ಭಾರೀ ಮಳೆಗೆ ಮೇಲ್ಛಾವಣಿ ಕುಸಿದು ಇಬ್ಬರು ಮಕ್ಕಳ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

2-children

ಅಂಬಾಲ, ಸೆ.22 (ಪಿಟಿಐ)- ಭಾರೀ ಮಳೆಯಿಂದಾಗಿ ಮನೆಯೊಂದರ ಛಾವಣಿ ಕುಸಿತು ಇಬ್ಬರು ಮಕ್ಕಳು ಮೃತಪಟ್ಟು, ಇತರ ನಾಲ್ವರು ಗಾಯಗೊಂಡಿರುವ ಘಟನೆ ಹರ್ಯಾಣದ ಅಂಬಾಲದ ದಿಲೀಪ್‍ಗಢ್ ಪ್ರದೇಶದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.  ಕುಟುಂಬದ ಸದಸ್ಯರು ಮನೆಯಲ್ಲಿ ಮಲಗಿದ್ದಾಗ ಈ ಘಟನೆ ನಡೆದಿದೆ. ಶಿಥಿಲಾವಸ್ಥೆಯಲ್ಲಿದ್ದ ಈ ಮನೆಯ ಛಾವಣಿ ನಿನ್ನೆ ರಾತ್ರಿಯಿಂದ ಸುರಿದ ಭಾರೀ ಮಳೆಯಿಂದ ಇಂದು ಮುಂಜಾನೆ ಕುಸಿಯಿತು. ಈ ದುರ್ಘಟನೆಯಲ್ಲಿ ಶೀತಲ್(15) ಮತ್ತು ಆಕೆಯ ತಮ್ಮ ಹುನ್ನಿ(7) ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ನೆರೆಹೊರೆಯವರು ಕುಟುಂಬದ ಇತರ ನಾಲ್ವರನ್ನು ರಕ್ಷಿಸಿದ್ದಾರೆ. ಗಾಯಗೊಂಡಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Facebook Comments

Sri Raghav

Admin