ನಾನೆಂದೂ ರೆಬಲ್ ಅಲ್ಲ, ಪಕ್ಷ ಬಿಡ್ತೀನಿ ಅಂತಾ ಏನೂ ಹೇಳಿಲ್ಲ : ಕೆ.ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

K-Sudhakar--01

ಬೆಂಗಳೂರು, ಸೆ.23-ನಾನೆಂದೂ ರೆಬಲ್ ಅಲ್ಲ, ನಾನು ಕಾಂಗ್ರೆಸ್‍ನ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಬಿಡುವುದಾಗಿ ಎಲ್ಲೂ ಹೇಳಿಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ದೇವಸ್ಥಾನಕ್ಕೆ ಹೊಸೂರಿಗೆ ಹೋಗಿದ್ದೇನೆ. ಈಗ ಹಿಂತಿರುಗಿದ್ದೇನೆ. ನಾನು ಮೊದಲಿನಿಂದಲೂ ಕಾಂಗ್ರೆಸ್‍ನಲ್ಲೇ ಇದ್ದೇನೆ, ಕಾಂಗ್ರೆಸ್‍ನಲ್ಲೇ ಮುಂದುವರೆಯುತ್ತೇನೆ. ಅಧಿಕಾರದ ಆಸೆಗೆ ಪಕ್ಷ ಬದಲಿಸುವುದಿಲ್ಲ. ನನಗೆ ಬ್ಲ್ಯಾಕ್‍ಮೇಲ್ ಆಗಲಿ, ಯಾವ ಮೇಲ್ ಆಗಲಿ ಗೊತ್ತಿಲ್ಲ. ನನಗೆ ಗೊತ್ತಿರುವುದು ಇ-ಮೇಲ್ ಅಷ್ಟೆ. ನಾನು ಡಾಕ್ಟರ್. ನನಗೆ ಆಪರೇಷನ್ ಮಾಡಲು ಸಾಧ್ಯವಿಲ್ಲ.

ಕ್ಷೇತ್ರ, ಜಿಲ್ಲೆಯ ವಿಚಾರದಲ್ಲಿ ಕೆಲವು ನೋವುಗಳಿವೆ. ಅದನ್ನು ನಮ್ಮ ನಾಯಕರ ಗಮನಕ್ಕೆ ತಂದಿದ್ದೇನೆ. ಸಾಮಥ್ರ್ಯ ನೋಡಿ ಸಚಿವ ಸ್ಥಾನ ನೀಡಲಿ. ಇದೇನು ಭಿಕ್ಷೆ ಬೇಡುವುದಲ್ಲ. ನಮ್ಮ ಸಾಮಥ್ರ್ಯವನ್ನು ನಾಯಕರು ಗುರುತಿಸಲಿ. ಭಿನ್ನಾಭಿಪ್ರಾಯಗಳು ಇರುವುದು ಸಹಜ. ಅದನ್ನು ಈಗಾಗಲೇ ಹೇಳಿದ್ದೇನೆ. ಪಕ್ಷ ಬಿಡುತ್ತೇನೆ ಎಂದು ಹೇಳಿಲ್ಲ. ಪ್ರತಿನಿತ್ಯ ಸಿದ್ದರಾಮಯ್ಯನವರ ಜೊತೆ ಮಾತನಾಡುತ್ತಿರುತ್ತೇನೆ. ನಿರಂತರವಾಗಿ ಅವರ ಸಂಪರ್ಕದಲ್ಲಿದ್ದೇನೆ. ರಾಜಕೀಯವಾಗಿ ಕೆಲವರು ನನಗೆ ತೊಂದರೆ ಕೊಡುತ್ತಿದ್ದಾರೆ. ಇದನ್ನೆಲ್ಲ ನಮ್ಮ ನಾಯಕರ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.

Facebook Comments

Sri Raghav

Admin