ನಟ ದುನಿಯಾ ವಿಜಯ್ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Duniya-Vijay
ಬೆಂಗಳೂರು, ಸೆ.23- ಕಿಡ್ಯಾಪ್ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಅವರನ್ನು ತಡರಾತ್ರಿ ಬಂಧಿಸಲಾಗಿದೆ. ವಸಂತನಗರದ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದ ಬಾಡಿ ಬಿಲ್ಡಿಂಗ್ ಸ್ಪರ್ಧೆ ವೇಳೆ ಜಿಮ್‍ಟ್ರೈನರ್ ಮಾರುತಿಗೌಡ ಅವರು ದುನಿಯಾ ವಿಜಯ ಟೀಮ್ ನಡುವೆ ಜಗಳ ಶುರುವಾಗಿದೆ.

ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ಇದರಿಂದ ಕೋಪಗೊಂಡ ವಿಜಯ್ ಹಾಗೂ ಮಣಿಪ್ರಸಾದ್, ಮಾರುತಿ ಎಂಬುವರನ್ನು ಕಿಡ್ಯಾಪ್ ಮಾಡಿ ಕಾರಿನಲ್ಲಿ ಕರೆದೊಯ್ದು ಮರುತಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ.

ಮಾರುತಿಗೌಡ ಎಂಬುವರು ಈ ಹಿಂದೆ ವಿಜಯ್‍ಗೆ ಜಿಮ್ ಟ್ರೈನರ್ ಆಗಿದ್ದ ಪಾನೀಪುರಿ ಕಿಟ್ಟಿಯ ಅಣ್ಣನ ಮಗ. ಮಾರುತಿ ಚಿಕ್ಕಪ್ಪ ನೀಡಿದ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರು ಹೈಗ್ರೌಂಡ್ಸ್ ಪೋಲೀಸರು ಪ್ರಕರಣ ದಾಖಲಿಸಿಕೊಂಡು ವಿಜಯ್‍ರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Facebook Comments

Sri Raghav

Admin