿಕೆ ನಡೆಸಿದ ಬಿಎಸ್‍ವೈ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಶೋಭಾ ಕರಂದ್ಲಾಜೆ, ಸಿಸಿ ಪಾಟೀಲ್ ಹಾಗೂ ಶಾಸಕರು ಭಾಗಿಯಾಗಿದ್ದು, ಇನ್ನು ಎರಡು ಮೂರು ದಿನದಲ್ಲಿ ಕಾಂಗ್ರೆಸ್‍ನಿಂದ ಕನಿಷ್ಠ 18 ಶಾಸಕರು ರಾಜೀನಾಮೆ ನೀಡಿ, ಬಿಜೆಪಿಗೆ ಬರಲು ತಯಾರಿದ್ದಾರೆ. ಕೇಂದ್ರ ನಾಯಕರೇ ನೇರವಾಗಿ ಕಾಂಗ್ರೆಸ್ ನ ಅತೃಪ್ತ ಶಾಸಕರ ಸಂಪರ್ಕದಲ್ಲಿದ್ದಾರೆ. ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಬಿಜೆಪಿ ಶಾಸಕರಿಗೆ ಯಡಿಯೂರಪ್ಪ ಹೇಳಿದ್ದಾರೆ ಎನ್ನಲಾಗಿದೆ.
ಇನ್ನು ಎರಡು, ಮೂರು ದಿನದಲ್ಲಿ ರಾಜ್ಯ ರಾಜಕೀಯದಲ್ಲಿ ಯಾವ ಬದಲಾವಣೆ ಬೇಕಾದರೂ ನಡೆಯಬಹುದು. ಹೀಗಾಗಿ ಪಕ್ಷದ ಯಾವ ಶಾಸಕರು ಕ್ಷೇತ್ರ ಬಿಟ್ಟು ಎಲ್ಲೂ ಹೋಗದಂತೆ ಬಿಎಸ್‍ವೈ ಸೂಚನೆ ನೀಡಿದ್ದಾರೆ.

ಯಾವುದೇ ಸಂದರ್ಭದಲ್ಲಿ ನಿಮಗೆ ದೂರವಾಣಿ ಕರೆ ಬರಬಹುದು. ತಕ್ಷಣ ಬೆಂಗಳೂರಿಗೆ ಬರಬೇಕಾಗುತ್ತದೆ. ಹೀಗಾಗಿ ಹೊರ ರಾಜ್ಯ ಅಥವಾ ದೇಶಗಳಿಗೆ ಹೋಗದಂತೆ ಶಾಸಕರಿಗೆ ಸೂಚನೆ ನೀಡಲಾಗಿದೆ. ಸೋಮವಾರದ ನಂತರ ಪ್ರತಿ ಕ್ಷಣವೂ ಬಹಳ ಮುಖ್ಯ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನೀವೆಲ್ಲ ಬದ್ಧರಾಗುತ್ತೀರೆಂಬ ನಂಬಿಕೆ ಇದೆ. ಮಹತ್ವದ ಬೆಳವಣಿಗೆ ಆಗುವ ಸಾಧ್ಯತೆ ಇದೆ. ಹೀಗಾಗಿ ನಿಮ್ಮ ಸಹಕಾರ ಅತಿಮುಖ್ಯ ಎಂದು ಬಿಎಸ್ ವೈ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

# 18 ಶಾಸಕರ ರಾಜೀನಾಮೆ..?
ಇತ್ತ ಡಾಲರ್ಸ್ ಕಾಲೋನಿಯ ದವಳಗೆರೆ ನಿವಾಸದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಬಿರುಸಿನ ಚಟುವಟಿಕೆಗಳು ನಡೆದವು. ತಮ್ಮ ಆಪ್ತರಾದ ಎಂ.ಪಿ.ರೇಣುಕಾಚಾರ್ಯ, ಆಯನೂರು ಮಂಜುನಾಥ್, ಸಿ.ಸಿ.ಪಾಟೀಲ್, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಮತ್ತಿತರ ಜೊತೆ ರಹಸ್ಯ ಮಾತುಕತೆ ನಡೆಸಿದರು. ಸೋಮವಾರದ ವೇಳೆಗೆ ಎಲ್ಲ ಶಾಸಕರಿಗೂ ಶುಭ ಸುದ್ದಿ ಸಿಗಲಿದೆ. ಕಾಂಗ್ರೆಸ್‍ನ 18 ಶಾಸಕರು ರಾಜೀನಾಮೆ ನೀಡಲಿದ್ದಾರೆ.

ಯಾವುದೇ ಕ್ಷಣದಲ್ಲೂ ನಿಮಗೆ ದೂರವಾಣಿ ಕರೆ ಬರಬಹುದು. ಯಾರೊಬ್ಬರೂ ಕ್ಷೇತ್ರ ಬಿಟ್ಟು ಕದಲಬಾರದು. ಶಾಸಕಾಂಗ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಪಕ್ಷದ ನಿಲುವನ್ನು ಬೆಂಬಲಿಸಬೇಕೆಂದು ಎಲ್ಲ ಶಾಸಕರ ಜೊತೆ ಅವರೇ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.ಸಾಧ್ಯವಾದರೆ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಬಿಜೆಪಿ ರೆಸಾರ್ಟ್‍ಗೆ ಕರೆದೊಯ್ಯುವ ಸಾಧ್ಯತೆ ಇದೆ.

# ಯಡಿಯೂರಪ್ಪ ಹೇಳಿದ್ದೇನು..?
ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರುವ ಬೆಳವಣಿಗೆಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ನಾವು ಯಾವೊಬ್ಬ ಶಾಸಕರನ್ನು ಬಿಜೆಪಿಗೆ ಬರುವಂತೆ ಆಹ್ವಾನ ನೀಡಿಲ್ಲ..ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಆರೋಪ ಆಧಾರ ರಹಿತ.

# ಸಿಎಂ ಕುಮಾರಸ್ವಾಮಿ ಹೇಳಿದ್ದೇನು..?
ಸರ್ಕಾರವನ್ನು ಕೆಡವಲು ಬಿಜೆಪಿಯವರು ನಮ್ಮ ಶಾಸಕರಿಗೆ ಯಾವ ಯಾವ ಅಮಿಷಗಳನ್ನು ನೀಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸಲೇ.? ಯಡಿಯೂರಪ್ಪ, ಶೋಭಾಕರದ್ಲಾಂಜೆ,‌ವಿಜೇಯೇಂದ್ರ ಹಾಗೂ ಮೆಗಾಸಿಟಿ ಪಾಲಕರ ಮಾತನಾಡಿರುವುದನ್ನು ಬಿಚ್ಚಿಡುತ್ತೇನೆ.

 

Facebook Comments

Sri Raghav

Admin